Connect with us

    ಮೇ.15 ಕ್ಕೆ ಶ್ರೀ ರಾಮಾನುಜಾಚಾರ್ಯರರ ಜಯಂತೋತ್ಸವ

    ಶ್ರೀ ರಾಮಾನುಜಾಚಾರ್ಯ

    ಮುಖ್ಯ ಸುದ್ದಿ

    ಮೇ.15 ಕ್ಕೆ ಶ್ರೀ ರಾಮಾನುಜಾಚಾರ್ಯರರ ಜಯಂತೋತ್ಸವ

    CHITRADURGA NEWS | 03 MAY 2024

    ಚಿತ್ರದುರ್ಗ: ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ಬೆಂಗಳೂರು, ಭಗವದ್ ಶ್ರೀ ರಾಮಾನುಜಾಚಾರ್ಯರ ಜಯಂತೋತ್ಸವ ಸಮಿತಿ, ಪರಶುರಾಂಪುರ ಹಾಗೂ ಶ್ರೀ ವೈಷ್ಣವ ಸಮುದಾಯದ ವತಿಯಿಂದ ಪರಶುರಾಂಪುರದಲ್ಲಿ ಭಗವದ್ ಶ್ರೀ ರಾಮಾನುಜಾಚಾರ್ಯರ 1007ನೇ ಜಯಂತೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಪಿಆರ್ ಪುರ ಗ್ರಾಮದ ಪಾವಗಡ ರಸ್ತೆಯ ಲಕ್ಷ್ಮಿಚನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಮೇ.15 ಮತ್ತು 16 ರಂದು ಶ್ರೀ ರಾಮಾನುಜಾಚಾರ್ಯರ ಜಯಂತೋತ್ಸವ ಆಯೋಜಿಸಲಾಗಿದೆ.

    ಇದನ್ನೂ ಓದಿ: ಸಾಹಿತಿ ಬಿ.ಎಲ್ ವೇಣು ನಿವಾಸಕ್ಕೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಭೇಟಿ

    ಜಯಂತೋತ್ಸವದ ಅಂಗವಾಗಿ ಗ್ರಾಮದ ಪಾವಗಡ ರಸ್ತೆಯ ಹಳೇಕೆರೆಯ ಬಳಿ ಇರುವ ಗ್ರಾಮದೇವರಾದ ಲಕ್ಷ್ಮೀಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಮೇ 15ರ ಬುಧವಾರ ಸಂಜೆ ಉಪನಯನದ ವಟುಗಳಿಗೆ ಉದಕಶಾಂತಿ ಭಜನಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಮೇ 16 ಗುರುವಾರ ಬೆಳಿಗ್ಗೆ 7.30 ಕ್ಕೆ ಶ್ರೀ ಲಕ್ಷ್ಮೀಚನ್ನಕೇಶವಸ್ವಾಮಿಯವರಿಗೆ ಹಾಗೂ ಭಗವದ್ ಶ್ರೀ ರಾಮಾನುಜಾಚಾರ್ಯರಿಗೆ ಪಂಚಾಮೃತಾಭಿಷೇಕ ಹಾಗೂ ಹೂವಿನ ಅಲಂಕಾರ ಸೇವೆ ಆರಂಭಿಸಲಾಗುವುದು.

    ಮೇಲುಕೋಟೆಯ ಯದುಗಿರಿ ಮಠದ 41 ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 11.30 ಕ್ಕೆ ಉಪನಯನ ವಟುಗಳಿಗೆ ಶ್ರೀಗಳಿಂದ ಸಮಾಶ್ರಯಣ ಮುದ್ರಾಧಾರಣೆ ಕಾರ್ಯಕ್ರಮ.

    ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಗಡಿಭಾಗದಲ್ಲಿ ಮಧ್ಯ ಮಾರಾಟ ನಿಷೇಧ

    ಅಂದು ಮಧ್ಯಾಹ್ನ 12.30 ಕ್ಕೆ ಲೋಕ ಕಲ್ಯಾಣಾರ್ಥವಾಗಿ ಮಹಾಸುದರ್ಶನ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ಆಯೋಜಿಸಲಾಗಿದೆ.

    ಉಪನಯನ ಕಾರ್ಯಕ್ರಮದ ಪೌರೋಹಿತ್ಯ ನೇತೃತ್ವವನ್ನು ಉಭಯ ವೇದಾಂತ ವಿದ್ವಾನ್ ಮಧುಸೂಧನ್ ಭಟ್ಟರು ಕತ್ರಿಗುಪ್ಪೆ, ಬೆಂಗಳೂರು, ಯಲಹಂಕದ ರಾಮು ರಾಮಾನುಜಜಂ, ತುಮಕೂರಿನ ಶ್ರೀನಿವಾಸರಾಜ್ ತುಳಸೀ ಆಚಾರ್ಯರು, ತಾವರೇಕೆರೆಯ ಹರಿಪ್ರಸಾದ್, ದಾವಣಗೆರೆಯ ಸುನಿಲ್ ಆಚಾರ್ಯ ನಡೆಸಿಕೊಡುವರು.

    ಇದನ್ನೂ ಓದಿ: ಹೆಚ್ಚಾಗಿದೆ ಬಿಸಿಲು | ಕುರಿ, ಮೇಕೆ, ದನ ಮೆಯಿಸಲು ಸರಿಯಾದ ಸಮಯ ಯಾವುದು ಗೊತ್ತಾ

    ಜಯಂತೋತ್ಸವಕ್ಕೆ ಅಭಿನವರಂಗ ರಾಮಾನುಜ ತ್ರಿದಂಡಿ ಜೀಯಾರ್ ಮಹಾಸ್ವಾಮಿಗಳು, ಮೈಸೂರು ಸಂಸ್ಥಾನ, ಯೋಗ ಸಂಸ್ಕøತಂ ಯುನಿರ್ವಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪುರಸ್ಕøತರಾದ ಡಾ.ಸಂಪತ್ ವೇಣುಗೋಪಾಲ ಆಚಾರ್ಯ ಖ್ಯಾತ ಜೋಷಿಸಿ ಯಲಹಂಕ ಬೆಂಗಳೂರು, ಶ್ರೀ ಎ.ಪಿ ರಾಮಮೂರ್ತಿ ಸ್ವಾಮೀಜಿ ರಾಯದುರ್ಗದ ವಿಪ್ರಮಲೈ ವಿಶ್ವಮಾತಾಶ್ರಮ ಪಾಲ್ಗೊಳ್ಳುವರು.

    ದಾವಣಗೆರೆಯ ಉಪನ್ಯಾಸಕ ನಯನಜ ಮೂರ್ತಿ, ಡಾ ಸಂಪತ್ ವೇಣುಗೋಪಾಲ್ ಆಚಾರ್ಯ ಇವರಿಂದ ಉಪನ್ಯಾಸ.

    ಗುರುಗಳಿಂದ ಆಶೀರ್ವಚನ, ನಂತರ ಶ್ರೀ ರಾಮಾನುಜಾಚಾರ್ಯರ ಉತ್ಸವ ಮಹಾಮಂಗಳಾರತಿ ಪ್ರಸಾದ ವಿನಿಯೋಗ ತರಿಯಾರಾದನೆ
    ಕಾರ್ಯಕ್ರಮ ಇರಲಿದೆ.

    ಇದನ್ನೂ ಓದಿ: ಮಕ್ಕಳ ಕವಿಗೋಷ್ಠಿಗೆ ಕವನಗಳ ಆಹ್ವಾನ| ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಆಯೋಜನೆ

    ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದ ಅಧ್ಯಕ್ಷ ರವಿ ನರಸಿಂಹನ್, ಕಾರ್ಯದರ್ಶಿ ಸುಗಂಧರಾಜು, ಸಾಲುಕಟ್ಟೆ ಶ್ರೀನಿವಾಸ, ಎಸ್.ಅನಂತ್, ಕೆ.ಎಸ್. ಶ್ರೀನಿವಾಸ ಹೊಸದುರ್ಗ, ದಾವಣಗೆರೆಯ ವರದರಾಜು, ಚನ್ನಗಿರಿಯ ನರಸಿಂಹಮೂರ್ತಿ, ಶಿವಮೊಗ್ಗದ ಎಸ್.ಆರ್.ಗಿರೀಶ್, ಗೌರವಾಧ್ಯಕ್ಷ ಟಿ.ಎಲ್.ವೆಂಕಟರಾಜು, ಕೆ.ಬಿ.ರಾಮಕೃಷ್ಣ, ಎಸ್ ಹನುಮಂತರಾಯ, ಪ್ರಭಾಕರ, ಗೋಪಾಲ, ಪಿ.ಎಸ್.ಸುರೇಶ, ಪಿ.ಎಸ್.ನಾಗರಾಜು, ದಿವಾಕರಮೂರ್ತಿ, ಎಸ್.ಶ್ರೀನಿವಾಸ, ಎಸ್. ಆದಿತ್ಯ, ರಂಗನಾಥ, ಗಾಯತ್ರಮ್ಮ, ಗೌರಮ್ಮ, ಅಶೋಕ ಮತ್ತಿತರರು ಭಾಗವಹಿಸುವರು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಚ್. ಸತ್ಯನಾರಾಯಣಮೂರ್ತಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top