Connect with us

    ಡೆಸ್ಟಿನಿ-2025 | 42ನೇ ವರ್ಷದ ಅದ್ದೂರಿ ಉತ್ಸವಕ್ಕೆ ಭರದ ಸಿದ್ಧತೆ | ಮ್ಯೂಸಿಕ್, ರ‍್ಯಾಪ್, ಡಿಜೆ ಅಬ್ಬರ

    ಮುಖ್ಯ ಸುದ್ದಿ

    ಡೆಸ್ಟಿನಿ-2025 | 42ನೇ ವರ್ಷದ ಅದ್ದೂರಿ ಉತ್ಸವಕ್ಕೆ ಭರದ ಸಿದ್ಧತೆ | ಮ್ಯೂಸಿಕ್, ರ‍್ಯಾಪ್, ಡಿಜೆ ಅಬ್ಬರ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 13 JANUARY 2025

    ಚಿತ್ರದುರ್ಗ: ನಗರದ ಪ್ರತಿಷ್ಠಿತ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಜ.15 ರಿಂದ 18 ರವರೆಗೆ ನಾಲ್ಕು ದಿನಗಳ ಕಾಲ 42ನೇ ವರ್ಷದ ಡೆಸ್ಟಿನಿ 2025 ಕಾರ್ಯಕ್ರಮ ರೂಪಿಸಿದ್ದು, ಅದ್ದೂರಿಯಾಗಿ ಆಚರಿಸಲು ಭರದ ಸಿದ್ದತೆ ಕೈಗೊಳ್ಳಲಾಗಿದೆ.

    ಇದನ್ನೂ ಓದಿ: ರೀಲ್ಸ್ ಮಾಡಿ ಬಹುಮಾನ ಗೆಲ್ಲಿ | ಪೊಲೀಸ್ ಇಲಾಖೆಯ ಪ್ರಕಟಣೆ

    ಶಾಲಾ ಶಿಕ್ಷಣದಿಂದ ಆರಂಭಗೊಂಡು ವೈದ್ಯಕೀಯ ಶಿಕ್ಷಣದವರೆಗೆ 10 ವಿದ್ಯಾಸಂಸ್ಥೆಗಳನ್ನು ಮುನ್ನಡೆಸುತ್ತಿರುವ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗದಲ್ಲಿ ಸಾವಿರಾರು ಬಡ ಮಕ್ಕಳ ಶಿಕ್ಷಣ ಒದಗಿಸುತ್ತಿದ್ದು, ಸಾಂಸ್ಕೃತಿಕ ಕ್ರೀಡೆ ಇನ್ನಿತರೆ ಮನೋರಂಜನಾ ಚಟುವಟಿಕೆಗಳನ್ನು ಪ್ರತಿ ವರ್ಷವು ಆಚರಿಸಿಕೊಂಡು ಬರುತ್ತಿದೆ.

    ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ರೀತಿಯ ಸುಪ್ತ ಪ್ರತಿಭೆ ಅಡಗಿರುವುದನ್ನು ಗುರುತಿಸಿ ಹೊರ ತೆಗೆಯುವುದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದ್ದು, ಅದಕ್ಕಾಗಿ ಡೆಸ್ಟಿನಿ- 2025 ಸಾಂಸ್ಕೃತಿಕ ಉತ್ಸವ ಆಯೋಜನೆಗೊಂಡಿದೆ.

    ಜ.15 ರಂದು ಸಂಜೆ 6 ಗಂಟೆಗೆ ಡೆಸ್ಟಿನಿ-2025 ಬೃಹತ್ ಸಾಂಸ್ಕೃತಿಕ ಉತ್ಸವವನ್ನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಲಿದ್ದು, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

    ಇದನ್ನೂ ಓದಿ: ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು | ಚಳ್ಳಕೆರೆ ತಾಲೂಕಿನಲ್ಲಿ ಘಟನೆ

    ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಡಿಡಿಪಿಐ ಎಂ.ಆರ್.ಮಂಜುನಾಥ್, ಖ್ಯಾತ ವಾಗ್ಮಿಗಳು, ಹಾಸ್ಯ ಚಟಾಕಿಯಿಂದ ಮನೆ ಮಾತಾಗಿರುವ ಪ್ರೊ.ಕೃಷ್ಣಗೌಡ ಹಾಗೂ ಸುಧಾ ಬರಗೂರು ಭಾಗವಹಿಸುವರು.

    ಸಂಸ್ಥೆಯ ಆಡಳಿತಾಧಿಕಾರಿಗಳಾದ ಹೆಚ್.ಚಂದ್ರಕಲಾ, ಅಧ್ಯಕ್ಷರಾದ ಎಂ.ಸಿ. ಯಶಸ್ವಿನಿ ಕಿರಣ್ ಹಾಗೂ ಸಿಇಓ ಎಂ.ಸಿ.ರಘುಚಂದನ್ ಭಾಗವಹಿಸಲಿದ್ದಾರೆ.

    ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಕಣ್ಮನ ಸೆಳೆಯುವ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಲೈಸಲಿವೆ. ನಂತರ ವಾದ್ಯ ಸಂಗೀತಗೋಷ್ಠಿ ನಡೆಯಲಿದೆ.

    ಜ.16 ರಂದು ಖ್ಯಾತ ಗಾಯಕ ವಿಜಯಪ್ರಕಾಶ್, ಗಾಯಕಿ ಅನುರಾಧ ಭಟ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ಆಯೋಜಿಸಲಾಗಿದೆ.

    ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

    ಜ.17 ರಂದು ರ್ಯಾಪ್ ಗಾಯಕ ರಾಹುಲ್ ಡಿಟ್ಟೋ, ಕೆ.ಜಿ.ಎಫ್ ಖ್ಯಾತಿಯ ಗಾಯಕ ವೆಂಕಿ ಅವರಿಂದ ಗಾನಸುಧೆ. ಆ.18 ರಂದು ಎಚ್.ಟು.ಓ ತಂಡದಿಂದ ಡಿ.ಜಿ. ಬ್ಯಾಂಡ್ ಮೂಲಕ ಡೆಸ್ಟಿನಿ-2025 ಸಮಾರೋಪಗೊಳ್ಳಲಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top