ಮೊಳಕಾಳ್ಮೂರು
ಎಪಿಎಂಸಿ ಗೋದಾಮಿಗೆ ಬೆಂಕಿ | ಕಾರ್ಮೋಡದಂಥ ಹೊಗೆ | ಬೆಂಕಿ ನಂದಿಸಲು ಹರಸಾಹಸ

Published on
CHITRADURGA NEWS | 05 MARCH 2025
ಮೊಳಕಾಲ್ಮೂರು: ತಾಲೂಕಿನ ರಾಂಪುರ ಎಪಿಎಂಸಿ ಆವರಣದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಧಗಧಗಿಸಿದೆ.
ಬೆಂಕಿಯ ಕೆನ್ನಾಲಿಗೆ, ಕಾರ್ಮೋಡದಂತಹ ಹೊಗೆ ಎಪಿಎಂಸಿ ಆವರಣದಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು.
ಇದನ್ನೂ ಓದಿ: ಲೇಔಟ್‍ನಲ್ಲಿ ಬೆಳ್ಳಂ ಬೆಳಗ್ಗೆ ಕರಡಿಯ ವಾಕಿಂಗ್
ಕೃಷಿ ಉಪಕರಣಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ತಗುಲಿದ ಬೆಂಕಿಯಿಂದ ಲಕ್ಷಾಂತರ ರೂ. ಮೌಲ್ಯದ ಕೃಷಿ ಉಪಕರಣಗಳು ಸುಟ್ಟು ಬೂದಿಯಾಗಿವೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ದಟ್ಟ ಹೊಗೆಯ ಕಾರಣಕ್ಕೆ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದಾರೆ.
ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Continue Reading
Related Topics:APMC, Chitradurga news, Datta Hoge, Fire, Fire brigade, Molakalmuru, Rampur, ಅಗ್ನಿಶಾಮಕ ದಳ, ಎಪಿಎಂಸಿ, ಚಿತ್ರದುರ್ಗ ನ್ಯೂಸ್, ದಟ್ಟ ಹೊಗೆ, ಬೆಂಕಿ, ಮೊಳಕಾಲ್ಮೂರು, ರಾಂಪುರ

Click to comment