ಮುಖ್ಯ ಸುದ್ದಿ
Devotees meating: ಸಿರಿಗೆರೆ, ಸಾಣೇಹಳ್ಳಿ ಮಠಗಳಿಗೆ ಉತ್ತರಾಧಿಕಾರಿ ನೇಮಕಕ್ಕೆ ಭಕ್ತರ ಪಟ್ಟು | ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆ
CHITRADURGA NEWS | 05 AUGUST 2024
ಚಿತ್ರದುರ್ಗ: ಸಾಧು ವೀರಶೈವ ಸಮಾಜದ ಹಲವು ಮುಖಂಡರು ದಾವಣಗೆರೆ ಹೊರವಲಯದ ಅಪೂರ್ವ ರೆಸಾರ್ಟ್ನಲ್ಲಿ ಭಾನುವಾರ ಪ್ರಮುಖ ಸಭೆಯೊಂದನ್ನು ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿರುವ ಸಿರಿಗೆರೆ, ಸಾಣೇಹಳ್ಳಿ ತರಳಬಾಳು ಬೃಹನ್ಮಠಗಳಿಗೆ ಉತ್ತರಾಧಿಕಾರಿ ನೇಮಕ ಮಾಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಉತ್ಸವ ಸಮಿತಿಗೆ ಬಿ.ನಯನ್ ಅಧ್ಯಕ್ಷ
ಅಖಿಲ ಭಾರತೀಯ ವೀರಶೈವ ಮಹಾಸಭಾ ಅಧ್ಯಕ್ಷರೂ ಆಗಿರುವ ಡಾ.ಶಾಮನೂರು ಶಿವಶಂಕರಪ್ಪ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, 10 ವರ್ಷಗಳ ಹಿಂದೆ ಸಿರಿಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. ಆಗ ಸಮಾಜದ ಕೆಲ ಮುಗ್ದ ಭಕ್ತರು ನೀವೇ ಮುಂದುವರೆಯಬೇಕು ಎಂದು ದುಃಖಿತರಾಗಿದ್ದರು.
ಈ ಘಟನೆಯ ಬಳಿಕ ಗುರುಗಳು ಮತ್ತೆ ಪೀಠತ್ಯಾಗದ ಬಗ್ಗೆ ಮಾತನಾಡಿಲ್ಲ. ಮಠದ ಭಕ್ತರು ನೀಡಿರುವ ಕೋಟ್ಯಾಂತರ ರೂ. ದೇಣಿಗೆ ಬ್ಯಾಂಕ್ ಖಾತೆಯಲ್ಲಿದೆ. ಇದರೊಟ್ಟಿಗೆ ಏಕವ್ಯಕ್ತಿ ಡೀಡ್ ಮಾಡಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇದನ್ನು ಬದಲಾಯಿಸಬೇಕು ಎಂದರು.
ಇದನ್ನೂ ಓದಿ: ಕೇರಳಿಗರ ಮನಗೆದ್ದ ದುರ್ಗದ ಮಗಳು | ದೊಡ್ಡೇರಿಯ ಮೇಘಶ್ರೀ ವಯನಾಡ್ ಡಿಸಿ
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ನಾವಿಲ್ಲಿ ಮಠ ಹಾಗೂ ಸಮಾಜದ ವಿರುದ್ಧವಾಗಿ ಸಭೆ ನಡೆಸುತ್ತಿಲ್ಲ. ಈಗ ಧ್ವನಿ ಎತ್ತದಿದ್ದರೆ ಮಠ ಎಲ್ಲಿ ಹಾಳಾಗುತ್ತದೊ ಎಂಬ ಆತಂಕದಿ0ದ ಸಭೆ ನಡೆಸುತ್ತಿದ್ದೇವೆ.
ಮಠಕ್ಕೆ ಈಗಲೇ ಉತ್ತರಾಧಿಕಾರಿ ನೇಮಿಸಿಕೊಂಡರೆ ಗುರುಗಳು ಉತ್ತಮ ಸಂಸ್ಕಾರ ನೀಡಿ ಮಠದ ಆಚಾರ, ವಿಚಾರಗಳನ್ನು ತಿಳಿಸಿಕೊಡಬಹುದು. ವಿಲ್ ಬರೆಯುವ ಮೂಲಕ ಉತ್ತರಾಧಿಕಾರಿ ನೇಮಕ ಮಾಡಲಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಟಿಸಿದರು.
ಇದನ್ನೂ ಓದಿ: VV Sagara: ವಿವಿ ಸಾಗರ | ಇಂದಿನ ಜಲಾಶಯದ ನೀರಿನ ಮಟ್ಟ ಎಷ್ಟಿದೆ
ಸಾಧು ವೀರಶೈವ ಸಮಾಜದ ಮುಖಂಡ ಅಣಬೇರು ರಾಜಣ್ಣ ಮಾತನಾಡಿ, ಸಾಧು ಸದ್ಧರ್ಮ ವೀರಶೈವ ಸಮಾಜಕ್ಕೆ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದು ಮಾಡದಿದ್ದರೆ, ಉತ್ತರಾಧಿಕಾರಿ ನೇಮಕ ಮಾಡಲು ಒಪ್ಪದಿದ್ದರೆ ಸಮಾಜದ 50 ಸಾವಿರ ಜನ ಮಠಕ್ಕೆ ಪದಾಯಾತ್ರೆ ನಡೆಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಶಿವಮೊಗ್ಗದ ರುದ್ರೇಗೌಡ, ಟಿ.ಗುರುಸಿದ್ಧನಗೌಡ, ವಡ್ನಾಳ್ ರಾಜಣ್ಣ, ಸುರೇಶ್ ಪಾಟೀಲ್, ಮುಖಂಡರಾದ ಬೆನಕಪ್ಪ, ಮಾಡಾಳು ಮಲ್ಲಿಕಾರ್ಜುನ, ಆನಗೋಡು ನಂಜುAಡಪ್ಪ, ಮಹೇಶ್ ಚಟ್ನಳ್ಳಿ, ಜೆ.ಆರ್.ಷಣ್ಮುಖಪ್ಪ, ಕೆ.ಬಿ.ಸಿದ್ದಪ್ಪ ಸೇರಿದಂತೆ ಸುಮಾರು 500 ಜನ ಭಾಗವಹಿಸಿದ್ದರು.
ಆಗಸ್ಟ್ 18ಕ್ಕೆ ಸಿರಿಗೆರೆ ಶ್ರೀಗಳ ಬಳಿ ನಿಯೋಗ:
ಮಠದ ಭಕ್ತರ ಸಭೆ ಹಾಗೂ ಅಲ್ಲಿ ಕೈಗೊಂಡಿರುವ ನಿರ್ಣಯಗಳ ಬಗ್ಗೆ ಚರ್ಚಿಸಲು ಆಗಸ್ಟ್ 18 ರಂದು ಬೆಂಗಳೂರಿನಲ್ಲಿ ಸಿರಿಗೆರೆ ತರಳಬಾಳು ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸುಮಾರು 25 ಜನರ ನಿಯೋಗದಲ್ಲಿ ತೆರಳಲು ನಿರ್ಣಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಅಭಿಮಾನಿಗೆ ಸಮಾಧಾನ ಮಾಡಿದ ಧ್ರುವ ಸರ್ಜಾ | ಸೆಲ್ಫಿ ಕ್ಲಿಕ್..ಕ್ಲಿಕ್
ಮಠವು ಸಮಾಜದ ಆಸ್ತಿ. ಈ ಹಿನ್ನೆಲೆಯಲ್ಲಿ ಏಕವ್ಯಕ್ತಿ ಡೀಡ್ ರದ್ದು ಮಾಡುವುದು, ಉತ್ತರಾಧಿಕಾರಿ ನೇಮಕ ಮಾಡುವುದು ಸೇರಿದಂತೆ ಹಲವು ವಿಚಾರಗಳನ್ನು ಶ್ರೀಗಳ ಮುಂದೆ ಇಟ್ಟು ಚರ್ಚಿಸಲಾಗುತ್ತದೆ. ಈ ಭೇಟಿಯ ನಂತರ ಮುಂದಿನ ನಿರ್ಧಾರ ಮಾಡೋಣ ಎಂದು ಸಭೆ ತೀರ್ಮಾನಿಸಿದೆ.