ಮುಖ್ಯ ಸುದ್ದಿ
Vanivilasa Dam: 127 ಅಡಿ ದಾಟಿದ ವಿವಿ ಸಾಗರ ನೀರಿನ ಮಟ್ಟ | ಕೋಡಿಗೆ 3 ಅಡಿ ಬಾಕಿ
CHITRADURGA NEWS | 31 OCTOBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ (Vanivilasa Dam) ಜಲಾಶಯಕ್ಕೆ ನೀರಿನ ಒಳಹರಿವು ಇನ್ನೂ ಬರುತ್ತಿದ್ದು, ಇಂದು ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯದ ನೀರಿನ ಮಟ್ಟ 127.05 ಅಡಿ ತಲುಪಿದೆ.
ಅಕ್ಟೋಬರ್ 31 ಗುರುವಾರ ಬೆಳಗ್ಗೆ ನಡೆಸಿದ ಮಾಪನದಲ್ಲಿ ವಿವಿ ಸಾಗರ ಜಲಾಶಯಕ್ಕೆ 1040 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಶಿ ಬೆಲೆಯಲ್ಲಿ ಭರ್ಜರಿ ಏರಿಕೆ
130 ಅಡಿ ಎತ್ತರದ ಜಲಾಶಯದಲ್ಲಿ ಈಗ 27.95 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ನೀರು ಸಂಗ್ರಹಣಾ ಸಾಮಥ್ರ್ಯ 30 ಟಿಎಂಸಿ ಆಗಿದೆ.
1933 ರಲ್ಲಿ ಜಲಾಶಯ ನಿರ್ಮಾಣವಾದ ನಂತರ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಆನಂತರ ಹಲವು ಸಲ 120 ಅಡಿ ದಾಟಲು ಮಾತ್ರ ಸಾಧ್ಯವಾಗಿತ್ತು. ಆದರೆ, 2022 ರಲ್ಲಿ ಜಲಾಶಯ 135 ಅಡಿವರೆಗೆ ಭರ್ತಿಯಾಗಿ ಬರೋಬ್ಬರಿ ತಿಂಗಳುಗಳ ಕಾಲ ಕೋಡಿ ಹರಿದಿತ್ತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್
ಈಗ 2024ರಲ್ಲಿ ಮತ್ತೊಮ್ಮೆ ಜಲಾಶಯ 127 ಅಡಿ ದಾಟಿದ್ದು, ಬಹುತೇಕ ಭರ್ತಿಯಾದಂತಾಗಿದೆ. ಆದರೆ, ಕೋಡಿ ಬಿದ್ದು ನೀರು ಹೊರಗೆ ಹರಿಯಲು ಇನ್ನೂ 3 ಅಡಿ ಬಾಕಿಯಿದೆ.
ಈಗಾಗಲೇ ಜಲಾಶಯದ ಕೋಡಿಗೆ ನೀರು ತಲುಪಿದೆ. ಕೋಡಿ ಮೂಲಕ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಹೋಗುವ ರಸ್ತೆ ಮುಳುಗಡೆಯಾಗಿದೆ