ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ 7.50 ಕೋಟಿ ಮೊತ್ತದ ಕಾಮಗಾರಿಗಳಿಗೆ ಭೂಮಿಪೂಜೆ | ಯಾವ ವಾರ್ಡ್‍ನಲ್ಲಿ ಯಾವ ಕಾಮಗಾರಿ ಇಲ್ಲಿದೆ ಮಾಹಿತಿ
CHITRADURGA NEWS | 04 DECEMBER 2024
ಚಿತ್ರದುರ್ಗ: ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಹಾಗೂ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಪೌರಾಯುಕ್ತರಾದ ಎಂ.ರೇಣುಕಾ ತಿಳಿಸಿದ್ದಾರೆ.
ಡಿ.05ರಂದು ಸಂಜೆ 4 ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಎಸ್‍ಎಫ್‍ಸಿ ಹಾಗೂ ನಗರಸಭೆ ನಿಧಿಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಶೇಂಗಾ, ತೊಗರಿಬೆಳೆ ರೇಟ್ ಎಷ್ಟಿದೆ?
ಇದೇ ವೇಳೆ ಹೊಸದಾಗಿ ಖರೀದಿಸಿರುವ ಕಸ ಸಂಗ್ರಹಣೆ ವಾಹನಗಳ ಉದ್ಘಾಟನೆ ಹಾಗೂ ಸರ್ಕಾರಿ ಬಾಲಕಿಯರ ಕಾಲೇಜ್ ಪಕ್ಕದ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸುವರು.
ಡಿ.06 ಮತ್ತು 07ರಂದು ಬೆಳಿಗ್ಗೆ 10.30 ರಿಂದ 5 ರವರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಜೂರಾದ ರೂ.7.50 ಕೋಟಿಗಳ ಅನುದಾನದಲ್ಲಿ ತೆಗೆದುಕೊಂಡಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವರು.
ಡಿ.06 ರಂದು ವಾರ್ಡ್ ನಂ.32ರ ಐಯುಡಿಪಿ ಲೇಔಟ್‍ನಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಆರ್.ಸಿ.ಸಿ.ಡೆಕ್ ಸ್ಲಾಬ್ ಹಾಗೂ ಸಿ.ಸಿ. ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.33ರ ಬುದ್ಧನಗರದ 4, 5ನೇ ಕ್ರಾಸ್‍ನಲ್ಲಿ ರೂ.30 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆ, ವಸತಿಗೃಹ ನಿರ್ಮಾಣಕ್ಕೆ ಶಾಸಕ ಚಂದ್ರಪ್ಪ ಅಡಿಗಲ್ಲು
ವಾರ್ಡ್ ನಂ.1ರ ಮೈಲಮ್ಮ ದೇವಸ್ಥಾನ ಸಮೀಪ ರೂ.30 ಲಕ್ಷದಲ್ಲಿ ಸಿ.ಸಿ.ಚರಂಡಿ, ಡೆಕ್ ಸ್ಲಾಬ್ ಹಾಗೂ ಒಳಚರಂಡಿ ಕಾಮಗಾರಿ, ವಾರ್ಡ್ ನಂ.4ರ ಫಿಲ್ಟರ್ ಹೌಸ್ ಹತ್ತಿರ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.2ರ ಅಕ್ಕಚ್ಚಮ್ಮ ಬಾವಿ ಅಂಜುಮಾನ್ ಮುಂಭಾಗದಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ, ಒಳಚರಂಡಿ, ಆರ್.ಸಿ.ಸಿ ಸ್ಲಾಬ್ ಹಾಗೂ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ.
ವಾರ್ಡ್‍ನಂ 3ರ ಕಾಮನಭಾವಿ ಬಡಾವಣೆಯಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಅಂಜುಮಾನ್ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ.6ರ ಅಲಿಮೊಹಲ್ಲಾದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಒಳಚರಂಡಿ, ಹ್ಯಾಂಡ್ ರೈಲ್ಲಿಂಗ್ ಹಾಕುವುದು ಹಾಗೂ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.7ರ ಬುರುಜನಹಟ್ಟಿಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಹಾಗೂ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ.
ಇದನ್ನೂ ಓದಿ: ಮತ್ತೆ ಹರಿದು ಬಂತು ವಿವಿ ಸಾಗರಕ್ಕೆ ನೀರು | ಜಲಾಶಯ ಭರ್ತಿಗೆ ಇನ್ನೆಷ್ಟು ಅಡಿ ಬಾಕಿ ಇದೆ ಗೊತ್ತಾ..?
ವಾರ್ಡ್ ನಂ.8ರ ಸಿಹಿನೀರು ಹೊಂಡದ ರಸ್ತೆಯ ಸಮೀಪದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.10ರ ಚೇಳುಗುಡ್ಡದಲ್ಲಿ ರೂ.30 ಲಕ್ಷದಲ್ಲಿ ಸಿ.ಸಿ.ರಸ್ತೆ ಕಾಮಗಾರಿ, ವಾರ್ಡ್ ನಂ.13 ನೆಹರು ನಗರದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಹಾಗೂ ಪೈಪ್‍ಲೈನ್ ಕಾಮಗಾರಿ, ವಾರ್ಡ್ ನಂ.15ರ ಸಂಪಿಗೆ ಸ್ಕೂಲ್ ಪಕ್ಕದ ಹಾಗೂ ಬರಗೇರಿ ಬೀದಿ ಗಲ್ಲಿಗಳಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವರು.
ಡಿ.07ರಂದು ವಾರ್ಡ್ ನಂ.28ರ ತುರುವನೂರು ರಸ್ತೆಯ ವಾಸವಿ ಲ್ಯಾಬ್ ಸಮೀಪದಿಂದ ರೂ.30 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ.26ರ ಬಡಮಕಾನ್ ಸಮೀಪದಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ.
ವಾರ್ಡ್ ನಂ.25ರ ಜೆ.ಜೆ.ಹಟ್ಟಿಯಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಸಿ.ಸಿರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.21ರ ಜೆ.ಸಿ.ಆರ್. ಬಡಾವಣೆ 5ನೇ ಕ್ರಾಸ್‍ನಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಸಿ.ಸಿ ಚರಂಡಿ ನಿರ್ಮಾಣ ಹಾಗೂ ಡೆಕ್ ಸ್ಲಾಬ್ ಕಾಮಗಾರಿ, ವಾರ್ಡ್ ನಂ.18ರ ಮೆದೇಹಳ್ಳಿ ರಸ್ತೆಯ ರಾ.ಹೆ-4ರ ಸರ್ವೀಸ್ ರಸ್ತೆಯ ಸಮೀಪದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಆರ್‍ಸಿಸಿ, ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ.
ಇದನ್ನೂ ಓದಿ: PDO ನೇಮಕಾತಿಗೆ ಪರೀಕ್ಷೆ | ಅಗತ್ಯ ಸಿದ್ಧತೆ ಪೊಲೀಸರ ನಿಯೋಜನೆಗೆ ಸೂಚನೆ
ವಾರ್ಡ್ ನಂ.17ರ ಜಯಲಕ್ಷ್ಮೀ ಬಡಾವಣೆ ಸಮೀಪದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. 2024-25ನೇ ಸಾಲಿನ ಎಸ್‍ಎಫ್‍ಸಿ ಮುಕ್ತ ಅನುದಾನದಲ್ಲಿ ಚಿತ್ರದುರ್ಗ ನಗರದ ಯೂನಿಯನ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ರೂ.30.95 ಲಕ್ಷ ವೆಚ್ಚದಲ್ಲಿ ದೊಡ್ಡ ಮಳೆ ನೀರು ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯಲಿದೆ.
ನಗರಸಭೆ ನಿಧಿಯ ಶೇ.24.10ರ ಅನುದಾನದಲ್ಲಿ ಚಿತ್ರದುರ್ಗ ನಗರದ ಯೂನಿಯನ್ ಪಂಪ್ ಹೌಸ್ ಆವರಣದಲ್ಲಿ ರೂ.22 ಲಕ್ಷ ವೆಚ್ಚದಲ್ಲಿ ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ನಗರಸಭ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.