ಮುಖ್ಯ ಸುದ್ದಿ
ಕಾಂಗ್ರೆಸ್ ಕಚೇರಿ ಎದುರು ಹೈಡ್ರಾಮ | ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಕ್ಸಮರ | ಗುಂಪು ಚದುರಿಸುವಾಗ ತಳ್ಳಾಟದಲ್ಲಿ ಕೆಳಗೆ ಬಿದ್ದ ಭಾರ್ಗವಿ ಆಸ್ಪತ್ರೆಗೆ ದಾಖಲು
CHITRADURGA NEWS | 28 FEBRUARY 2024
ಚಿತ್ರದುರ್ಗ: ನಗರದ ಒನಕೆ ಓಬವ್ವ ವೃತ್ತದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿನಲ್ಲಿ ಬುಧವಾರ ಬೆಳಗ್ಗೆ ಹೈಡ್ರಾಮ ನಡೆಯಿತು.
ವಿಧಾನಸೌಧದಲ್ಲಿ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಯತ್ನಿಸಿದರು.
ಇದನ್ನೂ ಓದಿ: ಮುರುಘಾ ಮಠ, ಎಸ್‍ಜೆಎಂ ವಿದ್ಯಾಪೀಠದ ಆಡಳಿತಕ್ಕೆ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ನಿರ್ದೇಶನ
ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕಾಂಗ್ರೆಸ್ ಕಚೇರಿ ಸುತ್ತಾ ಬ್ಯಾರಿಕೇಡ್ ಅಳವಡಿಸಿ ಬಿಜೆಪಿ ಕಾರ್ಯಕರ್ತರನ್ನು ತಡೆದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಕಚೇರಿಯ ಎದುರಿನಲ್ಲಿ ನಿಂತು ದೇಶದ್ರೋಹಿಗಳಿಗೆ ಬಂಬಲ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಕೂಗಿದರು.
ಇದನ್ನೂ ಓದಿ: ರೈತರಿಂದ ಪಂಜಿನ ಮೆರವಣಿಗೆ, ಕೇಂದ್ರ ರಾಜ್ಯ ಸರ್ಕಾರದ ಜನವಿರೋಧಿ ನೀತಿಗೆ ಧಿಕ್ಕಾರ
ಈ ವೇಳೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಭಾರತ್ ಮಾತಾ ಕೀ ಜೈ, ಕೋಮುವಾದಿ ಬಿಜೆಪಿಗೆ ಧಿಕ್ಕಾರ, ಮನುವಾದಿ ಬಿಜೆಪಿ ಪಕ್ಷಕ್ಕೆ ಧಿಕ್ಕಾರ ಎಂದು ಕೂಗಿದರು.
ಈ ವೇಳೆ ಎರಡೂ ಕಡೆಗಳಲ್ಲೂ ಪ್ರತಿಭಟನೆ ತಾರಕ್ಕೇರಿತು. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದರು. ಬಿಜೆಪಿ ಕಾರ್ಯಕರ್ತರು ದೇಶವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಕೂಗಿದರು.
ಇದನ್ನೂ ಓದಿ: ಅಪ್ಪ ಆಟೋ ಡ್ರೈವರ್ ಮಗಳು ಸಿವಿಲ್ ಜಡ್ಜ್ | ಅಪರೂಪದ ಸಾಧನೆಗೆ ಕೋಟೆನಾಡು ಸಾಕ್ಷಿ
ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯಲ್ಲಿದ್ದ ಮೈಕ್ ಹೊರಗೆ ತಂದು ಬಿಜೆಪಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಪಾಕಿಸ್ತಾನದ ಪರ ಘೋಷಣೆ ಕೂಗುದವರು ನಮ್ಮವರಲ್ಲ, ಪಾಕಿಸ್ಥಾನ್ ಮುರ್ದಾಬಾದ್ ಎಂದು ಕಾಂಗ್ರೆಸ್ ಕಚೇರಿ ಕಡೆಯಿಂದ ಘೋಷಣೆ ಕೇಳಿ ಬಂದವು.
ಒಂದು ಹಂತದಲ್ಲಿ ಪ್ರತಿಭಟನೆ ಬೀದಿ ಜಗಳದಂತಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಿದರು.
ತಳ್ಳಾಟದಲ್ಲಿ ನೆಲಕ್ಕೆ ಬಿದ್ದ ಭಾರ್ಗವಿ ದ್ರಾವಿಡ್:
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದ ಪೊಲೀಸರು, ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಅಲ್ಲಿಂದ ತಳ್ಳಲು ಮುಂದಾದರು. ಈ ವೇಳೆ ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ನೆಲಕ್ಕೆ ಬಿದ್ದರು.
ಇದನ್ನೂ ಓದಿ: ಚಿತ್ರದುರ್ಗ ರೈಲು ನಿಲ್ದಾಣದ ಹೊಸ ಲುಕ್ | ಏನೆಲ್ಲಾ ಇರುತ್ತೆ ಗೊತ್ತಾ ನವೀಕೃತ ರೈಲ್ವೇ ಸ್ಟೇಷನ್‍ನಲ್ಲಿ
ಮಹಿಳಾ ಪೊಲೀಸ್ ಪೇದೆಯೊಬ್ಬರು ಏಕಾಏಕಿ ತಳ್ಳಿದ್ದರಿಂದ ನೆಲಕ್ಕೆ ಬಿದ್ದ ಭಾರ್ಗವಿ ಕ್ಷಣ ಕಾಲ ಮೇಲೆ ಏಳಲಿಲ್ಲ. ಆನಂತರ ನೀರು ಕುಡಿಸಿ ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ನರೇಂದ್ರ ಹೊನ್ನಾಳ್, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಯುವಮೋರ್ಚಾ ಮಂಡಲ ಅಧ್ಯಕ್ಷ ರಾಮು, ನವೀನ್, ವೀಣಾ, ಶೀಲಾ, ಶೈಲಜಾ ರೆಡ್ಡಿ, ಪವನ, ಪರಶುರಾಮ್, ಪಲ್ಲವಿ ಪ್ರಸನ್ನ, ರವಿ ಪೈಲೆಟ್, ಪ್ರಭು ಮತ್ತಿತರರಿದ್ದರು.