ಲೋಕಸಮರ 2024
ಯಡಿಯೂರಪ್ಪ ವಿರುದ್ಧ ಗುಡುಗಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ
CHITRADURGA NEWS | 28 MARCH 2024
ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೇಟ್ ಪಡೆಯಲು ತೀವ್ರ ಪೈಪೋಟಿ ನಡೆಸಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್ ಅವರಿಗೆ ಟಿಕೇಟ್ ಕೈ ತಪ್ಪಿದೆ. ಇದರಿಂದ ಅಸಮಧಾನ ಹೆಚ್ಚಾಗಿದ್ದು, ಶಾಸಕ ಚಂದ್ರಪ್ಪ ಹಾಗೂ ರಘುಚಂದನ್ ಇಬ್ಬರೂ ಬಿಜೆಪಿಯ ಕೆಲ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಷ್ಠಾವಂತ ಬೆಂಬಲಿಗ ಎಂದೇ ಗುರುತಿಸಿಕೊಂಡಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬಿ.ಎಸ್.ವೈ ವಿರುದ್ಧ ಬಹಿರಂಗ ಅಸಮಧಾನ ಹೊರಹಾಕಿದ್ದಾರೆ.
ಕ್ಲಿಕ್ ಮಾಡಿ ಓದಿ: ಕೈ ತಪ್ಪಿದ ಬಿಜೆಪಿ ಟಿಕೆಟ್ | ಪ್ರಬಲ ಆಕಾಂಕ್ಷಿ ರಘುಚಂದನ್ ಅಸಮಾಧಾನ | ನಾಳೆ ಬೆಂಬಲಿಗರ ಸಭೆ
ಚಿತ್ರದುಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನದವರೆಗೆ ನನ್ನ ಮಗ ರಘುಚಂದನ್ ಹೆಸರು ಅಂತಿಮ ಎಂದೇ ಹೇಳಲಾಗಿತ್ತು. ಎಲ್ಲ ಮಾಧ್ಯಮಗಳಲ್ಲೂ ಘೋಷಣೆ ಮಾತ್ರ ಬಾಕಿ ಎಂದು ಸುದ್ದಿಯೂ ಆಗಿತ್ತು. ಆದರೆ, ಕೊನ ಕ್ಷಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಟಿಕೇಟ್ ತಪ್ಪಿದೆ ಎಂದು ಚಂದ್ರಪ್ಪ ಹೇಳಿದ್ದಾರೆ.
ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡದಿದ್ದರೆ ನಾನು ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಯಡಿಯೂರಪ್ಪ ಹೈಕಮಾಂಡ್ ನಾಯಕರಿಗೆ ಹೇಳಿದ್ದರಿಂದ ನನ್ನ ಮಗನಿಗೆ ಟಿಕೇಟ್ ಮಿಸ್ ಆಗಿದೆ ಎಂದು ಎಂ.ಚಂದ್ರಪ್ಪ ತಿಳಿಸಿದ್ದಾರೆ.
2019ರಲ್ಲೇ ನನ್ನ ಮಗನಿಗೆ ಲೋಕಸಭಾ ಟಿಕೇಟ್ ಕೇಳಲಾಗಿತ್ತು. ಆಗ, ಮುಂದಿನ ಬಾರಿ ಕೊಡುವುದಾಗಿ ತಿಳಿಸಿ ನಾರಾಯಣಸ್ವಾಮಿಗೆ ಟಿಕೇಟ್ ನೀಡಿದ್ದರು. ಆಗ ನನ್ನ ಕ್ಷೇತ್ರ ಹೊಳಲ್ಕೆರೆಯಲಿ 40 ಸಾವಿರ ಮತಗಳ ಲೀಡ್ ಕೊಡಲಾಗಿತ್ತು. 2024ರ ಲೋಕಸಭಾ ಚುನಾವಣೆಗಟ ಟಿಕೇಟ್ ಕೊಡುವುದಾಗಿ ಸಂತೋಷ್‌ಜೀ ಕೂಡಾ ಹೇಳಿದ್ದರು. ಆಗ ಇದೇ ಗೋವಿಂದ ಕಾರಜೋಳ ನನ್ನ ಮಗನಿಗೆ ಕ್ಷೇತ್ರದಲ್ಲಿ ಓಡಾಡಲು ಹೇಳಿದ್ದರು ಎಂದು ವಿವರಿಸಿದರು.
ಕ್ಷೇತ್ರದ ಹೊರಗಿನವರಿಗೆ ಟಿಕೇಟ್ ಕೊಟ್ಟಾಗ ಪಕ್ಷದ ಸಭೆಯಲ್ಲೂ ಧ್ವನಿ ಎತ್ತಿದ್ದೆ. ಈ ಹಿನ್ನೆಲೆಯಲ್ಲಿ ನಡೆದ ಹಲವು ಸಮೀಕ್ಷೆಗಳಲ್ಲಿ ರಘುಚಂದನ್ ಹೆಸರು ಅಂತಿಮವಾಗಿತ್ತು. ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ಅವರ ಪಟ್ಟಿಯಲ್ಲಿ ರಘುಚಂದನ್ ಹೆಸರಿತ್ತು. ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲೂ ನನ್ನ ಮಗನ ಹೆಸರಿತ್ತು. ನಿನ್ನೆ ಸಂಜೆ ಯಡಿಯೂರಪ್ಪ ಅವರಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಲಿಕ್ ಮಾಡಿ ಓದಿ: ಕುಡಿಯುವ ನೀರು ಪ್ರಕರಣ| ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತು
ಹಿಂದೆ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ 6 ತಿಂಗಳ ಮೊದಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅವರ ಜೊತೆಗೆ ಹೋಗಿದ್ದೆ. ಅವರ ಮಗ ಬಿ.ವೈ.ರಾಘವೇಂದ್ರ ಕೂಡಾ ಆಗ ಇನ್ನೂ ಬಿಜೆಪಿಯಲ್ಲೇ ಇದ್ದರು. 2008 ರಲ್ಲಿ 110 ಸ್ಥಾನ ಗೆದ್ದಾಗ ನಮ್ಮ ಸಮಾಜದವರು ತ್ಯಾಗ ಮಾಡಿದ್ದರು. ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಬೆಂಬಲಿಸಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದರು. ಅಂಥ ಮೂರು ಮಂದಿಯನ್ನ ಸಂಪುಟದಿಂದ ತೆಗೆದು ಅನ್ಯಾಯ ಮಾಡಿದ್ದರು. ಆದರೂ ಕೂಡಾ ನಾನು ಇವರನ್ನ ಎಂದೂ ಕೈಬಿಟ್ಟು ಹೋಗಿರಲಿಲ್ಲ. ನಮಗೆ ಯಡಿಯೂರಪ್ಪ ಈ ಬಹುಮಾನ ಕೊಟ್ಟಿದ್ದಾರೆ ಎಂದು ಚಂದ್ರಪ್ಪ ನೊಂದುಕೊಂಡರು.
ಗೋವಿಂದ ಕಾರಜೋಳ ಹಾಗೂ ಯಡಿಯೂರಪ್ಪ ಅವರ ನಡುವೆ ಅದೇನಿದೆಯೋ ಗೊತ್‌ತಿಲ್ಲ 550 ಕಿ.ಮೀ ದೂರದ ವ್ಯಕ್ತಿಯನ್ನು ಚಿತ್ರದುರ್ಗಕ್ಕೆ ಕರೆತಂದು ಟಿಕೇಟ್ ಕೊಟ್ಟಿದ್ದಾರೆ. ನಮಗೆ ತುಂಬಾ ಅನ್ಯಾಯ ಮಾಡಿದ್ದಾರೆ. ಬಿ.ವೈ.ವಿಜಯೇಂದ್ರ ಯುವಕ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಮಾಡಿದ್ದಾರೆ, ನನ್ನ ಮಗನಿಗೆ ಟಿಕೆಟ್ ಕೊಡ್ಲಿಲ್ಲ. ನಮ್ಮ ಸಮಾಜದ ಎಲ್ಲರೂ ಕೈ ಬಿಟ್ಟು ಹೋಗಿದ್ದಾರೆ, ನಾನು ಮಾತ್ರ ಆಧಾರವಾಗಿದ್ದೆ. ಈಗ ನಮ್ಮ ಸಮಾಜ ಮುಂದಿನ ಹೆಜ್ಜೆ ಇಡುತ್ತದೆ. ಮೋದಿ ದೇಶ & ರಾಜ್ಯಕ್ಕೆ ಅಗತ್ಯ ಎಂದು ನಾನು ಭಾವಿಸಿದ್ದೇನೆ. ಬೊಮ್ಮಾಯಿ ಸಂಪುಟದಲ್ಲೂ ನನಗೆ ಅನ್ಯಾಯ ಮಾಡಿದ್ದಾರೆ. ಹಗಲು ರಾತ್ರಿ ಯಡಿಯೂರಪ್ಪ ಮನೆಗೆ ನಾನು ದುಡಿದೆ, ನಾನು ಏನೂ ಅನ್ಯಾಯ ಮಾಡಿದ್ದೆ ಎಂದು ಪ್ರಶ್ನಿಸಿದರು. ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ಅಭಿಮಾನಿಗಳು, ಬೆಂಬಲಿಗರು, ಕಾಯಕತರ ಸಭೆ ಕರೆದಿದ್ದೇವೆ. ಅಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.
ಕ್ಲಿಕ್ ಮಾಡಿ ಓದಿ: ಹೊಸಪೇಟೆ ಕಾರಿನಲ್ಲಿತ್ತು ₹ 20.35 ಲಕ್ಷ | ಚೆಕ್ ಪೋಸ್ಟ್‌ನಲ್ಲಿ ಹಣ ವಶ
ಚಿತ್ರದುರ್ಗದ ಮಹಾನ್ ನಾಯಕನ ಆಟ:
ಚಿತ್ರದುರ್ಗದಲ್ಲಿ ಒಬ್ಬ ಮಹಾನ್ ನಾಯಕ ಇದ್ದಾರೆ. ಅವರ ಆಟ ಜಾಸ್ತಿ ಆಗಿದೆ. ಈಗಾಗಲೇ ಶಾಸ್ತಿ ಆಗಿದೆ. ಮುಂದೆಯೂ ಆಗುತ್ತದೆ. ಸೋತವರನ್ನು ಕರೆತಂದು ನಮ್ಮ ಪಕ್ಷದಲ್ಲಿ ಎಂಎಲ್ಸಿ ಮಾಡಿದ್ದೆವು. ನಾನು ನಂಬಿಸಿ ಮೋಸ ಮಾಡಲ್ಲ. ಮದಕರಿ ಕೋಟೆಗೆ ನುಗ್ಗಲು ಸಂಧಿ ತೋರಿಸಲು ತೋರಿಸಬೇಕು. ಅಂಥವರು ಇದ್ದಾರೆ ಒಳಗೆ ಬಂದಾಗ ಏನಾಯ್ತು, ಮುಂದೆ ಮಹಾನ್ ನಾಯಕನಿಗೆ ಅದೇ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.