ಹೊಸದುರ್ಗ
ಸಾಣೇಹಳ್ಳಿ ಮಠಕ್ಕೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಭೇಟಿ
CHITRADURGA NEWS | 17 JUNE 2024
ಹೊಸದುರ್ಗ: ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಸೋಮವಾರ ಸಾಣೇಹಳ್ಳಿ ಮಠಕ್ಕೆ ಭೇಟಿ ನೀಡಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಆಶಿರ್ವಾದ ಪಡೆದರು.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ‘ಡಿ’ ಬಾಸ್ ಗ್ಯಾಂಗ್ !
ಈ ವೇಳೆ ಮಾತನಾಡಿದ ಶ್ರೀಗಳು, ಮೊದಲ ಬಾರಿಗೆ ಲೋಕಸಭಾ ಸದಸ್ಯೆಯಾಗಿರುವಂಥದ್ದು ತುಂಬ ಸಂತೋಷ. ಸೇವೆಯನ್ನು ಸಲ್ಲಿಸಲಿಕ್ಕೆ ಇದೊಂದು ಸದವಕಾಶ ಸಿಕ್ಕಂತಾಗಿದೆ. ತಮ್ಮ ಐದು ವರ್ಷದ ಸೇವಾವಧಿಯಲ್ಲಿ ಇಡೀ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವಂಥ ಸಂಕಲ್ಪ ನಿಮ್ಮದಾಗಲಿ.
ನೀವು ಬಹುಭಾಷೆ ಬಲ್ಲಂಥವರು ಹಾಗೂ ವಿದ್ಯಾವಂತರು. ಹೆಚ್ಚು ಅನುದಾನವನ್ನು ಸರಕಾರದಿಂದ ಪಡೆದು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಬೇಕು. ದಾವಣಗೆರೆ ಸ್ಮಾರ್ಟ್ ಸಿಟಿ ಹಾಗೂ ಕುಂದುವಾಡದ ಕೆರೆಯ ಅಭಿವೃದ್ಧಿ ನೆನಗುದಿಗೆ ಬಿದ್ದಿದೆ. ಅವೆರಡು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಯಾಗಿ ಕೆಲಸ ಮಾಡ್ತಿನಿ | ಸಂಸದ ಗೋವಿಂದ ಎಂ.ಕಾರಜೋಳ
ಮಹಿಳೆಯರು ಪುರುಷರಿಗಿಂತ ಮಹತ್ತರವಾದ ಸಾಧನೆಯನ್ನು ಮಾಡುವಂತಾಗಲಿ ಎಂದು ಪಂಡಿತಾರಾಧ್ಯ ಶ್ರೀಗಳು ಹಾರೈಸಿದರು.
ಶ್ರೀಗಳ ಹಾರೈಕೆಯಂತೆ ನಡೆದುಕೊಳ್ಳುತ್ತೇನೆ ಎಂದು ಶ್ರೀಗಳ ಆಶೀರ್ವಾದ ಪಡೆದರು.