ಮುಖ್ಯ ಸುದ್ದಿ
NCC ಬೆಟಾಲಿಯನ್‌ಗೆ ಮಾಜಿ ಸೈನಿಕರ ನೇಮಕ | ಅರ್ಜಿ ಆಹ್ವಾನ

CHITRADURGA NEWS | 08 MARCH 2025
ಚಿತ್ರದುರ್ಗ: ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ. (National cadet corps) ನಿರ್ದೇಶನಾಲಯವು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ರಾಯಚೂರು, ಮತ್ತು ಶಿವಮೊಗ್ಗದ ಎನ್.ಸಿ.ಸಿ. ಬೆಟಾಲಿಯನ್‌ಗಳಿಗೆ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
Also Read: ಬಜೆಟ್‍ನಲ್ಲಿ ರೈತರಿಗೆ ಬಂಪರ್ | ಜಾನುವಾರು ಮೃತಪಟ್ಟರೆ 15 ಸಾವಿರ ಪರಿಹಾರ

ಮಾಜಿ ಸೈನಿಕರನ್ನು ಎನ್‌ಸಿಸಿ ಬೆಟಾಲಿಯನ್‌ಗಳಿಗೆ ಹೆಚ್ಚುವರಿ ಸಿಬ್ಬಂದಿಗಳಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಭೂ ಸೇನೆಯಿಂದ ಆಕ್ಟೋಬರ್ 2022ರ ನಂತರ ನಿವೃತ್ತರಾಗಿರುವ ಜೆ.ಸಿ.ಒ (ಸುಬೇದಾರ್ ಮತ್ತು ನಾಯಬ್ ಸುಬೇದರ್) ಹಾಗೂ ಹವಾಲ್ದಾರ್ ರ‍್ಯಾಂಕ್‌ನ (ಎಮ್‌ಎಸಿಪಿ ಹವಾಲ್ದಾರ್‌ಗಳನ್ನು ಪರಿಗಣಿಸುವುದಿಲ್ಲ) ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸೈನ್ಯದಲ್ಲಿ ದುರ್ನಡತೆ ಮತ್ತು ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಆಸಕ್ತ ಮಾಜಿ ಸೈನಿಕರು 13 ಮಾರ್ಚ್ 2025 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಇಮೇಲ್ : itdirpc.kardte@nccindia.nic.in ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು https://nis.bisag-n.gov.in/
Also Read: ಸುಳ್ಳು ಆರೋಪಗಳಿಗೆ ಬಜೆಟ್‍ನಲ್ಲಿ ತಕ್ಕ ಉತ್ತರ | ಎಚ್.ಆಂಜನೇಯ
ನಿರ್ದೇಶನಾಲಯ (ಕರ್ನಾಟಕ ಮತ್ತು ಗೋವಾ) ಕೆಎಸ್‌ಸಿಎಮ್‌ಎಫ್ ಬಿಲ್ಡಿಂಗ್, 4ನೇ ಮಹಡಿ ನಂ-8 ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು-560001 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
