ಕ್ರೈಂ ಸುದ್ದಿ
ಉಪಸಭಾಪತಿ ರುದ್ರಪ್ಪ ಲಮಾಣಿಗೆ ಬೈಕ್ ಡಿಕ್ಕಿ | ಹಿರಿಯೂರು ಬಳಿ ಘಟನೆ
CHITRADURGA NEWS | 14 MARCH 2025
ಚಿತ್ರದುರ್ಗ: ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಹಿರಿಯೂರು ತಾಲೂಕು ಜವನಗೊಂಡನಹಳ್ಳಿ ಬಳಿ ಬೈಕ್ ಡಿಕ್ಕಿಯಾಗಿದ್ದು, ಗಾಯಗೊಂಡಿರುವ ಅವರನ್ನು ದಾವಣಗೆರೆ ಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಹಲಗೇರಿಗೆ ತೆರಳವು ಮಾರ್ಗ ಮಧ್ಯೆ ಹಿರಿಯೂರು ಬಳಿ ಜವನಗೊಂಡನಹಳ್ಳಿ ಬಳಿ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಕೆಳಗಿಳಿದಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿದೆ.
ಇದನ್ನೂ ಓದಿ: ನಾಯಕನಹಟ್ಟಿ ಜಾತ್ರೆ ಮುಕ್ತಿ ಭಾವುಟ ಹರಾಜಿಗೆ ಅಡ್ವಾನ್ಸ್ ಚೆಕ್ ಕಡ್ಡಾಯ
ಅಪಘಾತದಲ್ಲಿ ತಲೆ, ಗದ್ದ, ಹಣೆ, ಮೊಣಕಾಲು, ಇತರೆಡೆಗಳಲ್ಲಿ ಗಾಯವಾಗಿದ್ದು, ಹಿರಿಯೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ದಾವಣಗೆರೆಗೆ ಕರೆದೊಯ್ಯಲಾಗಿದೆ.
ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ದೃಢಪಡಿಸಿದ್ದು, ಗಾಯಗಳಿಗೆ ಚಿಕಿತ್ಸೆ ನೀಡಿ ವಾರ್ಡ್‍ಗೆ ಶಿಫ್ಟ್ ಮಾಡಿದ್ದಾರೆ.
ಇದನ್ನೂ ಓದಿ: ನಾಯಕನಹಟ್ಟಿ ಜಾತ್ರೆಗೆ ಏನೆಲ್ಲಾ ವ್ಯವಸ್ಥೆ ಆಗಿದೆ ನೋಡಿ..
ರುದ್ರಪ್ಪ ಲಮಾಣಿ ಅವರ ಕುಟುಂಬದವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ
ಈ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.