Connect with us

    ಹಿಂದೂ ಮಹಾಗಣಪತಿಗೆ ವಿದಾಯ | ಹೇಗಿತ್ತು ಗಣಪತಿಯ ವಿಸರ್ಜನೆ

    ಹಿಂದೂ ಮಹಾಗಣಪತಿಗೆ ವಿದಾಯ

    ಮುಖ್ಯ ಸುದ್ದಿ

    ಹಿಂದೂ ಮಹಾಗಣಪತಿಗೆ ವಿದಾಯ | ಹೇಗಿತ್ತು ಗಣಪತಿಯ ವಿಸರ್ಜನೆ

    ಚಿತ್ರದುರ್ಗ ನ್ಯೂಸ್.ಕಾಂ: ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾಗಣಪತಿಗೆ ಚಂದ್ರವಳ್ಳಿ ಬಳಿ ಅಂತಿಮ ಪೂಜೆ, ಮಹಾಮಂಗಳಾರತಿ ನಂತರ ಬಾವಿಯಲ್ಲಿ ವಿಸರ್ಜನೆ ಮಾಡುವ ಮೂಲಕ ವಿದಾಯ ಹೇಳಲಾಯಿತು.

    ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಶೋಭಾಯಾತ್ರೆಗೆ ಮಹಾರಾಷ್ಟ್ರದ ಕೊಲ್ಲಾಪುರ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಅಲ್ಲಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಕನಕ ವೃತ್ತದ ಬಳಿವರೆಗೆ ಅದ್ದೂರಿಯಾಗಿ ನೆರವೇರಿತು.

    ಇಲ್ಲಿಂದ ಡಿಜೆಗಳನ್ನು ವಾಪಾಸು ಕಳಿಸಿದ ಪೊಲೀಸರು ಗಣಪತಿ ಪ್ರತಿಷ್ಠಾಪನೆಯಾಗಿದ್ದ ವಾಹನವನ್ನು ಮಾತ್ರ ಚಂದ್ರವಳ್ಳಿ ಕಡೆಗೆ ಹೋಗಲು ಅನುವು ಮಾಡಿಕೊಟ್ಟರು.

    ರಾತ್ರಿ 10 ಗಂಟೆ ವೇಳೆಗೆ ಚಂದ್ರವಳ್ಳಿ ತಲುಪಿದ ಹಿಂದೂ ಮಹಾಗಣಪತಿಯ ಶಿರದ ಮೇಲಿನ ಸರ್ಪದ ಆಕೃತಿಯನ್ನು ನಿಧಾನವಾಗಿ ಬಿಚ್ಚಲಾಯಿತು. ದಿನವಿಡೀ ಗಣಪತಿಯನ್ನು ಮೆರವಣಿಗೆ ಮಾಡುವುದರಿಂದ, ಲಕ್ಷಾಂತರ ಜನ ಭಾಗವಹಿಸುವ ಕಾರಣಕ್ಕೆ ಲಾರಿಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ರಾಡ್‍ಗಳ ಸಹಾಯದಿಂದ ವೆಲ್ಡಿಂಗ್ ಮಾಡಲಾಗಿತ್ತು.

    ಹಿಂದೂ ಮಹಾಗಣಪತಿ ಶೋಭಾಯಾತ್ರೆ

    ಹಿಂದೂ ಮಹಾಗಣಪತಿ ಶೋಭಾಯಾತ್ರೆ

    ಇದನ್ನೂ ಓದಿ: ಮದಕರಿ ನಾಯಕರ ಹೊಸ ಭಾವಚಿತ್ರ ಅನಾವರಣ | ನಟ ಕಿಚ್ಚ ಸುದೀಪ್ ಬೆಂಗಳೂರಿನಲ್ಲಿ ಲೋಕಾರ್ಪಣೆ

    ರಾತ್ರಿ ಎಲ್ಲ ವೆಲ್ಡಿಂಗ್‍ಗಳನ್ನು ಕಟ್ ಮಾಡಿ, ಕ್ರೇನ್ ಸಹಾಯದಿಂದ ಬೆಲ್ಟ್ ಹಾಕಿ ಗಣಪತಿಯನ್ನು ಕೆಳಗೆ ಇಳಿಸುವ ಪ್ರಕ್ರಿಯೆ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ನಡೆಯಿತು.

    ಆನಂತರ ಅಲ್ಲಿಯೇ ಪೂಜೆ ಸಲ್ಲಿಸಿ ನೇರವಾಗಿ ಚಂದ್ರವಳ್ಳಿಯ ಬಾವಿಯ ಮಧ್ಯ ಭಾಗಕ್ಕೆ ಗಣಪತಿಯನ್ನು ಕ್ರೇನ್ ತೆಗದುಕೊಂಡು ಹೋಯಿತು. ಇಲ್ಲಿ ನಿಧಾನವಾಗಿ ಗಣಪತಿಯನ್ನಿ ನೀರಿಗೆ ಇಳಿಸುವ ದೃಶ್ಯಗಳು ಸಾವಿರಾರು ಮೊಬೈಲ್ ಕ್ಯಾಮರಾದಲ್ಲಿ ಸಎರೆಯಾದವು.

    ಗಣಪತಿ ವಿಸರ್ಜನೆ ಹೊತ್ತಿಗೆ ತುಸು ಜನರ ಸಂಖ್ಯೆ ಕಡಿಮೆಯಾಗುತ್ತಿತ್ತು. ಆದರೆ, ಈ ವರ್ಷ ವಿಸರ್ಜನೆ ಜಾಗದಲ್ಲೂ ಸಾವಿರಾರು ಜನ ಜಮಾಯಿಸಿದ್ದರು. ಬಾವಿಯ ಸುತ್ತಲೂ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಹತ್ತಿ ಕುಳಿತು ಎಲ್ಲರೂ ಮೊಬೈಲ್ ಪೋನ್‍ಗಳಲ್ಲಿ ಪೋಟೋ ತೆಗೆಯುವುದು, ವೀಡಿಯೋ ಮಾಡುವುದು, ಫೇಸ್‍ಬುಕ್ ಲೈವ್, ಯೂಟ್ಯೂಬ್ ಲೈವ್ ಮಾಡಿದರು.

    ಈ ಎಲ್ಲ ಪ್ರಕ್ರಿಯೆಗಳ ನಡುವೆ ಪೂಜೆ ಮತ್ತಿತರೆ ಧಾರ್ಮಿಕ ಕಾರ್ಯಗಳ ನಂತರ ರಾತ್ರಿ 10.40ಕ್ಕೆ ವಿಸರ್ಜಿಸಲಾಯಿತು. ಈ ವೇಳೆ ಭಾಗವಹಿಸಿದ್ದ ಸಾವಿರಾರು ಭಕ್ತರು ಹಿಂದೂ ಮಹಾಗಣಪತಿಗೆ ಜಯಕಾರ ಹಾಕುತ್ತಾ ಗಣಪತಿಗೆ ವಿದಾಯ ಹೇಳಿದರು.

    ಹಿಂದೂ ಮಹಾಗಣಪತಿ ಶೋಭಾಯಾತ್ರೆ

    ಹಿಂದೂ ಮಹಾಗಣಪತಿ ಶೋಭಾಯಾತ್ರೆ

    ಇದನ್ನೂ ಓದಿ: ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುವುದು ಪಕ್ಕಾ | ಸಿಎಂ, ಡಿಸಿಎಂ ಜೊತೆ ಚರ್ಚಿಸಿ ಸೇರ್ಪಡೆ ದಿನಾಂಕ ನಿಗಧಿ

    ಇನ್ನೂ ಇಡೀ ದಿನ ನಡೆದ ಶೋಭಾಯಾತ್ರೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ. ಗಣೇಶೋತ್ಸವದಲ್ಲಿ 3 ಡಿಜೆಗಳನ್ನು ಹಾಕಲಾಗಿತ್ತು. ಯುವಕ, ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಭಾಗವಹಿಸಿ ಕುಣಿದು ಸಂಭ್ರಮಿಸಿದರು. ಸತತ 11 ತಾಸುಗಳ ಕಾಲ ಗಣಪತಿಯ ಮೆರವಣಿಗೆ ನಡೆಯಿತು.

    ಗಣೇಶೋತ್ಸವದಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಕಬೀರಾನಂದ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ , ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ), ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

    ಹಿಂದೂ ಮಹಾಗಣಪತಿ ಶೋಭಾಯಾತ್ರೆ

    ಹಿಂದೂ ಮಹಾಗಣಪತಿ ಶೋಭಾಯಾತ್ರೆ

    ಹಿಂದೂ ಮಹಾಗಣಪತಿ ಸಮಿತಿ ಗೌರವಾಧ್ಯಕ್ಷ ಷಡಾಕ್ಷರಪ್ಪ, ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಸಮಿತಿಯ ಮಾರ್ಗದರ್ಶಕ ಟಿ.ಬದರೀನಾಥ್, ಬಜರಂಗದಳ ಪ್ರಾಂತ ಸಹ ಸಂಯೋಜಕ ಪ್ರಭಂಜನ್, ಸಮಿತಿಯ ಪದಾಧಿಕಾರಿಗಳಾದ ಶರಣ್, ವಿಕ್ರಾಂತ್ ಜೈನ್, ವಿಶ್ವನಾಥಯ್ಯ, ವಿಫುಲ್ ಜೈನ್, ಶ್ರೇಣಿಕ್, ವಿಎಚ್‍ಪಿ, ಬಜರಂಗದಳ ಹಾಗೂ ಸಂಘ ಪರಿವಾರದ ಮುಖಂಡರಾದ ಸಂದೀಪ್, ರುದ್ರೇಶ್, ವಿಠಲ್, ಶ್ರೀನಿವಾಸ್, ಅಶೋಕ್, ಓಂಕಾರಪ್ಪ, ಕೇಶವ್, ರಂಗಸ್ವಾಮಿ ಸೇರಿದಂತೆ ನೂರಾರು ಕಾರ್ತಕರ್ತರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top