ಸಂಡೆ ಸ್ಪಷಲ್
ಚಿತ್ರದುರ್ಗ ನ್ಯೂಸ್ ಜೊತೆ ಕ್ರಿಕೇಟ್ ಸಂಭ್ರಮ: ಐತಿಹಾಸಿಕ ಸಂಭ್ರಮಕ್ಕೆ ನೀವು ಸಾಕ್ಷಿಯಾಗಿ
ಬನ್ನಿ ಚಿತ್ರದುರ್ಗನ್ಯೂಸ್ ಜೊತೆ ಸೇರಿ ಈ ಬಾರಿಯ ಕ್ರಿಕೇಟ್ ಹಬ್ಬ ಆಚರಿಸೋಣ. ಇಡೀ ವಿಶ್ವ ಭಾರತದ ಕಡೆಗೆ ನೋಡುತ್ತಿದೆ. ಟೀಂ ಇಂಡಿಯಾ ಸಾಧನೆ ಜಗದಗಲ ವ್ಯಾಪಿಸಿದೆ. ನಮ್ಮ ಒಬ್ಬೊಬ್ಬ ಆಟಗಾರರು ಮುತ್ತು, ರತ್ನದಂತೆ ಕಂಗೊಳಿಸುತ್ತಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಅತಿಥೇಯ ಆಸ್ಟ್ರೇಲಿಯಾ ತಂಡದೊಂದಿಗೆ ಸೆಣಸಾಟ ಆರಂಭಿಸುವ ಮೂಲಕ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಇಡೀ ದೇಶ ಪ್ರಾರ್ಥಿಸುತ್ತಿದೆ.
ಈ ಸುಸಂದರ್ಭವನ್ನು ಅವಿಸ್ಮರಣೀಯ ಹಾಗೂ ವಿಶೇಷವಾಗಿ ಹಬ್ಬದಂತೆ ಸಂಭ್ರಮಿಸಲು ಚಿತ್ರದುರ್ಗ ನ್ಯೂಸ್ ಡಿಜಿಟಿಲ್ ಮೀಡಿಯಾ ವೇದಿಕೆ ಕಲ್ಪಿಸಿದೆ. ವಿಶ್ವಕಪ್ ಕ್ರಿಕೇಟ್ ಬಗ್ಗೆ ನಿಮ್ಮ ಪುಟ್ಟ ಅಭಿಪ್ರಾಯದೊಂದಿಗೆ ನಿಮ್ಮ ಪೋಟೊ ಕಳಿಸಿ ಅದನ್ನು ಚಿತ್ರದುರ್ಗ ನ್ಯೂಸ್ ಮಧ್ಯಾಹ್ನ 2 ಗಂಟೆವರೆಗೆ ಪ್ರಕಟಿಸಲಿದೆ.
ಮ್ಯಾಚ್ ಆರಂಭವಾದ ತಕ್ಷಣ ನೀವು, ನಿಮ್ಮ ಕುಟುಂಬ, ಸ್ನೇಹಿತರು, ಊರು, ಬೀದಿಯವರ ಜೊತೆ ಕ್ರಿಕೇಟ್ ನೋಡುತ್ತಿರುವ ಸೆಲ್ಪಿ ಕಳುಹಿಸಿ.