ಮುಖ್ಯ ಸುದ್ದಿ
IPL ಕ್ರಿಕೆಟ್ ಬೆಟ್ಟಿಂಗ್ | ಚಿತ್ರದುರ್ಗದ ಇಬ್ಬರ ಬಂಧನ

CHITRADURGA NEWS | 27 MARCH 2025
ಚಿತ್ರದುರ್ಗ: ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.
Also Read: ಜಾತಿಗಣತಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ | ಉತ್ತಮ ನಿರ್ಧಾರ ಎಚ್.ಆಂಜನೇಯ
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಅವಿನಾಶ್ ಹಾಗೂ ಗೋನೂರು ಮೂಲದ ಹಾಲಿ ಡಿಸಿಸಿ ಬ್ಯಾಂಕ್ ಕಾಲೊನಿಯ ಅಪ್ಪಿ ಅಲಿಯಾಸ್ ಬಿ.ಬಿ.ತಿಪ್ಪೇಸ್ವಾಮಿ ಬಂಧಿತರು.
ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಗುಯಿಲಾಳ್ ಟೋಲ್ ಪ್ಲಾಜಾ ಬಳಿ ಆನ್ಲೈನ್ ವೆಬ್ಸೈಟ್ ಮೂಲಕ ಹಣವನ್ನು ಪಣವಾಗಿ ಕಟ್ಟಿಕೊಂಡು, ಸಾರ್ವಜನಿಕರಿಂದಲೂ ಹಣ ಕಟ್ಟಿಸಿಕೊಂಡು ಕಾನೂನು ಬಾಹೀರವಾಗಿ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಐಮಂಗಲ ವೃತ್ತ ನಿರೀಕ್ಷಕ ಎನ್ ಗುಡ್ಡಪ್ಪ. ಐಮಂಗಲ ಠಾಣೆ ಪಿಎಸ್ಐ ಎಂ.ಟಿ.ದೀಪು, ಸಿಬ್ಬಂದಿಗಳಾದ ರವಿ, ಶಿವಕುಮಾರ್, ಪ್ರವೀಣ್ ಕುಮಾರ್, ಕಾಂತರಾಜ್ ಹರ್ಷ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Also Read: KSRTC ಬಸ್ ನಿಲ್ದಾಣದ ಅಂಗಡಿಗಳಲ್ಲಿ ಅವಧಿ ಮೀರಿದ ನೀರು ಮಾರಾಟ | ಆಯೋಗದ ಅಧ್ಯಕ್ಷ ಟಿ.ಶಾಮ್ ಭಟ್ ತೀವ್ರ ಅಸಮಾಧಾನ
ಆರೋಪಿತರಿಂದ ಮೂರು ಸಾವಿರ ನಗದು ಹಣ, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಗಳನ್ನು ಅಮಾನತುಪಡಿಸಿಕೊಂಡಿದ್ದು ಇನ್ನು ಹಲವು ಆರೋಪಿತರು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದ್ದು ಪ್ರಕರಣದ ತನಿಖೆ ಮುಂದುವರೆದಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
