ಮುಖ್ಯ ಸುದ್ದಿ
ಭಾಗ್ಯಲಕ್ಷ್ಮೀ ಬಾಂಡ್ | ಹೇಗೆ ಮತ್ತು ಎಲ್ಲಿ ಮಾಡಿಸಬೇಕು, ಇಲ್ಲಿದೆ ಮಾಹಿತಿ..
CHITRADURGA NEWS | 08 MARCH 2025
ಚಿತ್ರದುರ್ಗ: ಭಾಗ್ಯಲಕ್ಷ್ಮೀ (ಸುಕನ್ಯ ಸಮೃದ್ಧಿ ಯೋಜನೆ) ಯೋಜನೆಯು 2006-07ನೇ ಸಾಲಿನಿಂದ ಜಾರಿಯಾಗಿದ್ದು, ಪ್ರಸ್ತುತ ನೋಂದಣಿ ಜಾರಿಯಲ್ಲಿದ್ದು, ಈಗಾಗಲೇ ನೋಂದಣಿಯಾಗಿ ಸೌಲಭ್ಯ ಪಡೆದಿರುವ ಫಲಾನುಭವಿಗಳಿಗೆ 2024-25ನೇ ಸಾಲಿನಿಂದ ಪರಿಪಕ್ವ ಮೊತ್ತ ಒದಗಿಸಬೇಕಾಗಿರುತ್ತದೆ.
Also Read: ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ದಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಪರಿಪಕ್ವ ಮೊತ್ತ ಒದಗಿಸಲು ಹಾಗೂ ಹೊಸದಾಗಿ ಭಾಗ್ಯಲಕ್ಷ್ಮೀ ಬಾಂಡ್ (ಸುಕನ್ಯ ಸಮೃದ್ಧಿ ಯೋಜನೆ) ಪಡೆಯುವ ಕ್ರಮಗಳ ಬಗ್ಗೆ ತಾಲ್ಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಹಾಗೂ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದಾಗಿದೆ.
ಭಾಗ್ಯಲಕ್ಷ್ಮೀ (ಸುಕನ್ಯ ಸಮೃದ್ಧಿ ಯೋಜನೆ) ಯೋಜನೆಯಡಿ ನೋಂದಣಿಯಾಗಿರುವ ಎಲ್ಲಾ ಫಲಾನುಭವಿಗಳಿಗೆ, ಸಾರ್ವಜನಿಕರ ಗಮನಕ್ಕೆ ತರಬಯಸುವುದೆನೆಂದರೆ ಈ ಯೋಜನೆಯು ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ನೋಂದಣಿ ಹಾಗೂ ಪರಿಪಕ್ವ ಮೊತ್ತ ಪಾವತಿಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಯಾವುದೇ ತಾಲ್ಲೂಕು ಕಛೇರಿಗಳಲ್ಲಿ ಮದ್ಯವರ್ತಿಗಳಾಗಲೀ ಅಥವಾ ಸಿಬ್ಬಂದಿಗಳಾಗಲೀ ಹಣ ಕೇಳಿದಲ್ಲಿ ನೇರವಾಗಿ ಸಂಬಂಧಪಟ್ಟ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದಾಗಿದೆ.
Also Read: QR ಕೋಡ್ ಸ್ಕ್ಯಾನ್ ಮಾಡಿ, ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ…
ಹೆಚ್ಚಿನ ಮಾಹಿತಿಗಾಗಿ ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು-9448566058, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು-9448873683, ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು-9945888425, ಹಿರಿಯೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು-7892661086, ಹೊಳಲ್ಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು-9481182921, ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು -8867404421, ಮೊಳಕಾಲ್ಕೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು -7353002417, ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು- 9480500575 ಅವರನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ತಿಳಿಸಿದ್ದಾರೆ.