ಮುಖ್ಯ ಸುದ್ದಿ
Sports: ದಾವಣಗೆರೆ ವಿವಿ ಅಥ್ಲೆಟಿಕ್ಸ್ | ಹರಿಹರ ಕಾಲೇಜು ಚಾಂಪಿಯನ್
CHITRADURGA NEWS | 05 DECEMBER 2024
ಚಿತ್ರದುರ್ಗ: ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜುಗಳ ಪುರುಷ ಮತ್ತು ಮಹಿಳೆಯರ 13 ನೇ ಅಥ್ಲೆಟಿಕ್ಸ್ ಕ್ರೀಡಾಕೂಟ(sports) ಮತ್ತು ತಂಡದ ಆಯ್ಕೆಯಲ್ಲಿ ಪುರುಷರ ವಿಭಾಗದಲ್ಲಿ ಹರಿಹರ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್ ಯಾಗಿದೆ.
ಕ್ಲಿಕ್ ಮಾಡಿ ಓದಿ: ಟಯರ್ ಬ್ಲಾಸ್ಟ್ | ಪಲ್ಟಿಯಾದ ಕಾರು | ಓರ್ವ ಸ್ಥಳದಲ್ಲೇ ಸಾವು
ಮಹಿಳೆಯರ ವಿಭಾಗದಲ್ಲಿ ದಾವಣಗೆರೆ ಬಾಪೂಜಿ ದೈಹಿಕ ಶಿಕ್ಷಣ ಕಾಲೇಜು ಚಾಂಪಿಯನ್. ದಾವಣಗೆರೆ ಬಾಪೂಜಿ ದೈಹಿಕ ಶಿಕ್ಷಣ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು.
ಪುರುಷರ ವಿಭಾಗದಲ್ಲಿ ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗದ ಲೋಹಿಯಾ ಬೆಸ್ಟ್ ಅಥ್ಲೆಟಿಕ್ಸ್ ಆಗಿ ಹೊರಹೊಮ್ಮಿದರು.
ಕ್ಲಿಕ್ ಮಾಡಿ ಓದಿ: ಬೆಳ್ಳಂ ಬೆಳಗ್ಗೆ ಸರಣಿ ಅಪಘಾತ | 4 ಎತ್ತುಗಳು, ಓರ್ವ ವ್ಯಕ್ತಿ ಸಾವು
ಮಹಿಳಾ ವಿಭಾಗದಲ್ಲಿ ಬಾಪೂಜಿ ದೈಹಿಕ ಶಿಕ್ಷಣ ಕಾಲೇಜು ದಾವಣಗೆರೆಯ ಕವಿತಾ ಉತ್ತಮ ಅಥ್ಲೆಟಿಕ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.