ಮುಖ್ಯ ಸುದ್ದಿ
ಮತ್ಸ್ಯ ಸಂಪದ ಯೋಜನೆ | ವಿವಿಧ ಘಟಕಗಳಿಗೆ ಅರ್ಜಿ ಆಹ್ವಾನ
CHITRADURGA NEWS | 24 JULY 2024
ಚಿತ್ರದುರ್ಗ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: CITY COUNCIL; ನಗರಸಭೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಯೋಜನೆಯಡಿ ಮೀನು ಕೃಷಿಕೊಳ, ಪಾಂಡ್ ಬಯೋಫ್ಲಾಕ್ ಮೀನು ಸಾಗಾಣಿಕೆ, 30 ಘ.ಮೀ. ಅಳೆತೆಯ 6 ತೊಟ್ಟಿ, ಕಿಯೋಸ್ಕ್, ಸಾಕಾಣಿಕೆ ಕೊಳ ನಿರ್ಮಾಣ ಹಾಗೂ ಮೋಟಾರ್ ಸೈಕಲ್ ವಿತ್ ಐಸ್ ಬಾಕ್ಸ್ಗಳನ್ನು ವಿತರಿಸಲಾಗುವುದು. ಸಾಮಾನ್ಯ ವರ್ಗದವರಿಗೆ ಶೇ.40 ರಷ್ಟು, ಮಹಿಳೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.60 ರಷ್ಟು ಘಟಕ ವೆಚ್ಚದ ಸಹಾಯಧನ ನೀಡಲಾಗುವುದು.
ಇದನ್ನೂ ಓದಿ: KSFC ನಿರ್ದೇಶಕರಾಗಿ ರಘು ಆಚಾರ್ ಅವಿರೋಧ ಆಯ್ಕೆ
ಆಸಕ್ತ ಫಲಾನುಭವಿಗಳು ಆಗಸ್ಟ್ 14 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಯೋಜನೆಗಳ ಅನುಷ್ಠಾನಕ್ಕೆ ನಿಗದಿ ಪಡಿಸಿದ ಗರಿ ಹಾಗೂ ಮೀಸಲಾತಿ ಸೇರಿದಂತೆ ಇತರೆ ಮಾಹಿತಿಗಾಗಿ, ಚಿತ್ರದುರ್ಗ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಸಹಾಯಕ ನಿರ್ದೇಶಕ ತುಳಸಿದಾಸ್, ದೂರವಾಣಿ ಸಂಖ್ಯೆ 9342187356 ಹಾಗೂ ಹಿರಿಯೂರು, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿನ ಸಹಾಯಕ ನಿರ್ದೇಶಕ ಎನ್.ಮಂಜುನಾಥ್ ದೂರವಾಣಿ ಸಂಖ್ಯೆ 7022933310 ಕರೆ ಮಾಡಬಹುದು ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದ್ದಾರೆ.