Connect with us

    ದಲಿತ ವರ್ಗ ಶಿಕ್ಷಣಕ್ಕೆ ಒತ್ತು ಕೊಡಲಿ | CPI ನಯೀಂ ಅಹಮ್ಮದ್

    ದಲಿತ ವರ್ಗದವರ ಸಭೆಯಲ್ಲಿ CPI ನಯೀಂ ಅಹಮ್ಮದ್

    ಮುಖ್ಯ ಸುದ್ದಿ

    ದಲಿತ ವರ್ಗ ಶಿಕ್ಷಣಕ್ಕೆ ಒತ್ತು ಕೊಡಲಿ | CPI ನಯೀಂ ಅಹಮ್ಮದ್

    ದಲಿತ ವರ್ಗ ಶಿಕ್ಷಣಕ್ಕೆ ಒತ್ತು ಕೊಡಲಿ | CPI ನಯೀಂ ಅಹಮ್ಮದ್

    CHITRADURGA NEWS | 26 OCTOBER 2024

    ಚಿತ್ರದುರ್ಗ: ದಲಿತ ವರ್ಗದವರು ಹಲವೆಡೆ ದೇವರ ಹೆಸರಿನಲ್ಲಿ ಕಂದಚಾರ ಮೂಡನಂಬಿಕೆಯಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದು ಮೌಡ್ಯತೆಗಳನ್ನು ತ್ಯಜಿಸಿ ಶಿಕ್ಷಣ(Education)ಕ್ಕೆ ಅದ್ಯತೆ ನೀಡಬೇಕೆಂದು ಬಡವಾಣೆ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ(CPI) ನಹೀಂ ಅಹಮ್ಮದ್‌ ಹೇಳಿದರು.

    ಕ್ಲಿಕ್ ಮಾಡಿ ಓದಿ: ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಅವಿರೋಧ ಆಯ್ಕೆ

    ಪೋಲಿಸ್ ಠಾಣೆಯ ವತಿಯಿಂದ ಅಂಬೇಡ್ಕರ್ ನಗರದ ದಲಿತ ಕಾಲೋನಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ದಲಿತ ವರ್ಗದವರ ಸಭೆಯಲ್ಲಿ ಮಾತನಾಡಿದ ಅವರು.

    ಈ ಭಾಗಗಳಲ್ಲಿ ರೌಡಿಸಂ, ಜೂಜಾಟ, ಮಾದಕ ವಸ್ತುಗಳು,ಹಂಚುವಿಕೆ ಹಾಗೂ ದಲಿತರ ಮೇಲೆ ನೆಡೆಯುತ್ತಿರುವ ಹಲ್ಲೆಗಳು ಕಂಡುಬಂದಿದ್ದು, ಇಂತಹ ಯಾವುದೇ ಘಟನೆಗಳು ಜರುಗಿದರೇ ಪೋಲಿಸ್ ಠಾಣೆಗೆ ತಿಳಿಸಬೇಕು. ನಿಮ್ಮ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ ಶಿಕ್ಷಣಕ್ಕೆ ಅದ್ಯತೆ ನೀಡುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಶಿಕ್ಷಣದಿಂದ ಮಾತ್ರ ದಲಿತ ವರ್ಗದವರ ಸಾಧ್ಯವೆಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ಯಾರಂಟಿ ಯೋಜನೆಗಳ ಉಪಾದ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ವಿದ್ಯಾರ್ಥಿಗಳು, ಯುವಜನರು ಶಿಕ್ಷಣದ ಜೊತೆಗೆ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವ, ಶಿಸ್ತು ಬದ್ಧತೆ ಜೀವನ, ನಿರಂತರ ಪ್ರಮಾಣಿಕ ಪ್ರಯತ್ನಕ್ಕೆ ಅದ್ಯತೆ ನೀಡಬೇಕು.

    ಕ್ಲಿಕ್ ಮಾಡಿ ಓದಿ: ಶೀಘ್ರದಲ್ಲೇ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ | ಸಚಿವ ಕೃಷ್ಣಭೈರೇಗೌಡ

    ದಲಿತ ವರ್ಗದವರು ಶಿಕ್ಷಣವಂತರಾದರೇ ಯಾವುದೇ ದೌರ್ಜನ್ಯ ನಡೆಯಲು ಸಾಧ್ಯವಿಲ್ಲ, ಬಡವಾಣೆ ಪೋಲಿಸ್ ಠಾಣೆಯ ಅಧಿಕಾರಿಗಳು ಈ ಭಾಗದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಬಿಗಿ ದೋರಣೆ ಅನುಸರಿಸುತ್ತಿರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೇ ಶಾಂತಿಯ ವಾತವರಣ ಇದೇ ಎಂದು ತಿಳಿಸಿದರು.

    ಬಡವಾಣೆಯ ಪೋಲಿಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಘುರವರು ಮಾತನಾಡಿದರು.

    ಕಾರ್ಯಕ್ರಮದಲ್ಲಿ ದಲಿತ ಮುಖಂಡ ರಾಜಣ್ಣ, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ಬೆಳಗಟ್ಟ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಎಸ್.ಕಮಲಮ್ಮ, ಜನಸಾಗರ ಪತ್ರಿಕೆಯ ಸಂಪಾದಕ ಡಿ.ಎನ್ ಕೃಷ್ಣಮೂರ್ತಿ ಇದ್ದರು.

    ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿನಿ ಆತ್ಮಹತ್ಯೆ | ಸೂಕ್ತ ತನಿಖೆಗೆ ಆಗ್ರಹಿಸಿ ABVP ಪ್ರತಿಭಟನೆ 

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top