Connect with us

ಡಿಪ್ಲೊಮೋ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ | ಅರ್ಜಿ ಅಹ್ವಾನ

ಮುಖ್ಯ ಸುದ್ದಿ

ಡಿಪ್ಲೊಮೋ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ | ಅರ್ಜಿ ಅಹ್ವಾನ

CHITRADURGA NEWS | 28 MAY 2024

ಚಿತ್ರದುರ್ಗ: ಶಿವಮೊಗ್ಗದ ವಿನೋಬನಗರದ 2ನೇ ಹಂತದಲ್ಲಿರುವ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯಲ್ಲಿ ಡಿಪ್ಲೊಮೋ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಹಾಸ್ಟೆಲ್ ಗಳಿಗೆ ಸಿಸಿ ಕ್ಯಾಮರಾ ಕಡ್ಡಾಯ | 24 ಗಂಟೆಯೂ ಸೆಕ್ಯೂರಿಟಿ ನೇಮಿಸಿ | ಜಿಪಂ ಸಿಇಓ ಸೂಚನೆ

ಈ ಸಂಸ್ಥೆಯ ಮೂಲಕ ಸಹಕಾರ ಸಂಘ ಸಂಸ್ಥೆ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ, ಖಾಸಗಿ ಅಭ್ಯರ್ಥಿಗಳಿಗೆ 6 ತಿಂಗಳು ಅವಧಿಯ ರೆಗ್ಯೂಲರ್ ಮತ್ತು ದೂರ ಶಿಕ್ಷಣ ಮುಖಾಂತರ ಡಿಪ್ಲೊಮೋ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ಪಡೆಯಲಿಚ್ಛಿಸುವ ಅರ್ಹ ಅಭ್ಯರ್ಥಿಗಳು ಜೂನ್ 15ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ನನ್ನ ಕಟಿಂಗ್ ಮಾಡುವವರಿಗೆ ಬಿಡುವಿಲ್ಲ | ಅವರು ಬಂದು ಕಟ್ ಮಾಡ್ತಾರಾ | ಮಧು ಬಂಗಾರಪ್ಪ ಗರಂ

ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಸಹಕಾರ ಸಂಘ, ಸಹಕಾರ ಇಲಾಖೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿದ್ದರೆ ಇವರುಗಳು ದೂರ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಬಹುದು. ಅದೇ ರೀತಿಯಾಗಿ ಖಾಸಗಿ ಅಭ್ಯರ್ಥಿಗಳಾಗಿದ್ದಲ್ಲಿ ರೆಗ್ಯೂಲರ್ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ: ವಯೋಮಿತಿ 16 ವರ್ಷ ದಾಟಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇ.18ರಷ್ಟು ಸ್ಥಾನಗಳನ್ನು ತರಬೇತಿಗಾಗಿ ಮೀಸಲಿಡಲಾಗಿದೆ. ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ: KSRTC ಬಸ್ ಹರಿದು ಕುರಿಗಾಯಿ ರಾಜಪ್ಪ ಹಾಗೂ 21 ಕುರಿಗಳ ದುರ್ಮರಣ

ಹೆಚ್ಚಿನ ಮಾಹಿತಿಗಾಗಿ: ಪ್ರಾಂಶುಪಾಲರು, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, 2ನೇ ಹಂತ, ವಿನೋಬನಗರ, ಶಿವಮೊಗ್ಗ-577204, ದೂರವಾಣಿ ಸಂಖ್ಯೆ 0818-2248873, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್, ಚಿತ್ರದುರ್ಗ ಮೊಬೈಲ್ ಸಂಖ್ಯೆ-9663100410, ವ್ಯವಸ್ಥಾಪಕರು, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಚಿತ್ರದುರ್ಗ ಮೊಬೈಲ್ ಸಂಖ್ಯೆ 9980803050 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಾಟೀಲ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version