Connect with us

Application; ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ | ಅರ್ಜಿ ಆಹ್ವಾನ

ಅರ್ಜಿ ಅಹ್ವಾನ

ಮುಖ್ಯ ಸುದ್ದಿ

Application; ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ | ಅರ್ಜಿ ಆಹ್ವಾನ

CHITRADURGA NEWS | 07 SEPTEMBER 2024

ಚಿತ್ರದುರ್ಗ: 2024ನೇ ಸಾಲಿನ ಮಕ್ಕಳ ದಿನಾಚರಣೆ ಅಂಗವಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ ನೀಡಲು ನಾಮ ನಿರ್ದೇಶನಕ್ಕಾಗಿ ಅರ್ಜಿ(Application) ಆಹ್ವಾನಿಸಾಗಿದೆ.

ಕ್ಲಿಕ್ ಮಾಡಿ ಓದಿ: DCC ಬ್ಯಾಂಕ್ ಚುನಾವಣೆ | ಶಾಸಕ ಟಿ.ರಘುಮೂರ್ತಿ ನಾಮಪತ್ರ ತಿರಸ್ಕøತ

ಪ್ರಾಣದ ಹಂಗು ತೊರೆದು, ಸಮಯ ಪ್ರಜ್ಞೆಯಿಂದ ಇತರ ವ್ಯಕ್ತಿಗಳ ಪ್ರಾಣ ರಕ್ಷಿಸಿ ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ ಹೊಯ್ಸಳ ಹಾಗೂ ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಲಾಗುವುದು.

ಸಾಹಸ ಘಟನೆಯು 1 ಆಗಸ್ಟ್ 2023 ರಿಂದ 31 ಜುಲೈ 2024ರ ಒಳಗೆ ನಡೆದಿರಬೇಕು. 1 ಆಗಸ್ಟ್ 2006 ರಂದು ಹಾಗೂ ನಂತರ ಜನಿಸಿದ ಮಕ್ಕಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ.10,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

ಮಕ್ಕಳ ಕ್ಷೇತ್ರದಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ತಲಾ ರೂ.25,000 ಹಾಗೂ ಸಂಸ್ಥೆಗಳಿಗೆ ತಲಾ ರೂ.10,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಕ್ಲಿಕ್ ಮಾಡಿ ಓದಿ: ಎತ್ತಿನಹೊಳೆ Project ಬಟನ್ ಹೊಡೆಯಿರಿ | ಜನರಿಗೆ ಸುಳ್ಳು ಹೇಳಬೇಡಿ | ಸಂಸದ ಗೋವಿಂದ ಕಾರಜೋಳ ಗರಂ

ಅರ್ಜಿ ನಮೂನೆಯನ್ನು ಚಿತ್ರದುರ್ಗ ನಗರದ ಸ್ಟೇಡಿಯಂ ಹತ್ತಿರದ ಜಿಲ್ಲಾ ಬಾಲಭವನದ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಪಡೆಯಬಹುದು.

ಅರ್ಜಿಯನ್ನು ಕನ್ನಡ ಭಾಷೆಯಲ್ಲಿಯೇ ಭರ್ತಿ ಮಾಡಿ, ಸೆಪ್ಟೆಂಬರ್ 20 ರ ಒಳಗಾಗಿ ಕಚೇರಿ ಸಲ್ಲಿಸುವಂತೆ ಉಪನಿರ್ದೇಶಕಿ ಭಾರತಿ ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version