ಲೋಕಸಮರ 2024
ದುರ್ಗದ ಸೊಸೆ ದಾವಣಗೆರೆ ಬಿಜೆಪಿ ಅಭ್ಯರ್ಥಿ | ಶಕ್ತಿಕೇಂದ್ರ ಭೀಮಸಮುದ್ರಕ್ಕೆ ಮತ್ತೊಂದು ಹಿರಿಮೆ
CHITRADURGA NEWS | 14 MARCH 2024
ಚಿತ್ರದುರ್ಗ: ದಾವಣಗೆರೆ ಬಿಜೆಪಿ ಅಭ್ಯರ್ಥಿಯಾಗಿ ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರ ಹೆಸರನ್ನು ಬಿಜೆಪಿ ವರಿಷ್ಠರು ಘೋಷಣೆ ಮಾಡಿದ್ದಾರೆ.
ಇದು ಅಚ್ಚರಿಯಾದರೂ ನಿರೀಕ್ಷಿತ ಎನ್ನಲಾಗುತ್ತಿದ್ದು, ಕೆಲ ದಿನಗಳ ಹಿಂದೆ ಖುದ್ದು ಜಿ.ಎಂ.ಸಿದ್ದೇಶ್ವರ ಅವರೇ ದಾವಣಗೆರೆಯಲ್ಲಿ ನನ್ನನ್ನು ಬಿಟ್ಟರೆ ನಮ್ಮ ಕುಟುಂಬದಲ್ಲಿ ಯಾರಿಗಾದರೂ ಟಿಕೇಟ್ ಸಿಗುವ ವಿಶ್ವಾಸ ಇದೆ ಎಂದಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಎಂಪಿ ಟಿಕೇಟ್ ಸಸ್ಪೆನ್ಸ್
ಕಳೆದ ಎರಡೂವರೆ ದಶಕಗಳಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಭೀಮಸಮುದ್ರದ ಜಿ.ಎಂ. ಕುಟುಂಬ ಹಿಡಿತ ಸಾಧಿಸಿದೆ. ಸತತವಾಗಿ ಆಯ್ಕೆಯಾಗುವ ಮೂಲಕ ದಾವಣಗೆರೆ ಜನರ ವಿಶ್ವಾಸ ಗಳಿಸಿದ್ದಾರೆ.
ಈಗ ಕಾಂಗ್ರೆಸ್ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೇಟ್ ನೀಡುವ ಸುಳಿವು ಅರಿತ ಬಿಜೆಪಿ ಜಿ.ಎಂ.ಸಿದ್ದೇಶ್ವರ ಅವರ ಪತ್ನಿಗೆ ಟಿಕೇಟ್ ನೀಡುವ ಮೂಲಕ ಠಕ್ಕರ್ ನೀಡಿದೆ.
ಶಕ್ತಿ ಕೇಂದ್ರ ಭೀಮಸಮುದ್ರದ ಹಿರಿಮೆಗೆ ಮತ್ತೊಂದು ಗರಿ:
ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಗಾಯತ್ರಿ ಸಿದ್ದೇಶ್ವರ ಅವರು, ಭೀಮಸಮುದ್ರದ ಸೊಸೆ. ಗಾಯತ್ರಿ ಸಿದ್ದೇಶ್ವರ ಅವರು ಇದೇ ಮೊದಲ ಬಾರಿಗೆ ಸಕ್ರೀಯ ರಾಜಕಾರಣಕ್ಕೆ ಬರುತ್ತಿದ್ದಾರೆ.
ಇದನ್ನೂ ಓದಿ: ಫೇಕ್ ಗಿರಾಕಿಗಳಿಗೆ ದೇವರು ಒಳ್ಳೆಯದು ಮಾಡಲಿ
ಇಷ್ಟು ದಿನ ಪತಿಯ ಪರವಾಗಿ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದರು. ಉಳಿದಂತೆ ಅಷ್ಟಾಗಿ ರಾಜಕಾರಣದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಬಿಜೆಪಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಸಕ್ರೀಯ ರಾಜಕಾರಣಕ್ಕೆ ಕರೆ ತಂದಿದೆ.
ಭೀಮಸಮುದ್ರದಲ್ಲಿ ನಡೆಯುವ ಸ್ಥಳೀಯ ಕಾರ್ಯಕ್ರಮಗಳು, ಮಹಿಳಾ ಸಮಾಜದ ಚಟುವಟಿಕೆಗಳು, ಶಾಲಾ ಕಾಲೇಜುಗಳ ಸೇವಾ ಚಟುವಟಿಕೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಗಾಯತ್ರಿ ಸಿದ್ದೇಶ್ವರ ಅವರು ಸಕ್ರೀಯವಾಗಿ ಭಾಗವಹಿಸುತ್ತಿದ್ದರು.
ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಸರ್ಕಾರಿ ನೌಕರರಿಗೆ ಬಂಪರ್
ತಮ್ಮ ಕುಟುಂಬದ ಜಿ.ಎಂ. ಚಾರಿಟಿ ಫೌಂಡೇಶನ್ ಮೂಲಕ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭೀಮಸಮುದ್ರ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಸರಾಗಿದ್ದಾರೆ.
ಈಗ ದಾವಣಗೆರೆ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗುವ ಮೂಲಕ ಹೊಸ ಸಾಹಸಕ್ಕೆ ಅಣಿಯಾಗಿದ್ದು, ಗೆದ್ದರೆ ಹೊಸ ದಾಖಲೆಯೇ ನಿರ್ಮಾಣ ಆಗಲಿದೆ.
ಇದನ್ನೂ ಓದಿ: ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ
ಗಾಯತ್ರಿ ಸಿದ್ದೇಶ್ವರ ಅವರ ಪುತ್ರ ಜಿ.ಎಸ್.ಅನಿತ್‍ಕುಮಾರ್ ಲೋಕಸಭೆಗೆ ಆಕಾಂಕ್ಷಿಯಾಗಿದ್ದರೂ ಕೂಡಾ ತಾಯಿಗೆ ಟಿಕೇಟ್ ನೀಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಈಗ ತಾಯಿಯ ಜೊತೆಗೆ ಅನಿತ್ ಹಾಗೂ ಅವರ ಪತಿ ಸಿದ್ದೇಶ್ವರ ಚುನಾವಣೆ ಎದುರಿಸಲಿದ್ದಾರೆ.
ಬಿ.ಟಿ.ರುದ್ರಮ್ಮ ಎಂಎಲ್ಸಿ ಆಗಿದ್ದರು:
ಭೀಮಸಮುದ್ರಕ್ಕೆ ಮಹಿಳಾ ರಾಜಕಾರಣ ಹೊಸದಲ್ಲ. ಈ ಹಿಂದೆ ಇಲ್ಲಿನ ಬಿಟಿವಿ ಕುಟುಂಬದ ಬಿ.ಟಿ.ರುದ್ರಮ್ಮ ವಿಧಾನ ಪರಿಷತ್ ಸದಸ್ಯರಾಗುವ ಮೂಲಕ ಗ್ರಾಮೀಣ ಭಾಗದ ಮಹಿಳೆಯೊಬ್ಬರು ಮೂರು ದಶಕಗಳ ಹಿಂದೆಯೇ ವಿಧಾನ ಸೌಧದ ಮೆಟ್ಟಿಲು ಹತ್ತಿದ್ದ ದಾಖಲೆಯಿದೆ.
ಇದನ್ನೂ ಓದಿ: ಅಪ್ಪಾಜಿ ನಡೆದಾಡಿದ ಚಿತ್ರದುರ್ಗ ನನ್ನೂರು | ಹ್ಯಾಟ್ರಿಕ್ ಹೀರೋ
ಬಿ.ಟಿ.ವೀರಪ್ಪ ಅವರು 1986 ರಲ್ಲಿ ಜನತಾ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆನಂತರ 1988 ರಲ್ಲಿ ಬಿ.ಟಿ.ರುದ್ರಮ್ಮ ಇದೇ ಪಕ್ಷದಿಂದ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ರಾಜಕಾರಣದಲ್ಲಿ ಹೆಸರು ಮಾಡಿದ್ದರು. ಆನಂತರ ಅವರ ಪುತ್ರ ಬಿ.ಟಿ.ಚನ್ನಬಸಪ್ಪ ಕೂಡಾ ಎಂಎಲ್ಸಿ ಆಗಿದ್ದರು.
ಈಗ ಇದೇ ಭೀಮಸಮುದ್ರದ ಜಿ.ಎಂ. ಕುಟುಂಬದಲ್ಲಿ ತಂದೆ ಮಗ ಆನಂತರ ಪತ್ನಿ ರಾಜಕಾರಣದಲ್ಲಿ ಸಕ್ರೀಯವಾಗುತ್ತಿರುವ ಸಂದರ್ಭ ಸೃಷ್ಟಿಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸೇರ್ತಿರಾ ಅಂದಾಕ್ಷಣ ಕೆಂಡಾಮಂಡಲರಾದ ಸಚಿವ ಎ.ನಾರಾಯಣಸ್ವಾಮಿ
ಈಗ ಅಭ್ಯರ್ಥಿಯಾಗಿರುವ ಜಿ.ಮಲ್ಲಿಕಾರ್ಜುನಪ್ಪ ಕೂಡಾ ಎರಡು ಅವಧಿಗೆ ದಾವಣಗೆರೆ ಸಂಸದರಾಗಿದ್ದರು. ಆನಂತರ ಪತಿ ಜಿ.ಎಂ. ಸಿದ್ದೇಶ್ವರ ಸತತ ನಾಲ್ಕು ಅವಧಿಗೆ ಸಂಸದರಾಗಿದ್ದರು. ಈಗ ಇದೇ ಕುಟುಂಬದ ಗಾಯತ್ರಿ ಸಿದ್ದೇಶ್ವರ 8ನೇ ಅವಧಿಗೆ ದಾವಣಗೆರೆ ರಾಜಕಾರಣದ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಇದನ್ನೂ ಓದಿ: 49 ಸಾವಿರದ ಗಡಿ ತಲುಪಿದ ಅಡಿಕೆ ಧಾರಣೆ