ಮುಖ್ಯ ಸುದ್ದಿ
Election: 25ಕ್ಕೆ ವೀರಶೈವ ಮಹಾಸಭಾ ಚುನಾವಣೆ | 27 ಸ್ಥಾನಕ್ಕೆ 57 ಮಂದಿ ಸ್ಪರ್ಧೆ

CHITRADURGA NEWS | 23 AUGUST 2024
ಚಿತ್ರದುರ್ಗ: ಅಖಿಲ ಭಾರತ ವೀರಶೈವ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ಚುನಾವಣೆ ಆ. 25ರಂದು ನಡೆಯಲಿದೆ.
ಚಿತ್ರದುರ್ಗ ನಗರದ ರೋಟರಿ ಬಾಲ ಭವನದಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಆ.25 (ಭಾನುವಾರ) ರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾರರು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕಾರಿ ಸಮಿತಿಯ 27 ಸ್ಥಾನಗಳಿಗೆ, ರಾಜ್ಯದ ವಿವಿಧ ಜಿಲ್ಲೆಗಳಿಂದ 57 ಮಂದಿ ಸ್ಪರ್ಧಿಸಿದ್ದಾರೆ. ಒಬ್ಬ ಮತದಾರ ಗರಿಷ್ಠ 27 ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಅವಕಾಶವಿದೆ. ಸದಸ್ಯರು ಮತದಾನಕ್ಕೆ ಬರುವಾಗ ಕಡ್ಡಾಯವಾಗಿ ಫೋಟೊ ಗುರುತಿನ ಪತ್ರದೊಂದಿಗೆ ಬರುವಂತೆ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಪ್ರವಾಸಿಗರ ಗಮನಕ್ಕೆ; ದುಬಾರಿಯಾಗಿದೆ ಜೋಗ ಜಲಪಾತ ವೀಕ್ಷಣೆ | ಗಂಟೆ ಲೆಕ್ಕದಲ್ಲಿ ಶುಲ್ಕ ನಿಗದಿ
ಮತದಾನದ ನಂತರ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲಾ ಜಿಲ್ಲೆಗಳ ಮತಗಳನ್ನು ಕ್ರೋಡೀಕರಿಸಿ ಬೆಂಗಳೂರು ಮಹಾಸಭಾ ಕೇಂದ್ರ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಘಟಕ ಅಧ್ಯಕ್ಷ ಮಹಡಿ ಶಿವಮೂರ್ತಿ (9448122555) ಹಾಗೂ ಚುನಾವಣಾ ಅಧಿಕಾರಿ ಟಿ.ಪಿ.ಜ್ಞಾನ ಮೂರ್ತಿ (944974004) ಸಂಪರ್ಕಿಸಬಹುದಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
