EXCLUSSIVE – ಚಿತ್ರದುರ್ಗ ರೈಲು ನಿಲ್ದಾಣದ ಹೊಸ ಲುಕ್ | ಏನೆಲ್ಲಾ ಇರುತ್ತೆ ಗೊತ್ತಾ ನವೀಕೃತ ರೈಲ್ವೇ ಸ್ಟೇಷನ್‍ನಲ್ಲಿ

ಚಿತ್ರದುರ್ಗ ರೈಲು ನಿಲ್ದಾಣದ ಹೊಸ ಲುಕ್

CHITRADURGA NEWS | 26 FEBRUARY 2024

ಚಿತ್ರದುರ್ಗ: ಅಮೃತ ಭಾರತ್ ರೈಲ್ವೇ ಸ್ಟೇಷನ್ ಯೋಜನೆಯಡಿ ಕೋಟೆನಾಡು ಚಿತ್ರದುರ್ಗ ನಗರದ ರೈಲು ನಿಲ್ದಾಣದ ನವೀಕರಣಕ್ಕೆ ಕೇಂದ್ರ ಸರ್ಕಾರ ಬರೋಬ್ಬರಿ 11.78 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ಇಷ್ಟು ಹಣದಲ್ಲಿ ನವೀಕರಣಗೊಳ್ಳುವ ರೈಲು ನಿಲ್ದಾಣದ ಔಟ್‍ಲುಕ್ (ಹೊರನೋಟ) ಹೇಗಿರಲಿದೆ ಎನ್ನುವುದನ್ನು ನಿಮ್ಮ ಚಿತ್ರದುರ್ಗ ನ್ಯೂಸ್ ಮೊಟ್ಟ ಮೊದಲ ಬಾರಿಗೆ ಪ್ರಕಟಿಸುತ್ತಿದೆ.

ಇದನ್ನೂ ಓದಿ: ಚಿತ್ರದುರ್ಗ ರೈಲು ನಿಲ್ದಾಣ ಮೇಲ್ದರ್ಜೆಗೆ ಮುಹೂರ್ತ ಫಿಕ್ಸ್

ಹೊಸ ರೈಲು ನಿಲ್ದಾಣದಲ್ಲಿ ಏನೆಲ್ಲಾ ಸೌಲಭ್ಯಗಳಿರಲಿವೆ. ಯಾವ ಕಾಮಗಾರಿ ಪ್ರಗತಿಯಲ್ಲಿದೆ. ಹಳೆಯ ನಿಲ್ದಾಣಕ್ಕೂ ಹೊಸ ರೈಲು ನಿಲ್ದಾಣಕ್ಕೂ ಏನೇಲ್ಲಾ ಬದಲಾವಣೆ ಆಗಲಿದೆ ಎನ್ನುವ ಪೂರ್ಣ ಮಾಹಿತಿ ಈ ವರದಿಯಲ್ಲಿದೆ.

ಇಂದು ಬೆಳಗ್ಗೆ 10.45ಕ್ಕೆ ಸರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ 554 ರೈಲು ನಿಲ್ದಾಣಗಳ ನವೀಕರಣ ಕಾಮಗಾರಿ ಹಾಗೂ 1500 ರಸ್ತೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ ಸಮ್ಮೇಳನಕ್ಕೆ ಜಿಲ್ಲೆಯಿಂದ 5 ಸಾವಿರ ನೌಕರರು ಭಾಗೀ

ಬಹುಷಃ ಮೋದಿ ಸರ್ಕಾರದ ಎರಡನೇ ಅವಧಿಯ ಅಂತಿಮ ಹಂತದಲ್ಲಿ ಚಿತ್ರದುರ್ಗ ರೈಲು ನಿಲ್ದಾಣದ ನವೀಕರಣ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಮಹತ್ವದ ಬೆಳವಣಿಗೆ ಎನ್ನಬಹುದು.

ಚಿತ್ರದುರ್ಗ ನಗರದ ರೈಲು ನಿಲ್ದಾಣ

ಈ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ರೈಲ್ವೇ ಖಾತೆ ರಾಜ್ಯ ಸಚಿವರುಗಳಾದ ರಾವ್ ಸಾಹೇಬ್ ಪಾಟೀಲ ದಾನ್ವೆ ಹಾಗೂ ದರ್ಶನ್ ಇರ್ದೊಶ್, ಚಿತ್ರದುರ್ಗ ಸಂಸದರು, ಕೇಂದ್ರ ಸಚಿವರೂ ಆದ ಎ.ನಾರಾಯಣಸ್ವಾಮಿ ಪ್ರತ್ಯಕ್ಷ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಮಾದಾರ ಚನ್ನಯ್ಯ ಮಠವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವುದಿಲ್ಲ

ಹೇಗಿರಲಿದೆ ನವೀಕರಣಗೊಳ್ಳುವ ಚಿತ್ರದುರ್ಗ ರೈಲು ನಿಲ್ದಾಣ:

ಜಿಲ್ಲಾ ಕೇಂದ್ರದಲ್ಲಿದ್ದರೂ ಒಂದೇ ಪ್ಲಾಟ್‍ಫಾರಂ, ಕಿರಿದಾದ ರೈಲು ನಿಲ್ದಾಣವಾಗಿರುವ ಚಿತ್ರದುರ್ಗ ರೈಲು ನಿಲ್ದಾಣಕ್ಕೆ ಸುಧೀರ್ಘ ಕಾಲದ ನಂತರ ನವೀಕರಣ ಭಾಗ್ಯ ದೊರೆತಿದೆ.

  • ಹೊಸದಾಗಿ ನಿರ್ಮಾಣವಾಗುವ ಈ ನಿಲ್ದಾಣದಲ್ಲಿ ಬುಕ್ಕಿಂಗ್ ಆಫೀಸ್, ವಿಶಾಲವಾದ ಸಭಾಂಗಣ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾದ ವೈಟಿಂಗ್ ರೂಮ್, ಶೌಚಾಲಯ, ಮೂತ್ರ ವಿಸರ್ಜನೆಗೆ ಪ್ರತ್ಯೇಕ ಜಾಗಗಳನ್ನು ನಿರ್ಮಾಣ ಮಾಡಲಾಗುತ್ತದೆ.
  • ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲಿ ಮಕ್ಕಳಿಗೆ ಹಾಲುಣಿಸುವ ಕ್ಯೂಬಿಕಲ್, ವಿಐಪಿ, ಎಕ್ಸ್‍ಕ್ಲೂಸಿವ್ ಲಾಂಜ್, ಪಾರ್ಸೆಲ್ ಆಫೀಸ್, ಕ್ಲಾಕ್ ರೂಂ, ಒಂದು ಕೆಫೆಟೇರಿಯಾ, ಐದು ಕ್ಯಾಟರಿಂಗ್ ಸ್ಟಾಲ್, ಎಟಿಎಂ ನಿರ್ಮಾಣಕ್ಕೆ ಸ್ಥಳ ಒದಗಿಸಿಕೊಡಲಾಗುತ್ತದೆ.
  • ಮಹಿಳೆ ಮತ್ತು ಪುರುಷರಿಗೆ ಡಾರ್ಮೆಂಟರಿ, ನಿವೃತ್ತರಿಗೆ ವಿಶ್ರಾಂತಿ ತಾಣ, ನಿಲ್ದಾಣದ ಹಳಿಗಳ ಪಕ್ಕದಲ್ಲಿ ಶೌಚಾಲಯ ಬ್ಲಾಕ್, ಪ್ಲಾಟ್‍ಫಾರಂ ಟಾಯ್ಲೆಟ್ಸ್ ಇರಲಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಗೆಲ್ಲಿಸೋಣ

  • ಸ್ಟೇಷನ್ ಕಟ್ಟದಲ್ಲಿ ಗ್ರಾನೈಟ್ ಫ್ಲೋರಿಂಗ್, ಪ್ಲಾಟ್‍ಫಾರಂ ಪಕ್ಕದಲ್ಲಿ ಕಾಂಕ್ರಿಟ್ ಫ್ಲೋರಿಂಗ್, ಪ್ಲಾಟ್‍ಫಾರಂ ಕೊನೆಯಲ್ಲಿ ಟೈಲ್ಸ್ ಅಳವಡಿಸಲಾಗುತ್ತದೆ.
  • ಪ್ಲಾಟ್‍ಫಾರಂ ಉದ್ದಕ್ಕೂ ಆಶ್ರಯ ಸಿಗುವಂತೆ ಶೆಲ್ಟರ್, ನಿಲ್ದಾಣದ ಹೊರ ಭಾಗದಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಸಮತಟ್ಟು ಮಾಡಿ ಪಾರ್ಕ್ ಇತ್ಯಾದಿ ಅಭಿವೃದ್ಧಿ ಮಾಡಲಾಗುತ್ತದೆ.
  • ಮಳೆ ನೀರು ಸಂಗ್ರಹಿಸುವ ರೈನ್ ವಾಟರ್ ಹಾರ್ವೆಸ್ಟಿಂಗ್, ಡ್ರೈನೇಜ್ ವ್ಯವಸ್ಥೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ.
  • ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಗಳ ಅಗಲೀಕರಣ, ನಿಲ್ದಾಣಕ್ಕೆ ಬರುವ ರಸ್ತೆಯಲ್ಲಿ ಸ್ವಾಗತ ಕಮಾನು ಅಳವಡಿಸಲಾಗುತ್ತದೆ.
  • ನಿಲ್ದಾಣದ ವ್ಯಾಪ್ತಿಯಲ್ಲಿ ಸಂಪೂರ್ಣ ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ವೈಫೈ ವ್ಯವಸ್ಥೆ, ರೈಲುಗಳು ಬರುವ ಮತ್ತು ಹೋಗುವ ಮಾಹಿತಿ ಸಿಗುವ ಡಿಜಿಟಲ್ ಪರದೆಗಳು (DISPLAY) ಎಲ್‍ಇಡಿ ಡಿಸಪ್ಲೆ, ಕೋಚ್‍ಗಳ ಮಾಹಿತಿ ನೀಡುವ ಎಲ್‍ಇಡಿ ಫಲಕಗಳನ್ನು ಅಳವಡಿಸಲಾಗುತ್ತದೆ.
  • ರೈಲು ನಿಲ್ದಾಣದ ಮುಂಭಾಗದ ಕಟ್ಟಡದ ಭಾಗವನ್ನು ಆಕರ್ಷಕಗೊಳಿಸಲಾಗುತ್ತದೆ.

ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಜಕಾತಿ ವಸೂಲಿಗೆ ಬ್ರೇಕ್

ಇವಿಷ್ಟೂ ಕಾಮಗಾರಿಗಳು ಆದಷ್ಟು ಬೇಗ ಮುಗಿದರೆ ಚಿತ್ರದುರ್ಗ ರೈಲು ನಿಲ್ದಾಣಕ್ಕೆ ಹೊಸತನ ಬರಲಿದೆ.
ಅಷ್ಟರಲ್ಲಿ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಕಾಮಗಾರಿ ಮುಗಿದು ಓಡಾಟ ಪ್ರಾರಂಭವಾದರೆ ಜಿಲ್ಲೆಯ ಚಿತ್ರಣವೇ ಬದಲಾಗುವುದರಲ್ಲಿ ಎರಡು ಮಾತಿಲ್ಲ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version