ಮುಖ್ಯ ಸುದ್ದಿ
ಗುರುವಾರ ತಡರಾತ್ರಿ ಸುರಿದ ಮಳೆರಾಯ | ಯಾವ ಊರಿನಲ್ಲಿ ಎಷ್ಟು ಮಳೆಯಾಗಿದೆ ಈ ವರದಿ ನೋಡಿ.
ಚಿತ್ರದುರ್ಗ ನ್ಯೂಸ್:ಕಳೆದೊಂದು ತಿಂಗಳಿಂದ ಸುದ್ದಿ ಸುಳಿವಿಲ್ಲದಂತೆ ಮಾಯವಾಗಿದ್ದ ಮಳೆ, ರೈತರ ಬೆಳೆಗಳು ಬಾಡಿ, ಒಣಗಿದ ನಂತರ ದಾಂಗುಡಿ ಇಟ್ಟಿದೆ. ಮಳೆ ಬಂದಿದ್ದು ಸಂತೋಷವೇ ಆದರೂ, ರೈತರ ಮೊಗದಲ್ಲಿ ಸಂತಸವಿಲ್ಲ.
ತೋಟಗಾರಿಕೆ ಬೆಳೆಗಳಿಗೆ ಈ ಮಳೆ ಅನುಕೂಲವಾಗಲಿದೆ. ಬೇಸಿಗೆಯಲ್ಲಿ ಇನ್ನಷ್ಟು ತೊಂದರೆಯಾಗದಂತೆ, ಕುಡಿಯುವ ನೀರಿನ ಸಮಸ್ಯೆ ಬಾಧಿಸದಂತೆ ಇರಲು ಇನ್ನಷ್ಟು ಮಳೆಯ ಅಗತ್ಯವಿದೆ. ಜಿಲ್ಲೆಯಾದ್ಯಂತ ಹತ್ತಿ, ಮಕ್ಕೆಜೋಳ, ಶೇಂಗಾ ಸೇರಿದಂತೆ ಎಲ್ಲ ಬೆಳೆಗಳು ಮಳೆಯಿಲ್ಲದೆ ಹಾನಿಯಾಗಿದ್ದು, ಇನ್ನೇನು ಸರ್ಕಾರ ಬರ ಘೋಷಣೆಯ ತಯಾರಿಯಲ್ಲಿದೆ.
ಈ ನಡುವೆ ಗುರುವಾರ ಸುರಿದ ಮಳೆಯ ವಿವರದನ್ವಯ ಜಿಲ್ಲೆಯ ಹಿರಿಯೂರಿನಲ್ಲಿ 114 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಬಬ್ಬೂರಿನಲ್ಲಿ 68 ಮಿ.ಮೀ, ಇಕ್ಕನೂರು 15.2 ಮಿ.ಮೀ, ಈಶ್ವರಗೆರೆ 11.2 ಮಿ.ಮೀ, ಸುಗೂರು 16.3 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1 ರಲ್ಲಿ 42.2 ಮಿ.ಮೀ, ಚಿತ್ರದುರ್ಗ-2 ರಲ್ಲಿ 1.4 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರದಲ್ಲಿ 8.6 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು 3.6 ಮಿ.ಮೀ, ರಾಯಾಪುರದಲ್ಲಿ 1 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಮತ್ತೋಡು 3.2 ಮಿ.ಮೀ, ಮಾಡದಕೆರೆ 22 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 52 ಮಿ.ಮೀ, ಪರಶುರಾಂಪುರ 1.2 ಮಿ.ಮೀ, ತಳುಕು 44.2 ಮಿ.ಮೀ, ಡಿ.ಮರಿಕುಂಟೆ 2.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)