ಮುಖ್ಯ ಸುದ್ದಿ
ಮಹಾದೇವಪುರ ಬಳಿ ಭರ್ಜರಿ ಮಳೆ | ನೀರು ಹರಿಯುವ ವೀಡಿಯೋ ವೈರಲ್
CHITRADURGA NEWS | 09 MAY 2024
ಚಿತ್ರದುರ್ಗ: ಮಳೆಯಿಲ್ಲದೆ ಕಂಗೆಟ್ಟಿರುವ ಜನತೆಗೆ ಈಗ ಅಲ್ಲಲ್ಲಿ ಸುರಿಯುತ್ತಿರುವ ಮಳೆ ತುಸು ನೆಮ್ಮದಿ ನೀಡಿದೆ.
ಜಿಲ್ಲೆಯ ಕೆಲವೇ ಭಾಗದಲ್ಲಿ ಮಳೆಯಾಗಿದೆ. ಇನ್ನೂ ಜಿಲ್ಲೆ ಪೂರ್ತಿ ಮಳೆ ಬಂದಿಲ್ಲ. ಆದರೆ, ಮೋಡ ಕವಿದ ವಾತಾವರಣ ಇರುವುದರಿಂದ ಇಂದಲ್ಲ, ನಾಳೆ ಬಂದೇ ಬರುತ್ತೆ ಎನ್ನುವ ನಂಬಿಕೆ ರೈತರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: ಹಿರೇಗುಂಟನೂರಿನಲ್ಲಿ ಗಾಳಿಯ ಅವಾಂತರ | ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಈ ನಡುವೆ ಮೇ.8 ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಪುಟ್ಟ ಹಳ್ಳವೊಂದರಲ್ಲಿ ಭರ್ಜರಿ ನೀರು ಹರಿಯುತ್ತಿರುವ ವೀಡಿಯೋ ವೈರಲ್ ಆಗಿದೆ.
ಅಡಿಕೆ ತೋಟಗಳೆಲ್ಲಾ ಒಣಗುತ್ತಿವೆ. ಯಾವ ಊರಿನಲ್ಲಿ ಬೋರ್ ವೆಲ್ ಹಾಕಿಸಿದರೂ ಹನಿ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೆ. ಇಂತಹ ಹೊತ್ತಿನಲ್ಲಿ ಇಷ್ಟೊಂದು ಮಳೆ ಬಂತಾ ಎಂದು ನಂಬುವುದೇ ಕಷ್ಟವಾಗಿದೆ.
ಇದನ್ನೂ ಓದಿ: ಸಚಿವ ಸಂಪುಟದಿಂದ ಡಿಕೆಶಿ ವಜಾಗೊಳಿಸಿ | ಜೆಡಿಎಸ್ ಅಗ್ರಹ
ಈ ಸುದ್ದಿಯ ಜೊತೆಗೆ ವೀಡಿಯೋ ತುಣಕನ್ನೂ ಹಾಕಿದ್ದೇವೆ ನೋಡಿ ಸಂಭ್ರಮಿಸಿ. ಹಾಗೇಯೇ ಮುಂದೆ ನಾವು ನೀಡುವ ಮಹತ್ವದ ಸುದ್ದಿ, ಮಾಹಿತಿಗಳಿಗಾಗಿ ಈ ಫೇಸ್‍ಬುಕ್ ಪೇಜ್ ಫಾಲೋ ಮಾಡಿ.
ವೀಡಿಯೋ : https://www.facebook.com/share/v/XaT8XaAuKKHmJsp4/?mibextid=oFDknk
ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಶಿವಗಂಗಾ ನಡುವೆ ಇರುವ ಪುಟ್ಟ ಗ್ರಾಮ ಮಹಾದೇವಪುರ ಬಳಿ ಹಳ್ಳ ಹರಿದಿರುವ ವೀಡಿಯೋ ವಾಟ್ಸಪ್, ಫೇಸ್‍ಬುಕ್ ಸ್ಟೇಟಸ್‍ಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಮಳೆಯ ನೀರು ಹರಿಯುತ್ತಿರುವುದನ್ನು ರೈತರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಮತ್ತೊಮ್ಮೆ ಹರಿಯಲಿದೆ ನೀರು | ಡಿಸಿ ನೇತೃತ್ವದ ಸಭೆಯಲ್ಲಿ ತೀರ್ಮಾನ
ನೀರು ಹರಿಯುತ್ತಿರುವ ಪಕ್ಕದಲ್ಲೇ ಇರುವ ಅಡಿಕೆ ತೋಟವೊಂದು ಬಾಡಿ ಹೋಗಿರುವ ದೃಶ್ಯವೂ ಕಾಣುತ್ತದೆ. ಇಂತಹ ಹೊತ್ತಿನಲ್ಲಿ ಸಮೃದ್ಧ ಎನ್ನುವಂತೆ ಮಳೆ ಬಂದಿರುವುದು ಸಮಾಧಾನ ತಂದಿದೆ.