Connect with us

    ದೇವಸ್ಥಾನಗಳಲ್ಲಿ ಕಳುವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳನ ಬಂಧನ

    ಅಬ್ಬಿನಹೊಳೆ

    ಕ್ರೈಂ ಸುದ್ದಿ

    ದೇವಸ್ಥಾನಗಳಲ್ಲಿ ಕಳುವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳನ ಬಂಧನ

    https://chat.whatsapp.com/Jhg5KALiCFpDwME3sTUl7x

    ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು ತಾಲೂಕಿನ ರಂಗೇನಹಳ್ಳಿಯ ಎರಡು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಅಬ್ಬಿನಹೊಳೆ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಕಲ್ಯಾಣದುರ್ಗ ತಾಲೂಕು, ಮಾಕುಡುಕಿ ಗ್ರಾಮದ ಮರಿಸ್ವಾಮಿ ಬಂಧಿತ ಆರೋಪಿ. ಗುರುವಾರ ಬಂಧಿತನಾದ ಈತನಿಂದ 4.50 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇದನ್ನೂ ಓದಿ: ಸೇನೆ, ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಮಾಜಿ ಸೈನಿಕನ ಬಂಧನ

    ಅಂತಾರಾಜ್ಯ ಕಳ್ಳತನ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಈತನನ್ನ ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ತಂಡವೊಂದನ್ನು ರಚಿಸಿದ್ದರು.

    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿ ರಾಜಣ್ಣ, ಅಬ್ಬಿನಹೊಳೆ ಪಿಎಸ್‍ಐ ಬಾಹುಬಲಿ ಎಂ ಪಡನಾಡ, ಸಿಬ್ಬಂದಿಗಳಾದ ನಾಗರಾಜ, ರುದ್ರಪ್ಪ, ಕವಿರಾಜ್, ಮಂಜನಾಥ್, ನಿಂಗರಾಜ್ ಮತ್ತಿತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top