Connect with us

    Minister Lakshmi Hebbalkar; ಜಿ.ಪಂ.ತಾ.ಪಂ ಚುನಾವಣೆಗೆ ಸಿದ್ದರಾಗಿ | ಕೈ ಕಾರ್ಯಕರ್ತರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರೆ 

    ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    ಮುಖ್ಯ ಸುದ್ದಿ

    Minister Lakshmi Hebbalkar; ಜಿ.ಪಂ.ತಾ.ಪಂ ಚುನಾವಣೆಗೆ ಸಿದ್ದರಾಗಿ | ಕೈ ಕಾರ್ಯಕರ್ತರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರೆ 

    CHITRADURGA NEWS | 02 SEPTEMBER 

    ಚಿತ್ರದುರ್ಗ: ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ತಯಾರಾಗಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್(Lakshmi Hebbalkar) ಹೇಳಿದರು.

    ಕ್ಲಿಕ್ ಮಾಡಿ ಓದಿ: Th. Ra. Subbaraya; ತರಾಸು ರಂಗಮಂದಿರ ನವೀಕರಣಕ್ಕೆ 80 ಲಕ್ಷ ಅನುದಾನ | ಸಚಿವ ಡಿ.ಸುಧಾಕರ್

    ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವೆ, ಶಿಸ್ತಿನ ಪಕ್ಷ ಕಾಂಗ್ರೆಸ್‍ಗೆ ಎಷ್ಟೋ ಮಂದಿ ಜೀವ ತ್ಯಾಗ ಮಾಡಿದ್ದಾರೆ. ಬಲಿದಾನಗಳ ಇತಿಹಾಸವಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ ರಾಜ್ಯದ ಜನ 136 ಸೀಟುಗಳನ್ನು ಕಾಂಗ್ರೆಸ್‍ಗೆ ನೀಡಿದ್ದಾರೆ.

    ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬಾರದು 2028 ರ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ತೊಡಬೇಕು ಎಂದರು.

    ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಕೋಮುವಾದಿ ಬಿಜೆಪಿ ವಿರುದ್ದ ಕಾರ್ಯಕರ್ತರು ಪುಟಿದೇಳಬೇಕೆಂದು ಎಂದು ಎಚ್ಚರಿಸಿದರು.

    ಕ್ಲಿಕ್ ಮಾಡಿ ಓದಿ: Ex-CM: ಎಸ್.ನಿಜಲಿಂಗಪ್ಪ ಮನೆ ಖರೀಧಿಗೆ ಮುಂದಾದ ಕಾಂಗ್ರೆಸ್ | ಮನೆ ವೀಕ್ಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನೀರಾವರಿ, ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚುವರಿ ಹಣ ನೀಡಿ ರಾಜ್ಯದ ಖಜಾನೆಯನ್ನು ದಿವಾಳಿಯಾಗಿಸಿತ್ತು.

    ಪಿ.ಎಸ್.ಐ. ಇಂಜಿನಿಯರಿಂಗ್ ನೇಮಕ ಕೋವಿಡ್‍ನಲ್ಲಿ ನಡೆದ ಹಗರಣವನ್ನು ಎಲ್ಲಿ ಬಿಚ್ಚಿಡುತ್ತಾರೋ ಎಂಬ ಭಯದಿಂದ ಬಿಜೆಪಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಅಪವಾದ ಹೊರಿಸುತ್ತಿದೆ. ರಾಜ್ಯಾದ್ಯಂತ ಕಾರ್ಯಕರ್ತರು ಮುಖಂಡರುಗಳು ಸಿ.ಎಂ.ಬೆನ್ನಿಗೆ ನಿಲ್ಲಬೇಕೆಂದು ಕರೆ ನೀಡಿದರು.

    ಕಾರ್ಯಕರ್ತರಿಲ್ಲದೆ ಪಕ್ಷವಿಲ್ಲ, ಪಕ್ಷದ ಆಶೀರ್ವಾದಿಂದ ಸಾಮಾನ್ಯ ಕಾರ್ಯಕರ್ತೆಯಾಗಿ ಈಗ ಸಚಿವೆಯಾಗಿ ರಾಜ್ಯದ ಜನರ ಸೇವೆ ಮಾಡುತ್ತಿದ್ದೇನೆ. ನಾಲ್ಕು ವರ್ಷ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆಯಾಗಿದ್ದೇನೆ. ನನಗೆ ಎರಡು ಬಾರಿ ಪಕ್ಷ ಟಿಕೇಟ್ ನೀಡಿದಾಗ ಸೋತರೂ ಎದೆಗುಂದಲಿಲ್ಲ. 24 ವರ್ಷಗಳಿಂದ ನಾನೂ ಕೂಡ ಸಾಕಷ್ಟು ತಳಮಳ ಅನುಭವಿಸಿದ್ದೇನೆ. ಒಮ್ಮೆಲೆ ಎಲ್ಲಾ ಅಧಿಕಾರ ಸಿಗುವುದಿಲ್ಲ. ತಳಮಟ್ಟದಿಂದ ಪಕ್ಷಕ್ಕೆ ದುಡಿಯಬೇಕೆಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: Congress: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರಿನಲ್ಲೇ ಕೈ ಕಾರ್ಯಕರ್ತರ ವಾಗ್ವಾದ

    ಅಭಿವೃದ್ದಿಯೆಂದರೆ ಬರಿ ರಸ್ತೆ ನಿರ್ಮಾಣ ಮಾಡುವುದಷ್ಟೆ ಅಲ್ಲ, ಪ್ರತಿಯೊಬ್ಬರ ಮನೆ ಆರ್ಥಿಕವಾಗಿ ಸಬಲವಾಗುವುದೆ ನಿಜವಾದ ಅಭಿವೃದ್ದಿ ಎಂದರು.

    ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿಗಳಾದ ಮುರಳಿಧರ ಹಾಲಪ್ಪ ಮಾತನಾಡಿ, ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡುವ ಕೈಕಾರ್ಯಕ್ಕೆ ರಾಜ್ಯ ಸರ್ಕಾರ ಕೈಹಾಕಿದ್ದು, ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ವೀಕ್ಷಣೆಗೆ ಬಂದಿದ್ದಾರೆ. ನಂತರ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುವರು ಎಂದು ತಿಳಿಸಿದರು.

    ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಎಸ್.ಎನ್.ರವಿಕುಮಾರ್, ನಜ್ಮತಾಜ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಘು ಪಿ. ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಮಾಜಿ ಶಾಸಕ ಎ.ವಿ.ಉಮಾಪತಿ ಸೇರಿದಂತೆ ಕಾರ್ಯದರ್ಶಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top