ಹೊಳಲ್ಕೆರೆ
Independence day: ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
CHITRADURGA NEWS | 16 AUGUST 2024
ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿಯ ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ದಾವಣಗೆರೆಯ ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್ ಎಚ್.ಎಸ್.ಮಂಜುನಾಥ್ ಧ್ವಜಾರೋಣ ನೆರವೇರಿಸಿ, ‘ಸ್ವಾತಂತ್ರ್ಯವು ಮಹನೀಯರ ಬಲಿದಾನದಿಂದ ಸಿಕ್ಕಂತ ದೊಡ್ಡ ಫಲವಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎಂದರು.
ಸಂಸ್ಥೆ ಕಾರ್ಯದರ್ಶಿ ಜೆ.ಎಸ್.ವಸಂತ್ ಮಾತನಾಡಿ, ‘ಭಾರತಕ್ಕೆ ಕೇವಲ ವ್ಯಾಪಾರಕ್ಕೆಂದು ಬಂದಂತಹ ಯುರೋಪಿನ ರಾಷ್ಟ್ರಗಳು ನಮ್ಮಲ್ಲಿರುವಂತಹ ಒಗ್ಗಟ್ಟಿನ ಕೊರತೆ, ಕೋಮು ಸೌಹಾರ್ದತೆ ಇವೆಲ್ಲವನ್ನು ಮನಗಂಡು ದೇಶದಲ್ಲಿ ಆಳ್ವಿಕೆ ಮಾಡಿದರು. ಇತಿಹಾಸವನ್ನು ನಾವು ತಿಳಿಯಬೇಕು’ ಎಂದು ಹೇಳಿದರು.
ಪ್ರಾಂಶುಪಾಲ ಜಿ.ವೇಣುಗೋಪಾಲ್ ಮಾತನಾಡಿ, ‘ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ’ ಎಂದರು.
ಶಾಲೆ ಛೇರ್ಮನ್ ಜೆ.ಎಸ್.ಮಂಜುನಾಥ್ ಮಾತನಾಡಿ, ‘ಬ್ರಿಟಿಷರು ಭಾರತೀಯರನ್ನು ಶೋಚನೀಯ ಸ್ಥಿತಿಗೆ ತಂದು ನಿಲ್ಲಿಸಿದರು. ನಂತರ ಅವರ ವಿರುದ್ಧ ಹೋರಾಟ ನಡೆಸಿ ರಕ್ತ ಬಲಿದಾನದ ಮೂಲಕ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಹೇಳಿದರು.
ನಿರ್ದೇಶಕರಾದ ಎಂ.ಜೆ.ನಾಗರಾಜ್, ಬಿ.ಎಸ್.ಹರೀಶ್ ಬಾಬ್, ಛಾಯಾ ಮಂಜುನಾಥ್ ಇದ್ದರು.