Connect with us

    ಮಕ್ಕಳ ಆರೋಗ್ಯದ ಕಾಳಜಿಗೆ ಆಸ್ಪತ್ರೆ ನಿರ್ಮಿಸಿದ ಸ್ವಾಮೀಜಿ | ಜಯವಿಭವ ಶ್ರೀಗಳ ಸಾಧನೆ ಸ್ಮರಿಸಿದ ಡಾ.ಬಸವಕುಮಾರ ಸ್ವಾಮೀಜಿ

    ಮುಖ್ಯ ಸುದ್ದಿ

    ಮಕ್ಕಳ ಆರೋಗ್ಯದ ಕಾಳಜಿಗೆ ಆಸ್ಪತ್ರೆ ನಿರ್ಮಿಸಿದ ಸ್ವಾಮೀಜಿ | ಜಯವಿಭವ ಶ್ರೀಗಳ ಸಾಧನೆ ಸ್ಮರಿಸಿದ ಡಾ.ಬಸವಕುಮಾರ ಸ್ವಾಮೀಜಿ

    CHITRADURGA NEWS | 18 MAY 2024
    ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಕ್ರೀಡಾಂಗಣ ಹಾಗೂ ಆಸ್ಪತ್ರೆ ನಿರ್ಮಾಣ ಮಾಡಿದ ಕೀರ್ತಿ ಲಿಂಗೈಕ್ಯ ಶ್ರೀ ಜಯವಿಭವ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸ್ಮರಿಸಿದರು.

    ನಗರದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಜಯವಿಭವ ಮುರುಘರಾಜೇಂದ್ರ ಸ್ವಾಮೀಜಿಯ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ‘ಜಯವಿಭವ ಸ್ವಾಮೀಜಿ ತಮ್ಮ ಕಾಲಾವಧಿಯಲ್ಲಿ ಚಿತ್ರದುರ್ಗ ನಗರದಲ್ಲಿ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ನಿರ್ಮಿಸಿದರು. ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್‌ ಸಹ ನಿರ್ಮಾಣ ಮಾಡಿದರು’ ಎಂದು ತಿಳಿಸಿದರು.

    ‘ಅಕ್ಕಮಹಾದೇವಿ ಸಮಾಜಕ್ಕೆ ಜಾಗ ನೀಡಿ ಕಟ್ಟಡ ನಿರ್ಮಿಸಲು ಧನಸಹಾಯ ಒದಗಿಸಿದ್ದರು. ಹೊಳಲ್ಕೆರೆ ರಸ್ತೆಯ ವೀರಶೈವ ಸಮಾಜದ ವಾಣಿಜ್ಯ ಸಂಕೀರ್ಣವನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದ್ದು. ಇಂತಹ ಹಲವಾರು ಸಮಾಜೋಪಯೋಗಿ ಕಾರ್ಯಗಳನ್ನು ಶ್ರೀಗಳು ಮಾಡಿದ್ದಾರೆಂದು’ ಹೇಳಿದರು.

    ಕ್ಲಿಕ್ ಮಾಡಿ ಓದಿ: ಅಸ್ಥಿಪಂಜರ ಸಿಕ್ಕ ಮನೆಯಲ್ಲಿ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳೆಷ್ಟು ಗೊತ್ತಾ

    ‘ಕೆಲಸಗಳನ್ನು ಮಾತನಾಡದೆಯೇ ಮಾಡಬೇಕು. ಜಯದೇವ ಶ್ರೀಗಳು ಮತ್ತು ಜಯವಿಭವ ಸ್ವಾಮೀಜಿಗಳನ್ನು ನೆನೆದು ದಾವಣಗೆರೆ ವಿರಕ್ತಮಠದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಜಗದ್ಗುರುಗಳು ಒಮ್ಮೆ ಕಣ್ಣೀರು ಹಾಕಿದ್ದರು. ಜಯವಿಭವ ಶ್ರೀಗಳು ಹಾಗೂ ಮಲ್ಲಿಕಾರ್ಜುನ ಜಗದ್ಗುರುಗಳ ಆಶೀರ್ವಚನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನಡೆಸಬೇಕು’ ಎಂದರು.

    ದಾವಣಗೆರೆ ವಿರಕ್ತ ಮಠದ ಡಾ.ಬಸವ ಪ್ರಭು ಸ್ವಾಮೀಜಿ ಮಾತನಾಡಿ, ‘ದೀರ್ಘಕಾಲದ ಜೀವನಕ್ಕಿಂತ ದಿವ್ಯವಾದ ಜೀವನಕ್ಕೆ ಸಾಕ್ಷಿಯಾಗಬೇಕು. ಈ ನಿಟ್ಟಿನಲ್ಲಿ ಜಯವಿಭವ ಶ್ರೀಗಳೇ ಉತ್ತಮ ಉದಾಹರಣೆ. ದೇಶಕ್ಕಾಗಿ ಶ್ರೀಮಠದ ಸಂಪತ್ತನ್ನು ನೀಡಿದವರು ಶ್ರೀಗಳು ತುಂಬಾ ಸಾತ್ವಿಕರಿದ್ದರು. ಅವರಂತೆ ನಾವೆಲ್ಲ ಸಾತ್ವಿಕ ಜೀವನ ನಡೆಸಬೇಕಿದೆ’ ಎಂದು ಹೇಳಿದರು.

    ಶ್ರೀಗಳ ಸ್ಮರಣೆ ಅಂಗವಾಗಿ ಮುಂಜಾನೆ ಕರ್ತೃಗದ್ದುಗೆಯಲ್ಲಿ ವಚನಾಭಿಷೇಕ ನಡೆಯಿತು. ನಂತರ ಶ್ರೀ ಜಗದ್ಗುರು ಜಯವಿಭವ ಮಹಾಸ್ವಾಮಿಗಳ ಕಲ್ಪವೃಕ್ಷ ವನದ ಮಹಾದ್ವಾರವನ್ನು ಜಯದೇವ ವಿದ್ಯಾರ್ಥಿನಿಲಯದ ಮಾಜಿ ವ್ಯವಸ್ಥಾಪಕ ಎಸ್.ಮಲ್ಲಯ್ಯ ಉದ್ಘಾಟಿಸಿದರು.

    ಕ್ಲಿಕ್ ಮಾಡಿ ಓದಿ: ನಿಮ್ಮ ಮನೆಗೆ ಕೊರಿಯರ್‌ ಬಂದರೆ ಎಚ್ಚರ | ಸ್ವೀಕರಿಸುವ ಮುನ್ನ ಯೋಚಿಸಿ

    ಗೋನೂರು ನಿರಾಶ್ರಿತರ ಕೇಂದ್ರದಲ್ಲಿನ ನಿರಾಶ್ರಿತರಿಗೆ ಹಾಲು ಹಣ್ಣು ಮತ್ತು ಸಿಹಿ ವಿತರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರು ಜಯವಿಭವ ಸ್ವಾಮೀಜಿಯನ್ನು ಸ್ಮರಿಸಿದರು. ಸರ್ದಾರ್‌ ಸೇವಾಲಾಲ್ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಶರಣೆ ಅಕ್ಕನಾಗಮ್ಮ ತಾಯಿ, ಭಕ್ತರಾದ ಸುರೇಶ್‌ ಬಾಬು, ಕೆಇಬಿ ಷಣ್ಮುಖಪ್ಪ, ಎಸ್‌.ಪರಮೇಶ್, ಗುತ್ತಿನಾಡು ಪ್ರಕಾಶ್‌, ಕೆ.ಎಂ.ವೀರೇಶ್‌ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top