Connect with us

    ಬಡವರ ಪಾಲಿನ ದೇವರು | ಡಾ.ಜಯರಾಮ್ ಇನ್ನು ನೆನಪು ಮಾತ್ರ | ನುಡಿನಮನ

    Dr.Jayaram

    ಹೊಸದುರ್ಗ

    ಬಡವರ ಪಾಲಿನ ದೇವರು | ಡಾ.ಜಯರಾಮ್ ಇನ್ನು ನೆನಪು ಮಾತ್ರ | ನುಡಿನಮನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 MARCH 2025

    ಹೊಸದುರ್ಗ: ಬಡವರ ಪಾಲಿನೆ ದೇವರು, ರೋಗಿಗಳ ಪಾಲಿಗೆ ಆಪದ್ಭಾಂಧವ ಎಂದೇ ಹೆಸರಾಗಿರುವ ಡಾ.ಜಯರಾಮ್ ನಾಯ್ಕ್ ಅಗಲಿಕೆಯನ್ನು ಹೊಸದುರ್ಗದ ಜನತೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ.

    ವೈದ್ಯ ವೃತ್ತಿಯನ್ನು ಜನಸೇವೆಗಾಗಿ ಬಳಸಿಕೊಂಡು, ಜನರ ಪಾಲಿಗೆ ನಿಜವಾದ ದೇವರೇ ಆಗಿದ್ದ ಡಾ.ಜಯರಾಮ್ ಅವರ ಆಕಸ್ಮಿಕವಾಗಿ ತಮ್ಮ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಈ ಅಕಾಲಿಕ ಮರಣಕ್ಕೆ ಜನ ದುಃಖಿತರಾಗಿದ್ದಾರೆ.

    ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ಡಾ.ಜಯರಾಂ ಸಾವು

    ತಮ್ಮ ಕ್ಲಿನಿಕ್‍ಗೆ ಬರುವ ಬಡವರು ಹಣವಿಲ್ಲ ಎಂದರೆ ಅದಕ್ಕೆ ಚಿಂತೆ ಯಾಕೆ ಎಂದು ಉಚಿತವಾಗಿ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು. ರೋಗಿಗಳು ಆತಂಕಗೊಂಡಾಗ ಅವರಿಗೆ ಧೈರ್ಯ ತುಂಬಿ ಅರ್ಧ ಖಾಯಿಲೆ ವಾಸಿ ಮಾಡುತ್ತಿದ್ದರು ಎಂದು ಅನೇಕರು ಅವರ ಬಗ್ಗೆ ಚಿತ್ರದುರ್ಗ ನ್ಯೂಸ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ನ್ಯೂಸ್ ಡಾ.ಜಯರಾಮ್ ನಾಯ್ಕ್ ಅವರಿಗೆ ಭಾವಪೂರ್ಣ ನುಡಿನಮನ ಸಲ್ಲಿಸುತ್ತಿದೆ.

    ಜನರೇ ನನ್ನ ಜೀವನದ ಉಸಿರು, ಬಡವರಿಗಾಗಿಯೇ ನನ್ನ ಬದುಕು ಮೀಸಲು ಎಂಬಂತೆ ಬದುಕಿದವರು ಡಾ.ಜಯರಾಮ್ ನಾಯ್ಕ್.

    ಇದನ್ನೂ ಓದಿ: ಬಜೆಟ್‍ನಲ್ಲಿ ರೈತರಿಗೆ ಬಂಪರ್ | ಜಾನುವಾರು ಮೃತಪಟ್ಟರೆ 15 ಸಾವಿರ ಪರಿಹಾರ

    ಬಡತನದಲ್ಲಿ ಹುಟ್ಟಿದ ನನಗೆ ವೈದ್ಯ ವೃತ್ತಿಯನ್ನು ದೇವರು ಕರುಣಿಸಿರುವ ವರ ಎಂದು ನಂಬಿ ಬಡವರಿಗಾಗಿಯೇ, ತನ್ನ ಜೀವನವನ್ನು ಬಡ ರೋಗಿಗಳಿಗಾಗಿಯೇ ಮುಡುಪಾಗಿಟ್ಟಿದ್ದ ಹೊಸದುರ್ಗ ತಾಲೂಕಿನ ಬೀಸನಹಳ್ಳಿ ಲಂಬಾಣಿಹಟ್ಟಿಯ ಬಡ ರೈತ ಕುಟುಂಬದ ಹನುಮಂತ ನಾಯಕ ಶಾಂತಿಬಾಯಿ ದಂಪತಿಯ ಮಗ ವೈದ್ಯ ಡಾ.ಜಯರಾಮ್ ನಾಯ್ಕ್.

    ಹೊಸದುರ್ಗದಲ್ಲಿ ಅದೊಂದು ಕಾಲವಿತ್ತು. ಸುಮಾರು 25 ವರ್ಷಗಳ ಹಿಂದೆ ಸಾಮಾನ್ಯ ರೈತ ಕುಟುಂಬದ ಯುವಕನೊಬ್ಬ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ, ನಂತರ ನಗರದ ಬಸ್ ನಿಲ್ದಾಣದ ಎದುರು ಡಾ.ಜೈರಾಮ್ ಕ್ಲಿನಿಕ್ ಎಂದು ನಾಮಫಲಕ ಹಾಕಿದ್ದರು.

    ಇದನ್ನೂ ಓದಿ: ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಈ ವರ್ಷ ಪೂರ್ಣ | ಸಿಎಂ ಸಿದ್ದರಾಮಯ್ಯ

    ಅಂದಿನಿಂದಲೇ ಅವರನ್ನ ನಂಬಿದ ನೂರಾರು ಜನರು ಪ್ರತಿನಿತ್ಯ ಅವರ ಸೇವೆಯನ್ನು ಪಡೆಯಲು ಪ್ರಾರಂಭಿಸಿದರು. ಹೊಸದುರ್ಗ ತಾಲೂಕಿಗೆ ಹೊಂದಿಕೊಂಡಂತೆ ನೂರಾರು ಹಳ್ಳಿಗಳ ಜನರು ನಮ್ಮ ಪಾಲಿಗೆ ದೇವರೇ ಇವರನ್ನು ಕಳಿಸಿದ್ದಾನೆ ಎಂದು ನಂಬಿದ್ದರು. ಎಲ್ಲಾ ರೀತಿಯ ಕಾಯಿಲೆಗಳಿಗೂ ಇವರ ಚಿಕಿತ್ಸೆ ರೋಗಿಗಳಿಗೆ ವರದಾನವಾಗಿತ್ತು.

    ಹಣ ಪಡೆಯದೇ ಚಿಕಿತ್ಸೆ ನೀಡುತ್ತಿದ್ದ ದೇವರು:

    ಹೊಸದುರ್ಗದ ಕೆನರಾ ಬ್ಯಾಂಕ್ ಬಳಿಯಿರುವ ಡಾ.ಜಯರಾಮ್ ಅವರ ಆಸ್ಪತ್ರೆಗೆ ಹೋದರೆ, ಅಲ್ಲಿ ಪ್ರತಿನಿತ್ಯ ನೂರಾರು ಬಡ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದು, ಅವರಿಂದಲೇ ಮಾತ್ರೆ ಮತ್ತು ಔಷಧಿಗಳನ್ನು ಪಡೆದು ಹೋಗುತ್ತಿರುವ ರೋಗಿಗಳ ಸಂಖ್ಯೆಗೆ ಲೆಕ್ಕವಿರಲಿಲ್ಲ.

    ಇದನ್ನೂ ಓದಿ: ನಾಳೆಯಿಂದ ಒಂದು ವಾರ ವಿದ್ಯುತ್ ವ್ಯತ್ಯಯ

    ಬಹಳಷ್ಟು ವೈದ್ಯರು ಇವರನ್ನ ನೋಡಿ ವೈದ್ಯಕೀಯ ಸೇವೆ ಎಂದರೆ ಹೀಗೆ ಇರುತ್ತದೆಯಾ? ಎಂದು ಪ್ರಶ್ನೆ ಮಾಡಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಂಡಿದ್ದರು ವೈದ್ಯ ಜೈರಾಮ್.

    ಹೊಸದುರ್ಗದ ಅಜಾತಶತೃ ಡಾ.ಜಯರಾಮ್:

    ಹೊಸದುರ್ಗ ತಾಲೂಕಿನ ಬೀಸನಹಳ್ಳಿ ಲಂಬಾಣಿಹಟ್ಟಿಯ ಆದರ್ಶ ಕೃಷಿ ಕುಟುಂಬದ ಹನುಮಂತ ನಾಯ್ಕ್ ಮತ್ತು ಶಾಂತಿಬಾಯಿ ದಂಪತಿಗಳಿಗೆ ನಾಲ್ವರು ಮಕ್ಕಳು. ಅವರಲ್ಲಿ ಜೈರಾಮ್ ಹಿರಿಯ ಮಗ.

    ಇದನ್ನೂ ಓದಿ: 200 ಖಾಲಿ ಹುದ್ದೆಗಳಿಗೆ ಮಾ.13ರಂದು ನೇರ ನೇಮಕಾತಿ ಸಂದರ್ಶನ

    ಜಯರಾಮ್ ನಾಯಕ್ ರವರಿಗೆ ಅಣ್ಣ-ತಮ್ಮಂದಿರೆಂದರೆ ಪಂಚಪ್ರಾಣ, ಹೊಸದುರ್ಗದ ಹೆಸರಾಂತ ವಕೀಲರಾದ ಜಗದೀಶ್, ಓಂಕಾರ್ ಹಾಗೂ ಸುರೇಂದ್ರ ಈ ಸಹೋದರರು ಅಣ್ಣನ ಸಲಹೆಯಂತೆ ಕೃಷಿ ಕಾಯಕ ನಡೆಸುತ್ತಿದ್ದರು.

    ವಾಣಿವಿಲಾಸ ಸಾಗರ(ಮಾರಿಕಣಿವೆ) ಬಳಿ ಹಾಗೂ ಕುರುಬರಹಳ್ಳಿಯ ಬಳಿ ಇಬ್ಬರು ಸಹೋದರರಿಗೂ ಜಮೀನು ಕೊಡಿಸಿ, ಅಲ್ಲಿ ಅವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದರು.

    ಇದನ್ನೂ ಓದಿ: ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ದಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

    ಈಗ ತಮ್ಮ ಇಷ್ಟದ ಕೃಷಿ ಬದುಕಿಗಾಗಿ ನಿರ್ಮಿಸಿಕೊಂಡಿದ್ದ ಕುರುಬರಹಳ್ಳಿ ಬಳಿಯ ಜಮೀನಿನ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಡಾ.ಜಯರಾಮ್ ನಾಯ್ಕ್ ಬಾರದ ಲೋಕಕ್ಕೆ ತೆರಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top