Connect with us

    Swamiji’s: ಗೋವಿಂದ ಕಾರಜೋಳರಿಗೆ ಬಸವಣ್ಣನ ಹೃದಯವಿದೆ | ಮಠಾಧೀಶರ ಬಣ್ಣನೆ

    Govinda karajola with swamijis

    ಮುಖ್ಯ ಸುದ್ದಿ

    Swamiji’s: ಗೋವಿಂದ ಕಾರಜೋಳರಿಗೆ ಬಸವಣ್ಣನ ಹೃದಯವಿದೆ | ಮಠಾಧೀಶರ ಬಣ್ಣನೆ

    CHITRADURGA NEWS | 30 AUGUST 2024

    ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಅವರ ನೂತನ ಕಚೇರಿ ಜನಸಂಪರ್ಕ ಕಾರ್ಯಾಲಯ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು (Swamiji’s) ಭಾಗವಹಿಸಿ ಶುಭ ಹಾರೈಸಿದರು.

    ಈ ವೇಳೆ ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ನೂತನ ಸಂಸರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮಠಾಧೀಶರನ್ನು ತಮ್ಮ ಕಛೇರಿ ಉದ್ಘಾಟನೆಗೆ ಕರೆಯಿಸಿರುವುದು ಬಸವಣ್ಣರವರ ಅನುಭವ ಮಂಟಪವನ್ನು ಹೋಲುತ್ತಿದೆ. ಕಾರಜೋಳ ಅವರು ಮಹಾತ್ಮರ ನಾಡಿನಿಂದ ಬಂದವರು. ಅವರಿಗೆ ಶರಣರ, ದಾರ್ಶನಿಕರ ಮಹತ್ವ ಗೊತ್ತು ಇದರಿಂದ ಅವರು ಕಚೇರಿ ಪ್ರಾರಂಭಕ್ಕೆ ಹರಗುರು ಚರಮೂರ್ತಿಗಳನ್ನು ಕರೆಸಿದ್ದಾರೆ ಎಂದರು.

    ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

    ರಾಜ್ಯದ ಚುನಾಯಿತ ಪ್ರತಿನಿಧಿಯಾಗಿ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಅನೇಕ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅನುಭವ ಇದೆ ಇವರು ಐದು ವರ್ಷದ ಕಾರ್ಯಾವಾಧಿಯಲ್ಲಿ ಉತ್ತಮ ಕೆಲಸಗಳನ್ನು ಜಿಲ್ಲೆಗೆ ಆಗತ್ಯವಾಗಿ ಬೇಕಾದವುಗಳನ್ನು ಮಾಡಲಿ ನೀರು ಬೆಳಕು, ರಸ್ತೆ, ಇತರೆ ಕಾಮಗಾರಿಗಳನ್ನು ತುರ್ತಾಗಿ ಮಾಡಲಿ ಈಗ ಪ್ರಧಾನ ಮಂತ್ರಿಗಳು ದೇಶದ ನೆಚ್ಚಿನ ಮಗ ಎಂದು ಹೆಸರನ್ನು ಪಡೆದಿದ್ಧಾರೋ ಅದೇ ರೀತಿ ಗೋವಿಂದ ಕಾರಜೋಳ ಕೂಡಾ ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆಯಲಿ ಎಂದು ಶುಭ ಹಾರೈಸಿದರು.

    ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಕಾರ್ಯಾಲಯ ಒಂದು ರೀತಿ ವೈದ್ಯಾಲಯ ಇದ್ದಂತೆ, ಜನ ಪ್ರತಿನಿಧಿಗಳು ಜನರ ವೈದ್ಯರಿದ್ದ ಹಾಗೇ, ಕಷ್ಟಗಳನ್ನು ಹೊತ್ತು ಬರುವಂತರಿಗೆ ಪರಿಹಾರವನ್ನು ನೀಡುವ ಕೇಂದ್ರವಾಗಬೇಕಿದೆ. ನೊಂದವರ ಬಂಧುಗಳಾಗಿ, ಸಂಕಷ್ಟಗಳನ್ನು ಸಂತೈಸುವ ಮಹಾಂತರಾಗಿ ಜನರ ಭವಣೆಗಳನ್ನು ಬಗೆಹರಿಸುವ ದೇವಾಲಯವಾಗಲಿ, ಸಂಸದರು ಈ ಹಿಂದೆ ಗೆದ್ದ ಕ್ಷೇತ್ರಗಳೆಲ್ಲಾ ಅಭಿವೃದ್ದಿಯಾಗಿದೆ. ಚಿತ್ರದುರ್ಗ ಕೂಡಾ ಅಭಿವೃದ್ಧಿಯಾಗುವ ಭರವಸೆಯಿದೆ ಎಂದರು.

    ಇದನ್ನೂ ಓದಿ: ಹೂವಿನ ಅಲಂಕಾರದಲ್ಲಿ ಹಿರೇಗುಂಟನೂರು ದ್ಯಾಮಲಾಂಭ ದೇವಿ.

    ಬಯಲು ಸೀಮೆಯಾದ ಚಿತ್ರದುರ್ಗವನ್ನು ಸಂಸದರು ನೀರಾವರಿಯ್ನನಾಗಿ ಮಾಡಿ ಕ್ಷೇತ್ರವನ್ನು ಹಸಿರಾಗಿಸಲಿ, ಜನತೆ ಆರ್ಥಿಕವಾಗಿ ಚೇತರಿಕೆಯನ್ನು ಕಂಡುಕೊಳ್ಳಲಿ ಎಂದು ಶುಭ ಹಾರೈಸಿದರು.

    ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಗೋವಿಂದ ಕಾರಜೋಳ ಅವರ ಸ್ವಕ್ಷೇತ್ರ ಬಾಗಲಕೋಟೆ, ಚಿತ್ರದುರ್ಗದ ಸಂಸದರಾಗಿದ್ದಾರೆ. ಇದು ನಿಜವಾದ ಯೋಗಾಯೋಗ. ಈ ಹಿಂದೆ ಕಾರಜೋಳ ವಿವಿಧ ಇಲಾಖೆಯ ಜವಾಬ್ದಾರಿ ಹೊತ್ತು ಮಂತ್ರಿಯಾಗಿ ಕೆಲಸ ಮಾಡಿದ ಅನುಭವಿ. ಅವರಿಗೆ ಬಸವಣ್ಣರವರ ಹೃದಯವಿದೆ. ಎಲ್ಲರನ್ನು ಪ್ರೀತಿಸುವ ಎಲ್ಲರನ್ನು ಅಪ್ಪಿಕೊಳ್ಳುವ ಮಹಾನ್ ನಾಯಕ ಎಂದು ಬಣ್ಣಿಸಿದರು.

    ಇದನ್ನೂ ಓದಿ: ಉತ್ತರಾಧಿಕಾರಿ ನೇಮಕದ ಹೊಣೆ ಭಕ್ತರ ಮೇಲಿದೆ ಸಿರಿಗೆರೆ ಶ್ರೀ

    ಇಂತಹ ವ್ಯಕ್ತಿ ಚಿತ್ರದುರ್ಗದ ಸಂಸದರಾಗಿ ಆಯ್ಕೆಯಾಗಿರುವುದು ಸಂತೋಷವಾಗಿದೆ. ಸಮ ಸಮಾಜದ ನಿರ್ಮಾಣಮಾಡಿದ ಬಸವಣ್ಣರವರಂತೆ ಕಾರಜೋಳರವರು ಸಹಾ ನ್ಯಾಯವನ್ನು ನೀಡುವಂತ ಜನನಾಯಕರಾಗಿದ್ದಾರೆ. ಇವರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರೆ ಹರಿದು ಹಸಿರಿಕರಣವಾಗಲಿ ಅವರ ಒಳ್ಳೆಯ ಕಾರ್ಯಗಳಿಗೆ ನಮ್ಮ ಬೆಂಬಲ ಇದೆ ಎಂದರು.

    ಹಿರಿಯೂರಿನ ಆದಿಜಾಂಬವ ಮಠದ ಷಡಾಕ್ಷರಮುನಿ ಸ್ವಾಮೀಜಿ ಮಾತನಾಡಿ, ಸಂಸದರು ಜನರ ನಾಡಿಮಿಡಿತ ಬಲ್ಲವರಾಗಿದ್ದಾರೆ. ಇಷ್ಟು ಒಳ್ಳೆಯ ಸಂಸದರು ನಮ್ಮ ಜಿಲ್ಲೆಗೆ ಸಿಕ್ಕಿರುವುದು ಎಲ್ಲರ ಭಾಗ್ಯ. ಇವರ ಮೂಲಕ ಜಿಲ್ಲೆಗೆ ಆಗಬೇಕಾದ ಕೆಲಸ ಮಾಡಿಸಿಕೊಳ್ಳಬೇಕು. ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯಬೇಕಿದೆ ಎಂದರು.

    ಇದನ್ನೂ ಓದಿ: ಫೇಸ್‍ಬುಕ್ ಜಾಹೀರಾತು ಮೇಲೆ ಕ್ಲಿಕ್ | ಲಕ್ಷಾಂತರ ರೂಪಾಯಿ ವಂಚನೆ

    ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ, ಬಸವಕೇತೇಶ್ವರ ಶ್ರೀಗಳು, ಬ್ರಹ್ಮಕುಮಾರಿ ಶಿವರಶ್‍ಮಿ ಅಕ್ಕ, ಸಿದ್ದಯ್ಯನ ಕೋಟೆಯ ಬಸವಲಿಂಗ ಶ್ರೀಗಳು, ಚಿಕ್ಕುಂತಿಯ ಶಿವಮೂರ್ತಿ ಶ್ರೀಗಳು, ಶ್ರೀ ಮಡಿವಾಳ ಮಾಚಿದೇವ ಸ್ವಾಮೀಕಿ, ಶ್ರೀ ಬಸವನಾಗೀದೇವ ಸ್ವಾಮೀಜಿ ಭಾಗವಹಿಸಿದ್ದರು.

    ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜಿ.ಪಂ. ಮಾಜಿ ಸದಸ್ಯ ಅಜ್ಜಪ್ಪ, ಮುಖಂಡ ಅನಿತ್‍ಕುಮಾರ್, ನಗರಸಭಾ ಸದಸ್ಯರಾದ ವೆಂಕಟೇಶ್, ಹರೀಶ್, ಶ್ರೀನಿವಾಸ್, ಭಾಸ್ಕರ್ ಸೇರಿದಂತೆ ಬಿಜೆಪಿ, ಜೆಡಿಎಸ್ ಪದಾಧಿಕಾರಿಗಳು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top