ಮುಖ್ಯ ಸುದ್ದಿ
TC: ವಿದ್ಯುತ್ ಟ್ರಾನ್ಸ್‍ಫಾರ್ಮರ್ ರಿಪೇರಿಗೆ ದುಡ್ಡು ಕೊಡಬೇಡಿ | ಬೆಸ್ಕಾಂ ಸೂಚನೆ
CHITRADURGA NEWS | 25 NOVEMBER 2024
ಚಿತ್ರದುರ್ಗ: ವಿಫಲವಾದ ವಿದ್ಯುತ್ ಪರಿವರ್ತಕದ(TC) ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಅಧಿಕಾರಿ ಹಾಗೂ ನೌಕರರಿಗೆ ಹಣ ನೀಡಬಾರದು ಎಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಸೂಚನೆ ನೀಡಿದೆ.
ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಗ್ರಾಮೀಣ, ಹೊಳಲ್ಕೆರೆ, ಹೊಸದುರ್ಗ, ಶ್ರೀರಾಂಪುರ ಉಪವಿಭಾಗದ ವ್ಯಾಪ್ತಿಯಲ್ಲಿ ಪರಿವರ್ತಕಗಳು ವಿಫಲವಾದರೆ ನಗರ ವ್ಯಾಪ್ತಿಯಲ್ಲಿ 24 ಗಂಟೆಯೊಳಗಾಗಿ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 72 ಗಂಟೆಯೊಳಗೆ ಪರಿವರ್ತಕವನ್ನು ಬದಲಾಯಿಸಲು ನಿಯಮವಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಬಫರ್‍ಸ್ಟಾಕ್ ಅಡಿಯಲ್ಲಿ ಎಲ್ಲಾ ಉಪವಿಭಾಗಗಳಿಗೆ ಪರಿವರ್ತಕಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಪರಿವರ್ತಕಗಳನ್ನು ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಉಪವಿಭಾಗದಲ್ಲಿ ಗಜಲಕ್ಷ್ಮೀ ಎಂಟರ್‍ಪ್ರೈಸೆಸ್ ಅವರು ಹೊಳಲ್ಕೆರೆ ಉಪವಿಭಾಗದಲ್ಲಿ ಸಾಯಿರಾಮ್ ಎಂಟರ್‍ಪ್ರೈಸ್ಸಸ್ ಅವರು ಹಾಗೂ ಹೊಸದುರ್ಗ ಮತ್ತು ಶ್ರೀರಾಂಪುರ ಉಪವಿಭಾಗದಲ್ಲಿ ವಿಘ್ನೇಶ್ವರ ಎಂಟರ್‍ಪ್ರೈಸಸ್ ಏಜೆನ್ಸಿ ಅವರಿಗೆ ನೀಡಲಾಗಿದ್ದು, ಪರಿವರ್ತಕಗಳನ್ನು ರಿಪೇರಿ ಮಾಡಿ ಸರಬರಾಜು ಮಾಡುತ್ತಿದ್ದಾರೆ.
ವಿಫಲವಾದ ಪರಿವರ್ತಕ ಬದಲಾವಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಹಾಗೂ ದೂರುಗಳಿಗಾಗಿ ಬೆಸ್ಕಾಂ ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ದೂರವಾಣಿ ಸಂಖ್ಯೆ 9448279014 ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಚಿಜಿನಿಯರ್ ಅವರ ದೂರವಾಣಿ ಸಂಖ್ಯೆ 9449842739 ಗೆ ಸಂಪರ್ಕಿಸಬಹುದು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.