ಮುಖ್ಯ ಸುದ್ದಿ
ರೇಣುಕಸ್ವಾಮಿ ಕೊಲೆ | ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಶ್ಲೇಷಣೆ
CHITRADURGA NEWS | 20 JUNE 2024
ಚಿತ್ರದುರ್ಗ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಹಾಗೂ ಇದರಲ್ಲಿ ಸಿಲುಕಿರುವ ನಟ ದರ್ಶನ್ ಬಗ್ಗೆ ತೆಲುಗು ಹಾಗೂ ಹಿಂದಿ ಸಿನಿಮಾಗಳ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ.
ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ರೇಣುಕಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಕಮೆಂಟ್ ಬಗ್ಗೆ ದರ್ಶನ್ ತಲೆಕೆಡಿಸಿಕೊಳ್ಳಬಾರದಿತ್ತು ಎಂದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬದ ಜತೆ ಸರ್ಕಾರವಿದೆ | ಗೃಹ ಸಚಿವ ಡಾ.ಜಿ.ಪರಮೇಶ್ವರ್
ಟ್ರೋಲ್‍ಗಳ ಬಗ್ಗೆ ಸೆಲೆಬ್ರೆಟಿಗಳು ತಲೆಕೆಡಿಸಿಕೊಳ್ಳಬಾರದು. ದರ್ಶನ್ ಒಂದು ಸಿನಿಮಾಗೆ 10 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದರೆ ಅವರು ಎಷ್ಟು ಅದ್ಬುತ ನಟ ಹಾಗೂ ಎಷ್ಟು ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅಂಥವರು ಯಾರೋ ಒಬ್ಬ ಮಾಡಿದ ಕಮೆಂಟ್ ಬಗ್ಗೆ ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಹೇಳಿದ್ದಾರೆ.
ರೇಣುಕಸ್ವಾಮಿ ಕೊಲೆ ಉದ್ದೇಶಪೂರ್ವಕ ಅಲ್ಲ. ಕೊಲೆ ಮಾಡುವ ಉದ್ದೇಶವೂ ದರ್ಶನ್‍ಗೆ ಇರಲಿಲ್ಲ. ಕೋಪದಲ್ಲಿ ಏನೋ ಮಾಡಲು ಹೋಗಿ ಮತ್ತೇನೋ ಆಗಿ ಅನಾಹುತ ಸಂಭವಿಸಿದೆ.
ಇದನ್ನೂ ಓದಿ: ರೇಣುಕಸ್ವಾಮಿ ಮೈಮೇಲಿದ್ದ ಕರಡಿಗೆ ಸುಳಿವು | ಆಟೋ, ಕಾರು ಕೂಡಾ ಜಪ್ತಿ
ನಟಿ ಪವಿತ್ರಾ ಗೌಡ ಈ ಕಮೆಂಟ್ ಬಗ್ಗೆ ಗಮನಕೊಡದೆ ಇದ್ದಿದ್ದರೆ ಈ ಘಟನೆಯನ್ನು ತಪ್ಪಿಸಬಹುದಾಗಿತ್ತು ಎಂದು ಕೂಡಾ ಆರ್‍ಜಿವಿ ತುಂಬಾ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ.
ಟ್ರೋಲ್, ಕಮೆಂಟ್ ಮಾಡುವವರಿಗೆ ಬೇಕಾಗಿರುವುದೇ ಇದು. ದರ್ಶನ್ ಅವರಂತಹ ದೊಡ್ಡ ನಟ ಇಂಥವರಿಗೆಲ್ಲಾ ಪ್ರತಿಕ್ರಿಯೆ ನೀಡಬಾರದು.
ಇದನ್ನೂ ಓದಿ: ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಿ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ
ದರ್ಶನ್ ಆನೆ ಇದ್ದಂತೆ, ಟ್ರೋಲರ್‍ಗಳು ನಾಯಿಗಳಿದ್ದಂತೆ, ಆನೆ ನೋಡಿ ನಾಯಿ ಬೊಗಳುತ್ತವೆ. ಒಂದು ವೇಳೆ ಆನೆ ಪ್ರತಿಕ್ರಿಯಿಸಿದರೆ ಆನೆಯ ಮರ್ಯಾದೆ ಹೋಗುತ್ತದೆ. ಹಾಗಾಗಿ ಟ್ರೋಲರ್, ಕೆಟ್ಟ ಕಮೆಂಟ್ ಮಾಡುವವರನ್ನು ನಿರ್ಲಕ್ಷಿಸಬೇಕು. ಆದರೆ, ದರ್ಶನ್ ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಈ ಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ರೇಣುಕಸ್ವಾಮಿಗೆ ದರ್ಶನ್ ಹೆದರಿಸಬೇಕು ಎಂದು ಹೊಡೆದಿದ್ದಾರೆ. ಅಚಾತುರ್ಯವಾಗಿ ಅವನು ಸತ್ತೇ ಹೋಗಿದ್ದಾನೆ. ಆನಂತರ ಶವವನ್ನು ಎಲ್ಲಿ ಹಾಕಬೇಕು ಎಂದು ತಿಳಿಯದೆ ಎಲ್ಲೋ ಹಾಕಿದ್ದಾರೆ. ವ್ಯವಸ್ಥಿತ ಕೊಲೆಯಾಗಿಲ್ಲ ಎನ್ನುವುದಕ್ಕೆ ಇದು ಉದಾಹರಣೆ.
ಇದನ್ನೂ ಓದಿ: ದರ್ಶನ್ ಕೇಸ್ | ಸುದೀಪ್, ಉಪೇಂದ್ರ, ರಚಿತಾ ಏನೇನು ಹೇಳಿದ್ರು..!
ಯಾವುದೇ ಟ್ರೋಲ್ ಅಥವಾ ಕಮೆಂಟ್ ಮಿತಿ ಮೀರಿದರೆ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.