ಹೊಸದುರ್ಗ
Heavy rain; ಹೊಸದುರ್ಗ ಭಾಗದಲ್ಲಿ ಭಾರೀ ಮಳೆ | ಮತ್ತೆ ಮೈದುಂಬಿದ ವೇದಾವತಿ | ಕೆಲ್ಲೋಡು ಬ್ಯಾರೇಜ್ ಭರ್ತಿ
CHITRADURGA NEWS | 14 October 2024
ಹೊಸದುರ್ಗ: ಹೊಸದುರ್ಗ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ(Heavy rain)ಯಾಗಿದ್ದು, ವೇದಾವತಿ ನದಿ ಮೈದುಂಬಿದೆ.
ಕ್ಲಿಕ್ ಮಾಡಿ ಓದಿ: Astrology; ದಿನ ಭವಿಷ್ಯ | 14 ಅಕ್ಟೋಬರ್ | ವಾಹನ ಖರೀದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಶುಭ ಸುದ್ದಿ
ಕೆಲ್ಲೋಡು ಬಳಿ ವೇದಾವತಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಮತ್ತೆ ಜೀವಕಳೆಯೊಂದಿಗೆ ಹರಿಯುತ್ತಿದೆ.
ಬ್ಯಾರೇಜ್ ಭರ್ತಿಯಾಗಿ ನೀರು ತೊರೆಯಾಗಿ ಹರಿಯುವ ದೃಶ್ಯ ನಯನ ಮನೋಹರವಾಗಿದೆ.
ವಿವಿ ಸಾಗರ ಒಳಹರಿವು ಹೆಚ್ಚಳ:
ವ್ಯಾಪಕ ಮಳೆಯಿಂದಾಗಿ ವಿವಿ ಸಾಗರದ ಒಲಹರಿವಿನ ಪ್ರಮಾಣ ಹೆಚ್ಚಾಗಿದೆ.
ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ ವಿವಿ ಸಾಗರಕ್ಕೆ 1040 ಕ್ಯೂಸೆಕ್ ನೀರು ಹರಿದು ಬಂದಿದೆ.
ಕ್ಲಿಕ್ ಮಾಡಿ ಓದಿ: Madakari Nayaka; ಮದಕರಿ ಪ್ರತಿಮೆಗೆ ವಾಲ್ಮೀಕಿ ಶ್ರೀ ಪುಷ್ಪಾರ್ಚನೆ | ದುರ್ಗದ ದೊರೆಯ ಅದ್ದೂರಿ ಜಯಂತಿಗೆ ನಿರ್ಧಾರ
ಸದ್ಯ ಜಲಾಶಯದ ನೀರಿನ ಮಟ್ಟ 122.35 ಅಡಿವರೆಗೆ ನೀರು ಬಂದಿದ್ದು, 24.01 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ವಿವಿ ಸಾಗರ ಜಲಾಶಯದಲ್ಲಿ 122.15 ಅಡಿವರೆಗೆ ನೀರು ಬಂದಿದ್ದು, ಜಲಾಶಯದಲ್ಲಿ 23.76 TMC ನೀರಿತ್ತು.