ಮುಖ್ಯ ಸುದ್ದಿ
ಕಾರ್ಯಾಗಾರದಲ್ಲಿ ಡಾ.ಸಿ.ಎಲ್.ಫಾಲಕ್ಷ | ಆಹಾರ ಸುರಕ್ಷತೆ, ಗುಣಮಟ್ಟ ಕಾಯ್ದೆ ಕುರಿತು ಮಾಹಿತಿ
CHITRADURGA NEWS | 29 MARCH 2024
ಚಿತ್ರದುರ್ಗ: ನಗರದ ಐಎಂಎ ಸಭಾಂಗಣದಲ್ಲಿ ಗುರುವಾರ ಔಷಧ ವ್ಯಾಪಾರಸ್ಥರಿಗೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ ಕುರಿತು ಮಾಹಿತಿ ನೀಡುವ ಕಾರ್ಯಗಾರ ನಡೆಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಸಿ.ಎಲ್.ಫಾಲಕ್ಷ ಮಾತನಾಡಿ, ಮೆಡಿಕಲ್ ಸ್ಟೋರ್‍ಗಳಲ್ಲಿ ಆಹಾರ ಪದಾರ್ಥಗಳಾದ ಪ್ರೋಟೀನ್ ಪೌಡರ್, ವಿಟಮಿನ್ ಮಾತ್ರೆ, ಬೋರ್ವಿಟಾ,ಬೂಸ್ಟ್‍ಗಳಂತಹ ಪದಾರ್ಥಗಳನ್ನು ಮಾರಾಟ ಮಾಡಲು ಕಡ್ಡಾಯವಾಗಿ ಕಾಯ್ಡೆಯಡಿ ನೊಂದಣಿ, ಪರವಾನಿ ಪಡೆಯಬೇಕು ಎಂದರು.
ಇದನ್ನೂ ಓದಿ: ಪ್ರಬಲ ಆಕಾಂಕ್ಷಿ ರಘುಚಂದನ್ ಅಸಮಾಧಾನ
ಕಾರ್ಯಗಾರದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ ಕುರಿತು ಕಿರು ಪರಿಚಯ ಮಾಡಿಕೊಟ್ಟು, ವ್ಯಾಪಾರಸ್ಥರ ಸಂದೇಹಗಳಿಗೆ ಉತ್ತರ ನೀಡಿದರು. ನೊಂದಣಿ ಮಾಡಿಸದೇ ಇದ್ದಲ್ಲಿ ಆಗಬಹುದಾದ ತೊಂದರೆ, ಕಾಯ್ದೆಯಡಿ ವಿಧಿಸಬಹುದಾದ ದಂಡ ಹಾಗೂ ಶಿಕ್ಷೆ ಬಗ್ಗೆ ತಿಳಿಸಿದರು.
ಇದನ್ನೂ ಓದಿ: ರೂ.1.12 ಕೋಟಿ ಮೌಲ್ಯದ ಮದ್ಯ ಜಪ್ತಿ
ಈ ಸಂದರ್ಭದಲ್ಲಿ ಆಹಾರ ಸುರಕ್ಷತಾಧಿಕಾರಿ ತಿರುಮಲೇಶ್, ಔಷಧ ನಿಯಂತ್ರಣ ಇಲಾಖೆಯ ಗೀತಾ, ಔಷಧ ವ್ಯಾಪಾರಸ್ಥರ ಸಂಘದ ಮಹಾಂತೇಶ್, ಔಷಧಿ ವ್ಯಾಪಾರಿ ಸಂಘದ ಟಿ.ಡಿ.ಧನಂಜಯ,ರೆಡ್ಡಿ ಸೇರಿದಂತೆ ಮತ್ತಿತರು ಇದ್ದರು.