ಮುಖ್ಯ ಸುದ್ದಿ
ಸಾಹಿತಿಗಳು ರಾಜಕಾರಣಿಗಳೇ ಎಂದಿದ್ದು ತಪ್ಪು | ಸಾಣೇಹಳ್ಳಿ ಶ್ರೀ
CHITRADURGA NEWS | 20 JUNE 2024
ಚಿತ್ರದುರ್ಗ: ಪಕ್ಷದ ವೇದಿಕೆಗೆ ಸಾಹಿತಿಗಳನ್ನು ಕರೆಯಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ‘ಸಾಹಿತಿಗಳನ್ನು ನಾನೇ ಕರೆಸಿದ್ದು; ತಪ್ಪೇನು, ಎಂದು ಕೇಳಿರುವ ಹಿನ್ನೆಲೆಯಲ್ಲಿ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಸಾಹಿತಿಗಳನ್ನು ಕರೆಸಿದ್ದರಲ್ಲಿ ಖಂಡಿತ ತಪ್ಪಿಲ್ಲ. ಆದರೆ ಅವರೂ ರಾಜಕಾರಣಿಗಳೇ ಎಂದಿರುವುದು ಮತ್ತು ಸಾಂಸ್ಕ್ರತಿಕ ಅಕಾಡಮಿ, ಪ್ರಾಧಿಕಾರಗಳ ಅಧ್ಯಕ್ಷರನ್ನು ಸರ್ಕಾರವೇ ನೇಮಕ ಮಾಡಿದೆ. ಅವರನ್ನು ಎಲ್ಲಿಗೆ ಬೇಕಾದರೂ ಕರೆಸಿಕೊಳ್ಳಬಹುದು ಎಂದಿರುವುದು ಸರಿಯಲ್ಲ.
ಇದನ್ನೂ ಓದಿ: ಮೊಬೈಲ್ ಗೀಳಿನಿಂದ ಹೊರ ಬನ್ನಿ | ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ
ಸಾಹಿತಿಗಳು ಸರ್ಕಾರದಿಂದ ನೇಮಕವಾಗಿದ್ದರೂ ಅವರಿಗೆ ಸ್ವಾಯತ್ತತೆ ಇದೆ. ಎಲ್ಲ ಸಾಹಿತಿಗಳೂ ರಾಜಕಾರಣ ಮಾಡುವುದಿಲ್ಲ. ಬದಲಾಗಿ ರಾಜಕಾರಣಿಗಳು ತಪ್ಪು ಮಾಡಿದಾಗ ಎಚ್ಚರಿಸುವ ಅವಕಾಶ ಸಾಹಿತಿಗಳಿಗಿದೆ.
ಅಕಾಡೆಮಿ, ಪ್ರಾಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳಾದರೂ ರಾಜಕೀಯ ಪಕ್ಷಗಳ ಅಂಗ ಸಂಸ್ಥೆಗಳಲ್ಲ.
ಪದಾಧಿಕಾರಿಗಳು ಸರ್ಕಾರದ ವಕ್ತಾರರಂತೆ ವರ್ತಿಸದೆ ತಮ್ಮದೇ ಆದ ಸಾಂಸ್ಕ್ರತಿಕ ನೀತಿಯನ್ನು ರೂಪಿಸಿಕೊಳ್ಳಬೇಕು. ಹಾಗಂತ ಸರ್ಕಾರದ ವಿರುದ್ಧ ತಿರುಗಿಬೀಳಬೇಕೆಂದಲ್ಲ. ತಮ್ಮ ಕಾಯಕವನ್ನು ನಿμÉ್ಠ ಮತ್ತು ನಿಷ್ಠುರವಾಗಿ ಮಾಡಬೇಕು.
ಇದನ್ನೂ ಓದಿ: ರೇಣುಕಸ್ವಾಮಿ ಕೊಲೆ | ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಶ್ಲೇಷಣೆ
ತಮ್ಮ ತತ್ವಾದರ್ಶಗಳಿಗೆ ಆಡಳಿತ ಯಂತ್ರ ಸ್ಪಂಧಿಸದಿದ್ದರೆ ಸರ್ಕಾರಿ ಧೋರಣೆಯನ್ನು ಪ್ರತಿಭಟಿಸಿ ಹೊರಬರಬೇಕು ಎಂದು ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದ್ದಾರೆ.