ಲೋಕಸಮರ 2024
ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ | ಸಚಿವ ಕೆ. ಹೆಚ್. ಮುನಿಯಪ್ಪ

CHITRADURGA NEWS | 12 APRIL 2024
ಚಿತ್ರದುರ್ಗ: ಬಿಜೆಪಿ ಸರ್ಕಾರದಲ್ಲಿ ಸಂವಿಧಾನಕ್ಕೆ ಬೆಲೆ ಇಲ್ಲ, ಸಂವಿಧಾನವನ್ನೆ ಬದಲಾಯಿಸಲು ಹೊರಟಿರುವುದು ದುರಂತವಾಗಿದ್ದು, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.
ಇದನ್ನೂ ಓದಿ: ಹೃದಯಾಘಾತದಿಂದ ಮೃತಪಟ್ಟ ಚೇತನ್ PUC ಪರೀಕ್ಷೆಯಲ್ಲಿ FIRSTCLASS
ನಗರದ ಎನ್.ಬಿ.ಟಿ. ಹಾಲ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಾಧಿಸಬೇಕೆಂದು ವಾಮ ಮಾರ್ಗವನ್ನು ಹಿಡಿದಿದೆ, ಇದರಿಂದ ದೇಶದ ಖಜಾನೆಗೆ ಕನ್ನವನ್ನು ಹಾಕಿದೆ, ದೇಶದ ಹಣವನ್ನು ಖರ್ಚು ಮಾಡುವುದರ ಮೂಲಕ ಮತದಾರರಿಗೆ ಮೋಸ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಗಟ್ಟಿಯಾಗಿ ಅನುಷ್ಠಾನ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ಮಾಡಿದ್ದೇವೆ, ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 28 ಸ್ಥಾನಗಳನ್ನು ಗೆಲ್ಲಲಿದ್ದು ಕರ್ನಾಟಕದಲ್ಲಿ ಮೊಟ್ಟ ಮೊದಲ ಕ್ಷೇತ್ರ ಚಿತ್ರದುರ್ಗ ಗೆಲ್ಲಲಿದ್ದೇವೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಆದ್ಯತೆ
ಚಿತ್ರದುರ್ಗ ಕಾಂಗ್ರೆಸ್ ಪಕ್ಷದ ಭದ್ರಕೋಟೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಪ್ಪ ಸರಳ ಸಜ್ಜನಿಕೆಗೆ ಹೆಸರಾಗಿದ್ದಾರೆ, ಸೌಮ್ಯ ಸ್ವಭಾವ ಹಾಗೂ ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ವ್ಯಕ್ತಿ, ರಾಜಕೀಯದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಿರುವ ವ್ಯಕ್ತಿಯಾಗಿದ್ದು ಜನರು ಅವರನ್ನು ಗೆಲ್ಲಿಸಲಿದ್ದಾರೆ, ಕಾಂಗ್ರೆಸ್ ಪಕ್ಷ ಏನು ಘೋಷಣೆ ಮಾಡಿದ್ದು ಅದನ್ನುಅನುಷ್ಠಾನಕ್ಕೆ ತಂದಿದೆ, ರಾಜ್ಯದಲ್ಲಿನ ಎಲ್ಲಾ ಜನರಿಗೆ ಸೌಲಭ್ಯ ಸಿಕ್ಕಿದೆ, ಹಾಗಾಗಿ ನಾವು ಮತ ಕೇಳಲು ಅರ್ಹರಿದ್ದೇವೆ ಎಂದರು.
ಗ್ಯಾರೆಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ಖರ್ಚು ಮಾಡಿದ್ದು, ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ, ಬರ ಪರಿಹಾರ ನಿಭಾಯಿಸಲು ಸೂಕ್ತ ವ್ಯವಸ್ಥೆ ಮಾಡಿದ್ದೇವೆ, ಜಿಲ್ಲಾಡಳಿತಕ್ಕೆ ಪೂರ್ಣ ಅಧಿಕಾರ ಕೊಟ್ಟಿದ್ದೇವೆ, ಕುಡಿಯುವ ನೀರಿನ ಅಹಕಾರ ನೀಗಿಸಲು ಯಾರಿಗೂ ಕಾಯುವ ಅವಶ್ಯಕತೆ ಇಲ್ಲ, ಆ ರೀತಿ ಸಕಲ ವ್ಯವಸ್ಥೆ ಮಾಡಿದ್ದೇವೆ.
ಇದನ್ನೂ ಓದಿ: ಮತ್ತೆ 50 ಸಾವಿರ ಗಡಿ ತಲುಪಿದ ಅಡಿಕೆ ರೇಟ್
ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಸಂಪೂರ್ಣ ವಿಫಲ ಆಗಿದೆ, ಅನಿವಾರ್ಯವಾಗಿ ನ್ಯಾಯಾಲಯ ಮೆಟ್ಟಿಲು ಏರಬೇಕಾಗಿದೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ತಾಜ್‍ಪೀರ್, ಜಿ.ಎಸ್.ಮಂಜುನಾಥ್, ಓ.ಶಂಕರ್ ಮೈಲಾರಪ್ಪ ಇದ್ದರು.
