Connect with us

Nayakanahatti Tipperudraswamy Temple: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ | ವಿದೇಶಿ ಕರೆನ್ಸಿ ಪತ್ತೆ | 45 ಲಕ್ಷ ಸಂಗ್ರಹ 

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ | 45 ಲಕ್ಷ ಸಂಗ್ರಹ 

ಚಳ್ಳಕೆರೆ

Nayakanahatti Tipperudraswamy Temple: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ | ವಿದೇಶಿ ಕರೆನ್ಸಿ ಪತ್ತೆ | 45 ಲಕ್ಷ ಸಂಗ್ರಹ 

CHITRADURGA NEWS | 31 OCTOBER 2024

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ(Nayakanahatti Tipperudraswamy Temple)ಗಳಲ್ಲಿನ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯ ನಡೆಸಲಾಗಿದೆ. ಒಟ್ಟು 45.19 ಲಕ್ಷ ರೂ. ಸಂಗ್ರಹವಾಗಿದೆ. ಇದರಲ್ಲಿ ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ((Find Foreign Currency).

ದೇವಾಲಯದ ಅವರಣದಲ್ಲಿ ಬುಧವಾರ ಬ್ಯಾಂಕ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಕ್ಲಿಕ್ ಮಾಡಿ ಓದಿ: ಕನ್ನಡ ರಾಜ್ಯೋತ್ಸವ | 28 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬೆಳಿಗ್ಗೆ 10 ಗಂಟೆಗೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮೊದಲು ಹೊರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ಶಿರಸ್ತೇದಾ‌ರ್ ಹಾಗೂ ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ನಡೆಯಿತು.

ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 4 ಗಂಟೆಗೆ ಮುಕ್ತಾಯವಾಯಿತು.

ಹೊರಮಠದಲ್ಲಿ 9,36,327 ರೂ. ಒಳಮಠದಲ್ಲಿ 35.83,445 ರೂ. ಮೊತ್ತ ಸಂಗ್ರಹವಾಗಿದೆ. ನಾಲ್ಕು ತಿಂಗಳಲ್ಲಿ 45,19,772 ರೂ. ಮೊತ್ತ ಸಂಗ್ರಹವಾಗಿದೆ.

ಹುಂಡಿ ಹಣವನ್ನು ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಹೊರಮಠ ಮತ್ತು ಒಳಮಠಗಳ ಹುಂಡಿಯಲ್ಲಿ ಹಲವು ಬೆಳ್ಳಿ ನಾಣ್ಯ, ತೊಟ್ಟಿಲು, ಅಮೇರಿಕಾ, ಆಸ್ಟ್ರೇಲಿಯಾ ದೇಶದ ಕರೆನ್ಸಿ ದೊರೆತಿವೆ.

ಕ್ಲಿಕ್ ಮಾಡಿ ಓದಿ: Vanivilasa Dam: 127 ಅಡಿ ದಾಟಿದ ವಿವಿ ಸಾಗರ ನೀರಿನ ಮಟ್ಟ | ಕೋಡಿಗೆ 3 ಅಡಿ ಬಾಕಿ

ಕಾರ್ಯನಿರ್ವಾಹಕ ಅಧಿಕಾರಿ ಎಚ್.ಗಂಗಾಧರಪ್ಪ, ಶಿರಸ್ತೇದಾರ್ ಸದಾಶಿವಪ್ಪ, ಉಪ ತಹಶೀಲ್ದಾರ್ ಶರಣಬಸವ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ರತನ್ ಕುಮಾರ್ ದಯಾ, ಸಹಾಯಕ ವ್ಯವಸ್ಥಾಪಕ ಲೋಹಿತ್, ಸಿಬ್ಬಂದಿ ವಿರೂಪಾಕ್ಷ, ರಘುಮೂರ್ತಿ, ಪ್ರಿಯಾಂಕಾ, ಬ್ಯಾಂಕ್ ಮಿತ್ರರಾದ ಎಂ.ಬಿ.ಮಹಾಸ್ವಾಮಿ, ಬಿ.ಶಕುಂತಲಾ, ಕಂದಾಯ ನಿರೀಕ್ಷಕ ಆರ್. ಕೆ.ಎಂ.ಪ್ರಸನ್ನಕುಮಾರ್, ಪುರಂದರ್, ಚೇತನ್‌ಕುಮಾರ್, ಸರ್ವಮಂಗಳಾ, ಕಂದಾಯ ಇಲಾಖೆ ವೆಂಕಟೇಶ್, ದೇಗುಲ ಪಾರುಪತ್ತೇದಾರ ಸತೀಶ್ ಇದ್ದರು.

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version