Connect with us

    ಮುತ್ತುಗದ ಮರ ಮೈ ತುಂಬಾ ಹೂ ಬಿಟ್ಟರೆ ಏನರ್ಥ ಗೊತ್ತಾ..!

    ಮುತ್ತಗದ ಹೂವು

    ಮುಖ್ಯ ಸುದ್ದಿ

    ಮುತ್ತುಗದ ಮರ ಮೈ ತುಂಬಾ ಹೂ ಬಿಟ್ಟರೆ ಏನರ್ಥ ಗೊತ್ತಾ..!

    CHITRADURGA NEWS | 24 MARCH 2024

    ಚಿತ್ರದುರ್ಗ: ಎಲ್ಲೆಲ್ಲೂ ಬಿರು ಬಿಸಿಲು, ನೆತ್ತಿ ಸುಡುವ ಬಿಸಿಲು. ಕಾದು ಕಾವಲಿಯಂತಾಗಿರುವ ಭೂಮಿ. ಕೆರೆ, ಕಟ್ಟೆ, ಕುಂಟೆ ಎಲ್ಲೆಲ್ಲೂ ಹನಿ ನೀರಿಲ್ಲ. ಇಂತಹ ಕೆಟ್ಟ ಬೇಸಿಗೆಯ ನಡುವೆ ಸುಂದರವಾಗಿ ಧಗಧಗನೆ ಉರಿಯುತ್ತಿರುವ ಬೆಂಕಿಯ ಜ್ವಾಲೆಯಂಥ ಬಣ್ಣದ ಹೂವುಗಳು ಹರಳಿರುವ ದೃಶ್ಯ ಅಲ್ಲಲ್ಲಿ ಕಾಣಿಸುತ್ತಿದೆ.

    ಕೇಸರಿ ಬಣ್ಣದ ಈ ವಿಶಿಷ್ಟ ಹೂವು ಬೇಸಿಗೆಯಲ್ಲಿ ಹರಳಿ ನಿಂತಿರುವುದು ಸೋಜಿಗವೆನಿಸಿದೆ. ಬೇರೆಲ್ಲಾ ಮರ, ಗಿಡಗಳು ಬಾಡಿ ಹೋಗಿರುವಾಗ ಈ ಮರ ಹೂವು ಬಿಟ್ಟು ಕಂಗೊಳಿಸುವಾಗ ರೈತರು ಅದರಿಂದ ಒಂದು ಸೂಚನೆ ಪಡೆದುಕೊಳ್ಳುತ್ತಾರೆ.

    ಕ್ಲಿಕ್ ಮಾಡಿ ಓದಿ: ಗೂಡ್ಸ್‌ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ | ಸ್ಥಳದಲ್ಲೇ ವಾಹನ ಚಾಲಕ ಮೃತ

    ಹೌದು, ಬಯಲು ಸೀಮೆಯಲ್ಲಿ ವ್ಯಾಪಕವಾಗಿ ಕಂಡು ಬರುವ ಈ ಮರದ ಹೂವು ಮಾತ್ರವಲ್ಲ, ಎಲೆಗಳು ಬಹು ಉಪಯೋಗಿ. ಊಟಕ್ಕೂ ಬಳಕೆ ಮಾಡಲಾಗುತ್ತದೆ. ಮುತ್ತುಗದ ಎಲೆ ಅಥವಾ ಇಸ್ತ್ರದ ಎಲೆ ಎನ್ನಲಾಗುತ್ತದೆ.

    ಹೌದು, ಮುತ್ತಗದ ಮರದಲ್ಲಿ ಹೂವು ಬಿಟ್ಟರೆ, ಅದೊಂದು ಪ್ರಕೃತಿ ನೀಡುವ ಶುಭ ಸೂಚನೆ ಎಂದು ರೈತರು ನಂಬುತ್ತಾರೆ.

    ಕ್ಲಿಕ್ ಮಾಡಿ ಓದಿ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಆಶೀರ್ವಾದ ಪಡೆದ ಶಾಮನೂರು ಶಿವಶಂಕರಪ್ಪ | ಒಳಮಠ, ಹೊರಮಠದಲ್ಲಿ ವಿಶೇಷ ಪೂಜೆ

    ಈ ಬೇಸಿಗೆಯಲ್ಲಿ ಮುತ್ತುಗದ ಮರಗಳಲ್ಲಿ ಹೂವು ಹರಳಿದರೆ ಮುಂದೆ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ರೈತರಲ್ಲಿದೆ.

    ಮುತ್ತಗದ ಹೂವು

    ಮುತ್ತಗದ ಹೂವು

    ಬೇಸಿಗೆಯಲ್ಲಿ ಹರಳುವ ಈ ಹೂವಿಗೆ ಕಾಡಿನ ಜ್ವಾಲೆ ಹೂವು ಎನ್ನುತ್ತಾರೆ. ಶಿವನಿಗೆ ಅರ್ಪಿಸುವ ಹತ್ತು ಪುಷ್ಪಗಳಲ್ಲಿ ಮುತ್ತಗದ ಹೂವು ಕೂಡಾ ಒಂದು.

    ಕ್ಲಿಕ್ ಮಾಡಿ ಓದಿ: ಹೊಸದುರ್ಗ, ಹೊಳಲ್ಕೆರೆಯಲ್ಲೂ ಬೋರ್‌ವೆಲ್‌ ಕೊರೆಯಲು ದರ ನಿಗದಿ | ಜಿಎಸ್‌ಟಿ ಬಿಲ್‌ ಕೊಡಲು ತಾಕೀತು

    ಬ್ರಹ್ಮವೃಕ್ಷ, ಮುತ್ತುಗದ ಮರ ಎನ್ನುವ ಈ ಮರದ ಕಾಂಡ, ರೆಂಬೆ ಕೊಂಬೆಗಳಲ್ಲಿ ಹೂ ಬಿಟ್ಟಾಗ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ದಟ್ಟವಾಗಿದೆ.

    ಮುತ್ತಗದ ಮರದ ಚಕ್ಕೆಗಳನ್ನು ಹೋಮಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಹೂವು ಬಿಟ್ಟಿರುವುದರಿಂದ ಅವಧಿಗೆ ಮೊದಲೇ ಮಳೆಯಾಗುತ್ತದೆ ಎನ್ನುವ ವಿಶ್ವಾಸ ರೈತರಲ್ಲಿ ಬಂದಿದೆ.

    ಕ್ಲಿಕ್ ಮಾಡಿ ಓದಿ: ಹಟ್ಟಿ ತಿಪ್ಪೇಶನ ದರ್ಶನಕ್ಕೆ ವರುಣ ದೇವ | ಆರ್ಭಟಿಸುತ್ತಾ ಆಗಮಿಸುವ ನಿರೀಕ್ಷೆ

    ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಮಳೆ ಮುಗಿಲು ಸೇರಿದೆ. ಹವಾಮಾನ ಇಲಾಖೆ ನೀಡುವ ವರದಿಗಳನ್ನು ನೋಡಿ ರೈತರು ಇವತ್ತು ಮಳೆ ಬರುತ್ತೆ, ನಾಳೆ ಬರುತ್ತೆ ಎಂದು ಕಾದಿದ್ದೇ ಕಾದಿದ್ದು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಳೆ ಆಗುತ್ತಿರುವುದು ಆಶಾಭಾವನೆ ಇಮ್ಮಡಿಗೊಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top