Connect with us

ಡಯಟ್‌ನಲ್ಲಿ ಹೊಸದುರ್ಗದ SVS ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಕಾರ್ಯಾಗಾರ

ಡಯಟ್‌ನಲ್ಲಿ ಹೊಸದುರ್ಗದ SVS ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಕಾರ್ಯಾಗಾರ

ಮುಖ್ಯ ಸುದ್ದಿ

ಡಯಟ್‌ನಲ್ಲಿ ಹೊಸದುರ್ಗದ SVS ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಕಾರ್ಯಾಗಾರ

CHITRADURGA NEWS | 22 OCTOBER 2024

ಚಿತ್ರದುರ್ಗ: ನಗರದ ಡಯಟ್‌ನಲ್ಲಿ ಸೋಮವಾರ ಹೊಸದುರ್ಗ(Hosdurga)ಎಸ್ ವಿಎಸ್(SVS) ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕ್ಲಿಕ್ ಮಾಡಿ ಓದಿ: ಚಿಕ್ಕಜಾಜೂರು – ಗುಂತಕಲ್‌ ನಡುವಿನ ಪ್ಯಾಸೆಂಜರ್‌ ರೈಲು ಸಂಚಾರ ರದ್ದು

ಡಯಟ್ ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಶಿಕ್ಷಕರಿಗೆ ಸಹಾನುಭೂತಿ, ಸಂವೇದನಾಶೀಲತೆ ಗುಣ ಅಗತ್ಯ ಎಂದು ಹೇಳಿದರು.

ಶಿಕ್ಷಕರಿಗೆ ಒಳನೋಟ ಮುಖ್ಯವಾಗಿದ್ದು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾನುಭೂತಿ ಗುಣ ಬೆಳೆಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿಗೆ ಪ್ರಾಚಾರ್ಯ ಎಂ.ನಾಸಿರುದ್ದೀನ್‌ರವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಲಾಗುತ್ತದೆ.

ಕ್ಲಿಕ್ ಮಾಡಿ ಓದಿ:  ಜಿಲ್ಲೆಯಲ್ಲಿ 48 ಮನೆ ಹಾನಿ | ಯಾವ ತಾಲೂಕಿನಲ್ಲಿ ಎಷ್ಟು ಮನೆ ಹಾನಿ ಇಲ್ಲಿದೆ ಮಾಹಿತಿ 

ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ಹೊಸ ಚಿಂತನೆ, ಆಲೋಚನೆಯೊಂದಿಗೆ ನಾವೀನ್ಯಯುತ ಚಟುವಟಿಕೆ ಅಳವಡಿಸಿಕೊಂಡು ಬೋಧಿಸಬೇಕು. ತರಗತಿ ಕೋಣೆಯಲ್ಲಿ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣ ನಿರ್ಮಿಸಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದರ ಜತೆಗೆ ಜೀವನ ಮೌಲ್ಯ ಬೆಳೆಸಬೇಕು ಎಂದು ತಿಳಿಸಿದರು.

ಉಪನ್ಯಾಸಕಿ ವಿ.ಕನಕಮ್ಮ ಮಾತನಾಡಿ, ಡಯಟ್‌ನಲ್ಲಿ ಜಿಲ್ಲಾ ಸಂಪನ್ಮೂಲ ಘಟಕ, ಸೇವಾಪೂರ್ವ ಮತ್ತು ಸೇವಾನಿರತ ಶಿಕ್ಷಣ, ಯೋಜನೆ ಮತ್ತು ನಿರ್ವಹಣೆ, ಪಠ್ಯಕ್ರಮ ಮತ್ತು ಮೌಲ್ಯಮಾಪನ ಮತ್ತು ಕಾರ್ಯಾನುಭವ ವಿಭಾಗಗಳ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಉಪನ್ಯಾಸಕ ನಿತ್ಯಾನಂದ ಮಾತನಾಡಿ, ತರಗತಿಯಲ್ಲಿ ತಂತ್ರಜ್ಞಾನ ಆಧಾರಿತವಾಗಿ ಬೋಧಿಸಲು ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ವಿಜ್ಞಾನ ವಿಚಾರ ಸಂಕಿರಣ, ನಾಟಕ, ವಸ್ತು ಪ್ರದರ್ಶನ, ಇನ್ಸ್ಫೈರ್ ಅವಾರ್ಡ್ ಸ್ಪರ್ಧಾ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಭರ್ತಿಗೆ ಇನ್ನು 6 ಅಡಿ ಬಾಕಿ | ಚಿತ್ತಾ ಮಳೆ ಆರ್ಭಟಕ್ಕೆ ಹೆಚ್ಚಾದ ಒಳಹರಿವು

ಈ ಸಂದರ್ಭದಲ್ಲಿ ಎಸ್.ವಿ.ಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಗಿರೀಶ್, ಪ್ರಶಿಕ್ಷಣಾರ್ಥಿಗಳು ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version