Connect with us

    ಹಿರಿಯೂರು ಜನತೆಗೆ ಗುಡ್ ನ್ಯೂಸ್‌ | 16ರಿಂದ ಇ-ಆಸ್ತಿ ಖಾತಾ ಆಂದೋಲನ

    ಹಿರಿಯೂರು

    ಹಿರಿಯೂರು ಜನತೆಗೆ ಗುಡ್ ನ್ಯೂಸ್‌ | 16ರಿಂದ ಇ-ಆಸ್ತಿ ಖಾತಾ ಆಂದೋಲನ

    CHITRADURGA NEWS | 15 FEBRUARY 2024
    ಚಿತ್ರದುರ್ಗ: ಹಿರಿಯೂರು ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಕೆ.ಎಂ.ಎಫ್-24 ಆಸ್ತಿ ಕಣಜ ತಂತ್ರಾಂಶದಲ್ಲಿ ಕಾಲೋಚಿತಗೊಳಿಸಲು ತಮ್ಮ ಆಸ್ತಿಗಳಿಗೆ ಇ-ಆಸ್ತಿ ಖಾತಾ ಮಾಡಿಕೊಡುವ ಆಂದೋಲನವನ್ನು ಫೆ.12 ರಿಂದ ಮಾರ್ಚ್ 18 ರವರೆಗೆ ಹಮ್ಮಿಕೊಳ್ಳಲಾಗಿದೆ.

    ಇ-ಆಸ್ತಿ ಖಾತೆ ತೆಗೆದುಕೊಳ್ಳದೇ ಇರುವವರು ಅಗತ್ಯ ದಾಖಲಾತಿಗಳನ್ನು ವಾರ್ಡ್‍ವಾರು ನಿಗದಿಪಡಿಸಿರುವ ಸ್ಥಳ ಮತ್ತು ದಿನಾಂಕಗಳಲ್ಲಿ ಸಲ್ಲಿಸಿ ಇ-ಆಸ್ತಿ ಪಡೆಯುವಂತೆ ಹಾಗೂ ಸಾರ್ವಜನಿಕರು ಈ ವಿಶೇಷ ಆಂದೋಲನವನ್ನು ಸದುಪಯೋಗಪಡಿಸಿಕೊಳ್ಳಲು ಹಿರಿಯೂರು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಮನವಿ ಮಾಡಿದ್ದಾರೆ.

    ಹಿರಿಯೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.01, 02, 03, 04ರಲ್ಲಿ ಈಗಾಗಲೇ ಅರ್ಜಿ ಸ್ವೀಕೃತಿ ಕಾರ್ಯವನ್ನು ಮಾಡಲಾಗಿದ್ದು, ಫೆ.16ರಂದು ವಾರ್ಡ್ ನಂ.5ರಲ್ಲಿ ಹಿರಿಯೂರು ಅವಧಾನಿ ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಇ-ಆಸ್ತಿ ಖಾತಾ ಅಂದೋಲನದ ಅರ್ಜಿ ಸ್ವೀಕೃತಿ ಕಾರ್ಯ ನಡೆಯಲಿದೆ.

    ಇದನ್ನೂ ಓದಿ: ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲು

    ಫೆ.17ರಂದು ವಾರ್ಡ್ ನಂ.6 ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮುದಾಯ ಭವನ ಆವರಣ, ಫೆ.19ರಂದು ವಾರ್ಡ್ ನಂ.7ರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮುದಾಯ ಭವನ, ಫೆ.20ರಂದು ವಾರ್ಡ್ ನಂ.8ರ ಮಿರ್ಜಾ ಬಡಾವಣೆ ಅರಬ್ಬಿ ಮದರಸ ಆವರಣ, ಫೆ.21ರಂದು ವಾರ್ಡ್ ನಂ. 9 ಹಿರಿಯೂರು ತಾಲ್ಲೂಕು ಕಚೇರಿ ಆವರಣ, ವಾರ್ಡ್‍ನಂ 10 ನೇಕ್ ಬೀಬಿ ದರ್ಗಾ ಸಮುದಾಯ ಭವನ ಆವರಣ.

    ಫೆ.22ರಂದು ವಾರ್ಡ್‍ನಂ.11 ವಾಸವಿ ಮಹಲ್ ಆವರಣ, ಫೆ.23ರಂದು ವಾರ್ಡ್ ನಂ.12 ವಾಸವಿ ಮಹಲ್ ಆವರಣ, ಫೆ.25ರಂದು ವಾರ್ಡ್ ನಂ.13 ಹಿರಿಯೂರು ಅಂಗನವಾಡಿ ಕೇಂದ್ರ ಆವರಣ, ಫೆ.26 ವಾರ್ಡ್‍ನಂ.14 ಹಿರಿಯೂರು ನೆಹರೂ ಮೈದಾನ ಅಂಗನವಾಡಿ ಕೇಂದ್ರ ಆವರಣ, ಫೆ.27 ವಾರ್ಡ್‍ನಂ. 15ಗೋಪಾಲ್ ಪುರ ಬಡಾವಣೆ ಸರ್ಕಾರಿ ಶಾಲೆ ಆವರಣ.

    ಫೆ.28ರಂದು ವಾರ್ಡ್ 16 ಗೋಪಾಲ್ ಪುರ ಬಡಾವಣೆ ಕುಲುಮೆ ಬಯಲು ಅಂಗನವಾಡಿ ಕೇಂದ್ರ, ಫೆ.29ರಂದು ವಾರ್ಡ್ ನಂ.17 ಎಲ್‍ಐಸಿ ಕಚೇರಿ ಹಿಂಭಾಗದ ಮೌಲನಾ ಅಬ್ದುಲ್ ಕಲಂ ಅಜಾದ್ ಅನುದಾನಿತ ಶಾಲೆ, ಮಾರ್ಚ್ 1ರಂದು ವಾರ್ಡ್ ನಂ.18 ಜಯನಗರ ಸಾರ್ವಜನಿಕ ಗ್ರಂಥಾಲಯ ಆವರಣ, ಮಾರ್ಚ್ 2 ವಾರ್ಡ್‍ನಂ 19 ನಗರಸಭೆ ಸಮುದಾಯ ಭವನ, ಮಾರ್ಚ್ 4ರಂದು ವಾರ್ಡ್ ನಂ.20 ನಗರಸಭೆ ಪಕ್ಕದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಆವರಣ.

    ಮಾರ್ಚ್ 5ರಂದು ವಾರ್ಡ್‍ನಂ 21 ಪೌಧಿಯಮ್ಮ ದೇವಸ್ಥಾನ ಆವರಣ, ಮಾರ್ಚ್ 6ರಂದು ವಾರ್ಡ್‍ನಂ 22 ಸಿ.ಎಂ.ಬಡಾವಣೆ ಅಂಬೇಡ್ಕರ್ ಪ್ರೌಢಶಾಲಾ ಆವರಣ, ಮಾರ್ಚ್ 7ರಂದು ವಾರ್ಡ್ ನಂ.23 ಸರ್ಕಾರಿ ತಮಿಳು ಶಾಲೆ ಆವರಣ, ಮಾರ್ಚ್ 11ರಂದು ವಾರ್ಡ್ ನಂ.24 ಕುವೆಂಪು ನಗರ ಸತ್ಯಸಾಯಿ ಶಾಲೆ ಆವರಣ, ಮಾರ್ಚ್ 12ರಂದು ಬಿಜೆಆರ್ ಬಡಾವಣೆ ಅನಂತಪ್ಪ ಶಾಲೆ ಆವರಣ, ಮಾರ್ಚ್ 13ರಂದು ವಾರ್ಡ್ ನಂ.26 ಬಿಜೆಆರ್ ಬಡಾವಣೆ ಅನಂತಪ್ಪ ಶಾಲೆ ಆವರಣ, ಮಾರ್ಚ್ 14ರಂದು ವಾರ್ಡ್ ನಂ.27 ಲಕ್ಷ್ಮಮ್ಮ ಬಡಾವಣೆ ವಾಲ್ಮೀಕಿ ಭವನ.

    ಮಾರ್ಚ್ 15ರಂದು ವಾರ್ಡ್ ನಂ.28 ಕೆ.ಎಂ.ಕೊಟ್ಟಿಗೆ ಆಶ್ರಯ ಬಡಾವಣೆ ಸಮುದಾಯ ಭವನ, ಮಾರ್ಚ್ 16ರಂದು ವಾರ್ಡ್ ನಂ.29 ಕೆ.ಎಂ.ಕೊಟ್ಟಿಗೆ ಆಶ್ರಯ ಬಡಾವಣೆ ಸಮುದಾಯ ಭವನ, ಮಾರ್ಚ್ 17ರಂದು ವಾರ್ಡ್ ನಂ.30 ಶನಿಮಹಾತ್ಮ ದೇವಸ್ಥಾನದ ಪಕ್ಕದ ನಗರಸಭೆ ಸಮುದಾಯ ಭವನ, ಮಾರ್ಚ್ 18ರಂದು ವಾರ್ಡ್ ನಂ.31 ಶನಿಮಹಾತ್ಮ ದೇವಸ್ಥಾನದ ಪಕ್ಕದ ನಗರಸಭೆ ಸಮುದಾಯ ಭವನದಲ್ಲಿ ಅರ್ಜಿ ಸ್ವೀಕೃತಿ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಅರ್ಜಿ ಸ್ವೀಕಾರ ನಡೆಯಲಿದೆ.

    ಒದಗಿಸಬೇಕಾದ ದಾಖಲಾತಿಗಳು: ಇ-ಸ್ವತ್ತು ಪಡೆಯುವ ಸಲುವಾಗಿ ಒದಗಿಸಬೇಕಾದ ದಾಖಲೆಗಳ ವಿವರ ಇಂತಿದೆ. ಇ-ಸ್ವತ್ತು ಕೋರಿಕೆಗಾಗಿ ಅರ್ಜಿ, ಬಡಾವಣೆಯಾಗಿದ್ದಲ್ಲಿ ಭೂ ಪರಿವರ್ತನೆ ಆದೇಶ ಪ್ರತಿ ಮತ್ತು ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಅನುಮೋದಿತ ನಕ್ಷೆ ಪ್ರತಿ, ಸ್ವತ್ತಿನ ದಾಖಲೆ, (ಕ್ರಯಪತ್ರ, ವಿಭಾಗ ಪತ್ರ, ದಾನಪತ್ರ, ವಿಲ್ ಪತ್ರ, ಸೇಲ್ ಸರ್ಟಿಫಿಕೇಟ್, ಹಕ್ಕುಪತ್ರ) ಪ್ರಸಕ್ತ ಸಾಲಿನವರೆಗೆ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ಪಾವತಿಸಿರುವ ರಶೀದಿ.

    ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದರೆ 1974-75ರ ಸಾಲಿನ ಹಿಂದಿನ ದಾಖಲೆಗಳು, ನಿವೇಶನ, ಕಟ್ಟಡದ ಛಾಯಾಚಿತ್ರ (ಖಾಲಿ ನಿವೇಶನವಾಗಿದ್ದಲ್ಲಿ ಸ್ವಚ್ಛಗೊಳಿಸಿದ ಛಾಯಾಚಿತ್ರ) ಕಟ್ಟಡವಾಗಿದ್ದಲ್ಲಿ ಕಟ್ಟಡ ಪರವಾನಿಗೆ ಪ್ರತಿ ಹಾಗೂ ಇತರೆ ದಾಖಲಾತಿಗಳು, ಮಾಲೀಕರ ಭಾವಚಿತ್ರ (ಪಾಸ್‍ಪೋರ್ಟ್ ಸೈಜ್), ಮಾಲೀಕರ ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸಲ್ಲಿಸಬೇಕು ಸಲ್ಲಿಸಬೇಕು.

    ಹಿರಿಯೂರು ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ಪಡೆಯಲು ನಗರಸಭೆಯಿಂದ ಆರಂಭಿಸಲಾಗಿರುವ ವಿಶೇಷ ಆಂದೋಲನದ ಸದುಪಯೋಗ ಪಡೆದುಕೊಂಡು, ಆಸ್ತಿಯ ದಾಖಲೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಹಿರಿಯೂರು

    To Top