CHITRADURGA NEWS | 23 NOVEMBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಇಂದು ಒಳಹರಿವು ಹೆಚ್ಚಾಗಿದೆ.
ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ವಿವಿ ಸಾಗರಕ್ಕೆ ನ.23 ಶನಿವಾರ ಬರೋಬ್ಬರಿ 924 ಕ್ಯೂಸೆಕ್ ಒಳಹರಿವು ಬಂದು ಸೇರಿದೆ.

ಇದನ್ನೂ ಓದಿ: ರಾಗಿಗೆ ಖರೀಧಿಗೆ 4290 ಬೆಲೆ ನಿಗಧಿ | ಡಿಸೆಂಬರ್ 1 ನೊಂದಣಿ ಆರಂಭ
ಇದರಿಂದಾಗಿ ಈಗ ಜಲಾಶಯದ ನೀರಿನ ಮಟ್ಟ 128.40 ಅಡಿಗೆ ತಲುಪಿದೆ. ಇನ್ನು ಕೇವಲ ಒಂದೂವರೆ ಅಡಿ ನೀರು ಬಂದರೆ ಜಲಾಶಯ ಕೋಡಿ ಹರಿಯಲಿದೆ.
30 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಇಂದಿಗೆ 29.08 ಟಿಎಂಸಿ ಅಡಿ ನೀರು ಜಮಾವಣೆಯಾಗಿದೆ.
ಇದನ್ನೂ ಓದಿ: ಚಿತ್ರದುರ್ಗ CYBER ಪೊಲೀಸರ ಕಾರ್ಯಾಚರಣೆ | ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 121.70 ಅಡಿವರೆಗೆ ನೀರಿತ್ತು. ಈ ವರ್ಷ ದಾಖಲೆ ಮೀರಿ ನೀರು ಸಂಗ್ರಹವಾಗುತ್ತಿದೆ.
ಇನ್ನೊಂದು ಟಿಎಂಸಿ ನೀರು ಹರಿದರೆ ಜಲಾಶಯ ಮೂರನೇ ಬಾರಿಗೆ ಕೋಡಿ ಬೀಳುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಲಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
