Connect with us

ಸಾಣೇಹಳ್ಳಿ ಮಠದಲ್ಲಿ ಇಷ್ಟಲಿಂಗ ದೀಕ್ಷೆ | ಪಂಡಿತಾರಾಧ್ಯ ಶ್ರೀ ನೇತೃತ್ವ 

ಹೊಸದುರ್ಗ

ಸಾಣೇಹಳ್ಳಿ ಮಠದಲ್ಲಿ ಇಷ್ಟಲಿಂಗ ದೀಕ್ಷೆ | ಪಂಡಿತಾರಾಧ್ಯ ಶ್ರೀ ನೇತೃತ್ವ 

CHITRADURGA NEWS | 01 MAY 2025

ಹೊಸದುರ್ಗ: ಇಲ್ಲಿನ ಸಾಣೇಹಳ್ಳಿ ಶ್ರೀಮಠದಲ್ಲಿ ಆಯೋಜಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಧರ್ಮಾಸಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು, ದೇವರ ಬಗ್ಗೆ ಸರಿಯಾದ ಅರಿವು ನೀಡುವ ಕಾರ್ಯವೇ ದೀಕ್ಷೆ. ಎಲ್ಲರೂ ದೇವರು, ಧರ್ಮದ ಬಗ್ಗೆ ನಂಬಿಕೆ ಇರುವಂಥವರೇ. ಅವರನ್ನು ಆಸ್ತಿಕರು ಎನ್ನುವರು.

Also Read: ನಾಳೆ SSLC RESULT | ನಿಮ್ಮ ಫಲಿತಾಂಶ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ..

ದೇವರು ಧರ್ಮದ ಬಗ್ಗೆ ಹೊಸ ರೀತಿ ವ್ಯಾಖ್ಯಾನ ನೀಡಿದವರು 12ನೇ ಶತಮಾನದ ಶರಣರು. ದೇವನೊಬ್ಬ ನಾಮ ಹಲವು. ವಿಶ್ವ ಚೈತನ್ಯ ಒಂದೇ. ದೇವರಲ್ಲಿ ಹೆಣ್ಣು, ಗಂಡೆಂಬ ಭೇದವಿಲ್ಲ. ದೇವರು ನಿರಾಕಾರ, ವಿಶ್ವವ್ಯಾಪಿ. ಇಂಥ ದೇವರನ್ನು ಹೊರಗಿನ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಸ್ಥಾವರ ಗುಡಿಗಳು ದೇವರ ತಾಣಗಳಲ್ಲ. ಪ್ರತಿಯೊಬ್ಬರ ಅಂತರಂಗದಲ್ಲಿರುವ ಚೈತನ್ಯವನ್ನೇ ಗುರು ಇಷ್ಟಲಿಂಗದ ಮೂಲಕ ಅಂಗೈಗೆ ಕರುಣಿಸುವರು. ಆದರೆ ಶರಣರು ಇರುವುದನ್ನು ದೇವರು ಎನ್ನುವರು.

ಆದರೆ ಗುಡಿಯಲ್ಲಿರುವ ದೇವರಿಗೆ ಇವ್ಯಾವ ಗುಣಗಳು ಇಲ್ಲ. ಆದರೆ ನಮ್ಮೊಳಗೆ ಇರುವ ಚೈತನ್ಯವೇ ದೇವರೆಂದು ಭಾವಿಸಿ ಅಂಗೈಯಲ್ಲಿ ಇಷ್ಟಲಿಂಗವನ್ನು ಕರುಣಿಸಿ ಈ ದೇಹಕ್ಕೆ ಚೈತನ್ಯ ನೀಡಿದರ ಬಸವಣ್ಣನವರು. ಆದ್ದರಿಂದ ಬಸವಣ್ಣನವರು ಇಷ್ಟಲಿಂಗದ ಜನಕ. ಬಸವಣ್ಣ ಜಗದ ಗುರು. ವಿಶ್ವಗುರು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯುವರು. ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಬಹಳ ಮುಖ್ಯ. ಸಂಸ್ಕಾರದಿಂದ ಮಾತ್ರ ಏನಾದರೂ ಬದಲಾವಣೆ ಸಾಧ್ಯ. ಮಾನವನಿಗೆ ಸರಿಯಾದ ಸಂಸ್ಕಾರ ಸಿಕ್ಕರೆ ಮಹಾಮಾನವನಾಗುವನು.

ಬಸವಣ್ಣನವರು ಮನಸ್ಸು ಮಾಡಿದರೆ ವೈಭವದ ದೇವಸ್ಥಾನವನ್ನು ಕಟ್ಟಿಸಬಹುದಿತ್ತು. ಆದರೆ ಅದರಿಂದ ಜನರನ್ನು ದಿಕ್ಕು ತಪ್ಪಿಸಿ ದುರ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುವುದನ್ನು ಗಮನಿಸಿ ತನ್ನ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡರು. ಹೊರಗಿರುವ ದೇವರನ್ನು ನಮ್ಮೊಳಗಡೆ ಚೈತನ್ಯದ ಮೂಲಕ ತಂದುಕೊಂಡರು.

Also Read: ಅಕ್ಷಯ ತೃತೀಯವು ಈ ರಾಶಿಯವರಿಗೆ ಶುಭ ಯೋಗ ತರಲಿದೆಯಂತೆ

ಭಗವಂತನೇ ತಂದೆ, ತಾಯಿ, ಬಂಧು ಬಳಗವಾಗುವನು. ಅರಿವನ್ನು ಮೂಡಿಸುವವರೇ ನಿಜವಾದ ಗುರು. ಅಲ್ಲಮಪ್ರಭುಗಳು ಬಸವಣ್ಣನವರನ್ನು ಜಗದ ಗುರು ಎಂದು ಒಪ್ಪಿಕೊಂಡಿದ್ದರು. ಆದ್ದರಿಂದಲೇ ಅವರು ವಿಶ್ವದ ಗುರುವಾದರು. ದೇವರು ಬೇರೆ ಅಲ್ಲ, ನಾನು ಬೇರೆ ಅಲ್ಲ ಎನ್ನುವ ಏಕಭಾವ ಪ್ರತಿಯೊಬ್ಬರಲ್ಲು ಬರಬೇಕು.

ವಿಪತ್ತು ಬಂದಾಗ ಮಾತ್ರ ಭಗವಂತನನ್ನು ಪೂಜೆ ಮಾಡದೇ ನಿತ್ಯವೂ ಪೂಜೆ, ಸ್ಮರಣೆ ಮಾಡಿಕೊಳ್ಳಬೇಕು. ದೇವರನ್ನು ಮರೆತರೆ ಹೊಡೆದ ಮಡಿಕೆಯಂತಾಗುವುದು. ಯಾವಾಗಲೂ ದೇವಸ್ಮರಣೆ ಮಾಡಬೇಕೆಂದರು. ದೇವರನ್ನು ಗುಡಿಯಲ್ಲಿ ನದಿಯಲ್ಲಿ, ಮರದಲ್ಲಿ ಕಾಣುವುದಲ್ಲ. ನಮ್ಮೊಳಗಡೆಯೇ ದೇವರನ್ನು ಕಂಡುಕೊಳ್ಳಬೇಕು.

ಬತ್ತುವ ಜಲ ಒಣಗುವ ಮರದ ಪೂಜೆಯನ್ನು ಶರಣರು ವಿರೋಧಿಸಿದರು. ಮೌಢ್ಯಗಳನ್ನು ಪ್ರಶ್ನೆ ಮಾಡುವುದರ ಮೂಲಕ ನಿಜಾಚರಣೆಯ ಬಗ್ಗೆ ಅರಿವು ಮೂಡಿಸಿದರು.

ಲಿಂಗಾಯತ ಧರ್ಮದ ನೀತಿ ಸಿದ್ಧಾಂತಗಳು ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲಗಳು. ಲಿಂಗಾವಂತರು ಇದರ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಬೇಕು. ಗುರು ಅರಿವನ್ನು ಮೂಡಿಸಿ ಇಷ್ಟಲಿಂಗವನ್ನು ಕರುಣಿಸುವನು. ಜಂಗಮ ಭಕ್ತರಿಗೆ ಸರಿಯಾದ ಮಾರ್ಗವನ್ನು ತೋರಿಸುವನು. ಪ್ರಸಾದ ಎಂದರೆ ಸರಿಯಾದ ತಿಳಿವಳಿಕೆಯನ್ನು ಪಡಪಡೆದುಕೊಳ್ಳುವುದು.

Also Read: ಪಿತ್ತದೋಷವಿರುವವರ ಆಹಾರ ಹೀಗಿರಲಿ

ಮನಸ್ಸಿನ ಶುದ್ಧಿಯಿಂದ ಆಡುವ ಮಾತುಗಳೆಲ್ಲವೂ ಮಂತ್ರಗಳಾಗುವವು. ಮನುಷ್ಯನಿಗೆ ನೀತಿ ಸಂಹಿತೆ ಇಲ್ಲದೇ ಹೋದರೆ ದಾರಿತಪ್ಪುವನು. ಕಾಯ ಶುದ್ದಿ ಹಾಗೂ ಕಾಯಕ ಶ್ರದ್ಧೆಯನ್ನು ಬೆಳೆಸಿಕೊಂಡರೆ ಮನುಷ್ಯ ನೆಮ್ಮದಿಯ ಬದುಕನ್ನು ಸಾಗಿಸುವನು.

ಇಷ್ಟಲಿಂಗ ಧರಿಸಿದವನು ಕುಲ ಅಳಿಸಿ ಶಿವಕುಲನಾಗುವನು. ನಾವೆಲ್ಲರೂ ಶಿವನ ಮಕ್ಕಳೆಂದು ಭಾವಿಸಿ .ಜಾತ್ಯಾತೀತ ಮನೋಭಾವನೆ ಬೆಳೆಸಿಕೊಳ್ಳಬೇಕು. ಗಣಾಚಾರ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಬಾಗಿದ ತಲೆ ಮುಗಿದ ಕೈಯಾಗಿಸುವ ಭಾಗ ಬೆಳೆಸಿಕೊಳ್ಳಬೇಕು.

ದೀಕ್ಷೆಯನ್ನು ಪಡೆಯುವ ಉದ್ದೇಶ ಅಂತರಂಗ, ಬಹಿರಂಗ ಶುದ್ದಿಯನ್ನು ಮಾಡಿಕೊಳ್ಳುವುದು. ಮೌಢ್ಯವನ್ನು ದೂರ ಮಾಡಿಕೊಂಡು ಸತ್ ಚಿಂತನೆ ಮಾಡಿಕೊಳ್ಳುವುದು. ದುರ್ಬುದ್ಧಿಯನ್ನು ಬಿಟ್ಟು ಸುಬುದ್ಧಿಯನ್ನು ಬೆಳೆಸಿಕೊಳ್ಳುವುದು.

12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಸಂಸ್ಕಾರ ನೀಡುವ ಸಲುವಾಗಿ `ಅನುಭವ ಮಂಟಪ’ ಸ್ಥಾಪಿಸಿದರು. ಅನುಭವ ಮಂಟಪ ಕಟ್ಟಡವಲ್ಲ; ವಿಚಾರ ವಿನಿಮಯಗಳ ಮಥನ. ಆ ಸಂಸ್ಕಾರದ ಫಲವಾಗಿ ಸಾಮಾನ್ಯನೂ ಅಸಾಮಾನ್ಯ, ಶರಣ, ಶರಣೆ, ಅನುಭಾವಿಗಳಾದರು. ಅಂಥವರೆಲ್ಲರೂ ಸೇರಿ ಹೊಸ ಸಮಾಜವನ್ನು ಸೃಷ್ಟಿಸಲು ಸಾಧ್ಯವಾಯಿತು. ಹದಗೆಡುವ, ಅಧೋಗತಿಗೆ ಹೋಗುವ ಬದುಕನ್ನು ವಿಕಾಸಗೊಳಿಸುವ ನಿಟ್ಟಿನಲ್ಲಿ ಈರೀತಿಯ ಸಂಸ್ಕಾರದ ಅಗತ್ಯವಿದೆ. ಅರಿವಿನ ಮೂಲಕ ಅಜ್ಞಾನವನ್ನು ನಿವಾರಿಸಿಕೊಳ್ಳಬೇಕು. ದೈಹಿಕ ಸ್ವಚ್ಛತೆ ಮುಖ್ಯ.

Also Read: ಚರ್ಮದ ಅಲರ್ಜಿ ಮತ್ತು ಶಿಲೀಂಧ್ರಗಳ ಸೋಂಕಿಗೆ ರೋಸ್ ವಾಟರ್ ಒಳ್ಳೆಯದೇ? 

ಮೌಢ್ಯವನ್ನು ನಂಬುವ, ಭವಿಷ್ಯ ಹೇಳುವ, ಕೇಳುವುದರ ಮೂಲಕ ಬದುಕನ್ನು ಬದಲಾಯಿಸಲಾಗುವುದಿಲ್ಲ. ಇಷ್ಟಲಿಂಗ ದೀಕ್ಷೆ ಕಡೆದುಕೊಂಡವರು ಲಿಂಗಾವಂತರಾಗಿ ವೈಜ್ಞಾನಿಕವಾಗಿ ಆಲೋಚನೆ ಮಾಡುವ ಶಕ್ತಿಯನ್ನು ಬೆಳೆಸಿಕೊಂಡರೆ ಖಂಡಿತ ಬದುಕನ್ನು ಬದಲಾಯಿಸಿಕೊಳ್ಳಬಹುದು.

ಪಂಚಾಚಾರಗಳೆಂದರೆ ಲಿಂಗಾಚಾರ, ಶಿವಾಚಾರ, ಸದಾಚಾರ, ಗಣಾಚಾರ, ಭೃತ್ಯಾಚಾರ. ಇವು ಬದುಕಿನ ನೀತಿಸಂಹಿತೆಗಳು. ಇವುಗಳ ಅನುಸಾರವಾಗಿ ಬದುಕನ್ನು ಸಾಗಿಸಿದರೆ ಬದುಕು ಸಾರ್ಥಕವಾಗುವುದು ಎಂದರು.

ಸಿರಿಮಠ ದೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು.

Click to comment

Leave a Reply

Your email address will not be published. Required fields are marked *

More in ಹೊಸದುರ್ಗ

To Top
Exit mobile version