Connect with us

ರೈತರಿಗೆ ಶಿಮುಲ್‍ನಿಂದ ಗುಡ್‍ನ್ಯೂಸ್ | ಹೈನುಗಾರಿಕೆ ಉತ್ತೇಜನಕ್ಕೆ 1.20 ಕೋಟಿ | ಉಚಿತ ಹಸಿರು ಮೇವಿನ ಬೀಜಗಳ ಮಿನಿ ಕಿಟ್ ಹಂಚಿಕೆ

ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)

ಮುಖ್ಯ ಸುದ್ದಿ

ರೈತರಿಗೆ ಶಿಮುಲ್‍ನಿಂದ ಗುಡ್‍ನ್ಯೂಸ್ | ಹೈನುಗಾರಿಕೆ ಉತ್ತೇಜನಕ್ಕೆ 1.20 ಕೋಟಿ | ಉಚಿತ ಹಸಿರು ಮೇವಿನ ಬೀಜಗಳ ಮಿನಿ ಕಿಟ್ ಹಂಚಿಕೆ

CHITRADURGA NEWS | 23 MAY 2024

ಚಿತ್ರದುರ್ಗ: ಹಾಲು ಉತ್ಪಾಧನೆ ಹೆಚ್ಚಿಸಲು, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದಿಂದ 1.20 ಕೋಟಿ ರೂ. ಮೊತ್ತದ ಹಸಿರು ಮೇವಿನ ಬೀಜಗಳ ಕಿಟ್‍ಗಳನ್ನು ರೈತರಿಗೆ ಉಚಿತವಾಗಿ ಹಂಚಿಕೆ ಮಾಡಲಿದೆ.

ಕೇಂದ್ರ ಸರ್ಕಾರದ ಎನ್‍ಎಲ್‍ಎಂ ಯೋಜನೆಯ ಅನುದಾನದಡಿ ಎನ್‍ಡಿಡಿಬಿ ಹಾಗೂ ಕರ್ನಾಟಕ ಸಹಕಾರ ಹಾಲು ಮಹಾಮಂಡಳದ ವತಿಯಿಂದ ಅನುದಾನ ಪಡೆದು ರೈತರಿಗೆ ಉಚಿತವಾಗಿ ಹಂಚಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ವಿವಿ ಸಾಗರ ಜಲಾಶಯದ ಇಂದಿನ ಮಟ್ಟ | ಒಂದೇ ಮಳೆಗೆ ಒಂದೂವರೆ ಟಿಎಂಸಿ ನೀರು ಸಂಗ್ರಹ

ಹೈನು ರಾಸುಗಳ ಆರೋಗ್ಯ ಸುಧಾರಣೆ, ಉತ್ತಮ ಗುಣಮಟ್ಟದ ಹಾಲಿನ ಉತ್ಪಾಧನೆಗೆ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಹಾಲು ಉತ್ಪಾದಕರು ಹಸಿರು ಮೇವು ಬಳಕೆ ಮಾಡುವುದು ಬಹಳ ಮುಖ್ಯ.

ಕಳೆದ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದ ಹಿನ್ನಲೆಯಲ್ಲಿ ಮೇವಿನ ಲಭ್ಯತೆ ಕಡಿಮೆಯಾದ್ದರಿಂದ ದುಬಾರಿ ಬೆಲೆ ತೆತ್ತು ಮೇವನ್ನು ಖರೀದಿಸಿ ನಷ್ಟ ಅನುಭವಿಸಿದ ರೈತರಿಗೆ ನೆರವಾಗುವ ಉದ್ದೇಶದಿಂದ ಮುಂಗಾರು ಹಂಗಾಮು ಪ್ರಾರಂಭವಾಗುವ ಮುನ್ನಾ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ವಿವಿಧ ಮೇವಿನ ತಳಿಗಳ 3/5 ಕೆ.ಜಿ. ಕಿರು ಪೊಟ್ಟಣಗಳನ್ನು ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಿದೆ.

ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ, ಔಷಧಿ ಲಭ್ಯ

ಪ್ರತಿಯೊಬ್ಬ ಹಾಲು ಉತ್ಪಾದಕರಿಗೂ ಮೇವಿನ ಬೀಜದ ಕಿರು ಪೊಟ್ಟಣಗಳನ್ನು ವಿತರಿಸಿ ಹೆಚ್ಚು ಹಸಿರು ಮೇವು ಉತ್ಪಾದಿಸುವ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವಾಗಿ ಮಾರ್ಪಡಿಸಲು ಯೋಜಿಸಲಾಗಿದೆ.

ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಶೇಖರಣೆ ಆಧಾರದ ಮೇಲೆ ಮಳೆ ಆಶ್ರಿತ ರೈತರು, ನೀರಾವರಿ ಹೊಂದಿರುವ ರೈತರನ್ನು ಗುರುತಿಸಿ ಯೋಜನೆಯ ನಿಯಮದಂತೆ ಮೇವಿನ ಜೀಜದ ಮಿನಿ ಕಿಟ್‍ಗಳನ್ನು ಹಂಚಿಕೆ ಮಾಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ.

ಇದನ್ನೂ ಓದಿ: ಎಚ್.ಆಂಜನೇಯ ಅವರಿಗೆ ಎಂಎಲ್ಸಿ ಮಾಡಲು ಕಾಂಗ್ರೆಸ್ ಮುಖಂಡರ ಒತ್ತಾಯ

2024-25ನೇ ಸಾಲಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರುದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 120 ಮೆಟ್ರಿಕ್ ಟನ್ ಬಹುಕಟಾವು ಜೋಳ ಸಿಎಸ್‍ಹೆಚ್-24ಎಮ್‍ಎಫ್=20ಎಮ್‍ಟಿ, ಸಿಎಸ್‍ಹೆಚ್-43ಎಮ್‍ಎಫ್=90ಎಂಟಿ, ಮೆಕ್ಕೆಜೋಳ ಜೆ177-10ಎಂಟಿ ಮೇವಿನ ಬಿತ್ತನೆ ಬೀಜ ಹಂಚಿಕೆಯಾಗಿದೆ.

ಸಾಮಾನ್ಯ ವರ್ಗಕ್ಕೆ ಶೇ.70, ಪ.ಜಾತಿ 20, ಪ.ಪಂಗಡಕ್ಕೆ ಶೇ.10 ನಷ್ಟು, ಹಾಲು ಶೇಖರಣೆಯ ಆಧಾರದ ಮೇಲೆ ವಿತರಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ

ಹಾಲು ಉತ್ಪಾದಕರು ಈ ಯೋಜನೆಯಡಿ ಲಭ್ಯವಿರುವ ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್‍ಗಳನ್ನು ಉಚಿತವಾಗಿ ಪಡೆದು ಹಸಿರು ಮೇವು ಉತ್ಪಾದನೆ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version