ಮುಖ್ಯ ಸುದ್ದಿ
ಉಚ್ಚಂಗಿ ಯಲ್ಲಮ್ಮ ದೇವಿಯ ವೈಭವದ ಮೆರವಣಿಗೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ
CHITRADURGA NEWS | 24 MAY 2024
ಚಿತ್ರದುರ್ಗ: ನಗರದೇವತೆ ಉಚ್ಚಂಗಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಗರದಲ್ಲಿ ಅಮ್ಮನವರ ಅದ್ದೂರಿ ಮೆರವಣಿಗೆ ಸಾಗಿತು.
ಸಂಪ್ರದಾಯದಂತೆ ಬೆಳಿಗ್ಗೆ ದೇವಸ್ಥಾನದಲ್ಲಿ ಅಮ್ಮನವರಿಗೆ ಅಭಿಷೇಕ ಮಾಡಿ ವಿವಿಧ ರೀತಿಯ ಹೂಗಳಿಂದ ಆಲಂಕಾರ ಮಾಡಲಾಯಿತು. ತದ ನಂತರ ದೇವಾಲಯದ ಹೊರಗಡೆಯಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನು ಸಿಂಗರಿಸಿದ್ದ ಎತ್ತಿನ ಗಾಡಿಯಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವೀರಗಾಸೆ, ಚಂಡೆ, ನಂದಿಧ್ವಜ, ಕೀಲು ಕುದುರೆ, ತಟ್ಟೆರಾಯ, ಉರುಮೆ, ಕಹಳೆ, ನಾದಸ್ವರ ಕಲಾವಿದರು ಸಾಗಿದರು. ಮದಕರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಸಂದೀಪ್, ನಗರಸಭೆ ಸದಸ್ಯರಾದ ಚಂದ್ರಶೇಖರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿನಿಲಯಕ್ಕೆ ಸಚಿವ, ಶಾಸಕರ ದಿಢೀರ್ ಭೇಟಿ
ಚಿಕ್ಕಪೇಟೆ, ಆನೆಬಾಗಿಲು, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ಮದಕರಿ ವೃತ್ತ, ಜೋಗಿಮಟ್ಟಿ ರಸ್ತೆ, ಫಿಲ್ಟರ್ ಹೌಸ್ ರಸ್ತೆ, ಏಕನಾಥೇಶ್ವರಿ ಪಾದಗುಡಿಯ ಮೂಲಕ ಮರಳಿ ದೇವಾಲಯ ತಲುಪಿತು. ದಾರಿಯುದ್ದಕ್ಕು ಭಕ್ತರು ಅಮ್ಮನವರ ದರ್ಶನ ಪಡೆದು ಪುನೀತರಾದರು. 25ರ ಮಧ್ಯಾಹ್ನ 12ಕ್ಕೆ ದೇವಿಗೆ ವಿಶೇಷ ಭಂಡಾರ ಪೂಜೆ, ಸಂಜೆ 6ಕ್ಕೆ ಅಮ್ಮನವರ ಸಿಡಿ ಉತ್ಸವ ನಡೆಯಲಿದೆ.