ತಾಲೂಕು
ಸಜ್ಜನಕೆರೆ ಬುಡೇನ್ ಸಾಬ್ ಶ್ರೀಗಳಿಗೆ ಗುರುವಂದನೆ | ಹರಿದು ಬಂದ ಭಕ್ತ ಸಾಗರ
ಚಿತ್ರದುರ್ಗ ನ್ಯೂಸ್.ಕಾಂ: ಗುರು ಮತ್ತು ಗುರಿಯನ್ನು ಮರೆತವರು ಏನನ್ನು ಸಾಧಿಸಲಾರರು ಎಂದು ಕಬೀರಾನಂದ ಆಶ್ರಮದ ಪೀಠಾಧಿಪತಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಸಜ್ಜನಕೆರೆ ಗ್ರಾಮದಲ್ಲಿ ನಡೆದ ಬುಡೇನ್ ಸಾಬ್ ಶ್ರೀಗಳ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಾವು ಆಸ್ಪತ್ರೆಗೆ ಹೋದಾಗ ವೈದ್ಯರ ಬಳಿ ನಮ್ಮ ಸಂಕಷ್ಟಕ್ಕೆ ಔಶಧಿ ಪಡೆಯುವಾಗ ಹಣ ನೀಡುತ್ತೇವೆ.ಅವರು ನಮಗೆ ಅಗತ್ಯ ಚಿಕಿತ್ಸೆ ನೀಡುತ್ತಾರೆ ಹೊರೆತು ಅವರಿಗೆ ವಂದನೆ ಸಲ್ಲಿಸಲ್ಲ.ಶಾಲೆಯಲ್ಲಿ ಪಾಠಹೇಳಿದ ಗುರುಗಳ ಸಹಕಾರದಿಂದ ಉನ್ನತ ಸ್ಥಾನಗಳಿಗೆ ತೆರಳುವವರು ಸಹ ಗುರುವಂದನೆ ಸಲ್ಲಿಸಲು ಮರೆಯುತ್ತಾರೆ.ಆದರೆ ಉಪಕಾರವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ.ಆಗ ನಮ್ಮ ಜನ್ಮ ಸಾರ್ಥಕವಾಗಲಿದೆ. ಅಂತಹ ಕೆಲಸವನ್ನು ಮಾಡುವುದನ್ನು ಅನೇಕರು ಮರೆಯುತ್ತಾರೆ.
ಆದರೆ ಸೇವಾ ಭಾವದಿಂದ ಸೇವೆ ಮಾಡಿದಾಗ, ಮತ್ತೊಬ್ಬರ ಸಂಕಷ್ಟ ಪರಿಹಾರಕ್ಕೆ ನಿಸ್ವಾರ್ಥದಿಂದ ಶ್ರಮಿಸಿದಾಗ ಮಾತ್ರ ಇಂತಹ ಗುರುವಂದನೆ ಲಭಿಸಲಿದೆ. ಆ ಕಾರ್ಯವನ್ನು ಬುಡೇನ್ ಸಾಬ್ ಸ್ವಾಮೀಜಿ ಮಾಡ್ತಾ ಬಂದಿದ್ದಾರೆ. ಹೀಗಾಗಿ ಅವರ ಅಪಾರ ಭಕ್ತವೃಂದದ ಸಮ್ಮುಖದಲ್ಲಿ ಬುಡೇನ್ ಸಾಬ್ ಅವರಿಗೆ ಗುರುವಂದನೆ ಲಭಿಸಿದೆ. ಯಾವು ಮಠ, ಮಂತ್ರ ಹಾಗು ಕಟ್ಟುಪಾಡುಗಳಿಲ್ಲದೇ ಅವರ ದಿವ್ಯಜ್ಞಾನ ಹಾಗು ವೀಭೂತಿಯ ಮಹಿಮೆಯಿಂದ ಲಕ್ಷಾಂತರ ಜನಭಕ್ತರ ಸಂಕಷ್ಟಕ್ಕೆ ನಿಸ್ವಾರ್ಥದ ಪರಿಹಾರ ಹೇಳುವ ಸಂತ ಬುಡೇನ್ ಸಾಬ್ ಅವರಿಗೆ ಗುರುವಂದನೆ ಸಲ್ಲಿಸಿರೋದು ಅರ್ಥಪೂರ್ಣ ಎನಿಸಿದೆ ಎಂದರು.
ಇನ್ನು ಬುಡೇನ್ ಸಾಬ್ ಅವರು, ಇಸ್ಲಾಂ ಧರ್ಮದಲ್ಲಿ ಹುಟ್ಟಿ, ಹಿಂದು ಪರಂಪರೆಯ ಬಸವೇಶ್ವರರನ್ನು ಆರಾಧಿಸುತ್ತಿದ್ದಾರೆ. ಜಾತಿ ಧರ್ಮಗಳನ್ನು ಮೆಟ್ಟಿ,ನಿಂತಿದ್ದಾರೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ತತ್ವ ಮುಖ್ಯ ಎನಿಸಿದೆ.
ಸಂತ ಶಿಶುನಾಳ ಶರೀಫರ ಆದರ್ಶಗಳನ್ನು ಬುಡೇನ್ ಸಾಬ್ ಮೈಗೂಡಿಸಿಕೊಂಡಿದ್ದು, ಅವರಲ್ಲಿಗೆ ಬರುವ ಭಕ್ತರನ್ನು ಸನ್ಮಾರ್ಗದಲ್ಲಿ ಸಾಗಿಸುತ್ತಿದ್ದಾರೆ. ಕ್ರೌರ್ಯ,ದುಶ್ಚಟಗಳ ದಾಸರಾದವರಿಗೆ ಗುರುಗಳ ತತ್ವಭೋಧನೆ ಮೂಲಕ ಮನಪರಿವರ್ತಿಸಿ ಸಾತ್ವಿಕ ನೆಲೆಗೆ ಕೊಂಡೊಯ್ಯುತಿದ್ದಾರೆ.
ವೈದ್ಯಕೀಯ ಲೋಕಕ್ಕೆ ಸವಾಲೆನಿಸಿದ್ದ ಅನೇಕರ ರೋಗರುಜಿನಗಳು ಮತ್ತು ಸಂಕಷ್ಟಗಳಿಗೆ ವಿಭೂತಿಯಿಂದಲೇ ಪರಿಹಾರ ಕಲ್ಪಿಸಿರುವ ಸಂತ ಬುಡೇನ್ ಸಾಬ್ ಈ ಭಾಗದ ಒಂದು ಶಕ್ತಿ ಎನಿಸಿದ್ದಾರೆ.ಇಂತಹ ಯುಗದಲ್ಲಿ ನಿಸ್ವಾರ್ಥದಿಂದ ಸೇವೆ ಮಾಡುತ್ತಾ ಸರಳತೆಯನ್ನು ಮೈಗೂಡಿಸಿಕೊಂಡಿರುವ ಸಂತ ನಿಮ್ಮೊಂದಿಗೆಇರೋದು ನಮ್ಮೆಲ್ಲರ ಪುಣ್ಯ ಎನಿಸಿದೆ. ಇವರಿಗೆ ದೇವರು ಆಯುರ್ ಆರೋಗ್ಯ ಕೊಟ್ಟು,ಇನ್ನಷ್ಟು ಜನ ಭಕ್ತರಿಗೆ ಇವರ ಆಶೀರ್ವಾದ ಸಿಗುವಂತಾಗಲೊ, ಜನರ ಸಂಕಷ್ಟ ಬಗೆಹರೆಸುವ ಶಕ್ತಿ ಮತ್ತಷ್ಟು ಹೆಚ್ಚಾಗಲಿ ಎಂದ ಶುಭಹಾರೈಸಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕೋಡಿಹಳ್ಳಿ ಮಠದ ಬೃಂಗೇಶ್ವರ ಸ್ವಾಮೀಜಿ ಸಹ ದಿವ್ಯಸಾನಿಧ್ಯ ವಹಿಸಿದ್ದು,ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವಚನ ನೀಡಿದರು, ಇಂದಿನ ಸಮಾಜದಲ್ಲಿ ರಂಜನ ವ್ಯವಸ್ಥೆ ಜೀವಂತವಾಗಿದೆ. ನಿರಾಂಜನನ ದ್ಯಾನವನ್ನು ಜನ ಮರೆಯುತಿದ್ದಾರೆ. ಐಶಾರಾಮ್ಯ, ಆಡಂಬರದ ಡೊಂಬಾಚಾರಕ್ಕೆ ಜನ ಬಲಿಯಾಗುತಿದ್ದಾರೆ. ಇಂತಹ ವೇಳೆ ಬುಡೇನ್ ಸಾಬ್ ಅವರು ಭಕ್ತರ ಸಂಕಷ್ಟ ಪರಿಹಾರ ಮಾಡುತ್ತಿದ್ದಾರೆ. ಕೌಟಂಬಿಕವಾಗಿ ಸಾಕಷ್ಟು ಸ್ಥಿತಿವಂತರಾಗಿದ್ದರು, ಬದುಕನ್ನು ಸರಳತೆಯಿಂದ ಸಾಗಿಸ್ತಿದ್ದಾರೆ.
ಜನಸಾಮಾನ್ಯರಿಗೂ ಇವರು ಪ್ರೇರಣೆಯಾಗಿದ್ದಾರೆ. ಇವರ ನಡೆ,ನುಡಿ ಸಹ ಇತರರಿಗೆ ಮಾದರಿ ಎನಿಸಿದೆ. ಇಂತಹ ಸಿದ್ಧಿಪುರುಷರಿಗೆ ಗುರುವಂದನೆ ಸಲ್ಲಿಸ್ತಿರೋದು ನಿಮ್ಮೆಲ್ಲರ ಸುಕೃತ ಎಂದರು.
ಅಥಿತಿಗಳಾಗಿ ಬಸವಣ್ಣನ ಅನುಯಾಯಿಗಳಾದ ಚಿತ್ರನಾಯಕನಹಳ್ಳಿಯ ಬಾಲರೆಡ್ಡಿಯವರು ಹಾಗು ಸಜ್ಜನಕೆರೆ ಗ್ರಾಮದ ವರ್ತಕರಾದ ರತ್ನಾಕರ್ ಶೆಟ್ಟಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮವನ್ನು ಸೊಂಡೆಕೆರೆಯ ಸಾಹುಕಾರರಾದ ಶಶಿಧರ್,ಕಂಟ್ರಾಕ್ಟರ್ ಗೋವಿಂದರೆಡ್ಡಿ,ಉಪನ್ಯಾಸಕ ವಿಜಯಕುಮಾರ್ ಮತ್ತು ಭಕ್ತರಾದ ಕಲ್ಲೇಶ್, ಸಿದ್ದರಾಜು, ನಿಂಗಪ್ಪ, ಜಯ್ಯಣ್ಣ, ಎಂಡಿ ಕೋಟೆ ಕುಮಾರ್ ನಿರ್ವಹಿಸಿದರು. ಈ ವೇಳೆ ಬುಡೇನ್ ಸಾಬ್ ಅವರ ಅನುಯಾಯಿಗಳಾದ ಸಜ್ಜನಕೆರೆ ರಾಮಣ್ಣ, ನಿಂಗಜ್ಜ, ಬಸವರಾಜಪ್ಪ, ಚಂದ್ರಪ್ಪ, ರುದ್ರೇಶ್, ಜಗದೀಶ್, ಧನಂಜಯ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಖೆಯರು ಮತ್ತು ಮಕ್ಕಳು ಭಾಗಿಯಾಗಿದ್ದರು.