ಲೋಕಸಮರ 2024
ಮಗಳು ಮಮ್ಮಿ ನಿಮ್ಮ ಹೆಸರು ಟಿವಿಯಲ್ಲಿ ಬರ್ತಿದೆ ಅಂದಾಗ ಅಚ್ಚರಿಯಾಗಿತ್ತು | ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
CHITRADURGA NEWS | 20 MARCH 2024
ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ದಾವಣಗೆರೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಹೆಸರು ಘೋಷಣೆಯಾಗಿದೆ.
ಸಾಕಷ್ಟು ಸಲ ಅಭ್ಯರ್ಥಿಗಳ ಜೊತೆಗೆ ಚರ್ಚಿಸಿ ಟಿಕೇಟ್ ಘೋಷಣೆ ಮಾಡಲಾಗುತ್ತದೆ. ಆಗ ಅಭ್ಯರ್ಥಿಗಳ ಹೆಸರು ಟಿವಿಯಲ್ಲಿ ಅಥವಾ ಪಟ್ಟಿಯಲ್ಲಿ ಬಂದಾಗ ಅಂತಹ ಅಚ್ಚರಿಯೇನು ಆಗುವುದಿಲ್ಲ.
ಇದನ್ನೂ ಓದಿ: ಸಬ್ ಇನ್‍ಸ್‍ಪೆಕ್ಟರ್ ಹುದ್ದೆಗೆ ಅರ್ಜಿ
ದಾವಣಗೆರೆ ಬಿಜೆಪಿ ಟಿಕೇಟ್ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಯಾರಿಗೆ ಟಿಕೇಟ್ ಘೋಷಣೆ ಆಗಲಿದೆ ಎನ್ನುವ ಅಚ್ಚರಿಯಿತ್ತು. ಈ ಕಾರಣಕ್ಕೆ ಹಾಲಿ ಸಂಸದರ ಪತ್ನಿ, ಭೀಮಸಮುದ್ರದ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೇಟ್ ನೀಡಿದಾಗ ಅಚ್ಚರಿಯಾಗಿದೆ.
ಮಂಗಳವಾರ ಗಾಯತ್ರಿ ಸಿದ್ದೇಶ್ವರ, ಪುತ್ರ ಜಿ.ಎಸ್.ಅನಿತ್‍ಕುಮಾರ್ ಹಾಗೂ ಅವರ ಪುತ್ರಿ ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.
ಇದನ್ನೂ ಓದಿ: ಬೇಲಿಯ ಬೆಂಕಿಗೆ ತಾಯಿ ಮಕ್ಕಳ ಬಲಿ
ಈ ವೇಳೆ ಟಿಕೇಟ್ ಸಿಕ್ಕಿದ ವಿಚಾರ ಸೇರಿದಂತೆ ಅನೇಕ ವಿಚಾರಗಳನ್ನು ಗುರುಗಳ ಜೊತೆಗೆ ಹಂಚಿಕೊಂಡರು.
ಈ ವೇಳೆ ತಮಗೆ ಟಿಕೇಟ್ ನೀಡುತ್ತಾರೆ ಎನ್ನುವ ಯಾವ ಅಂದಾಜು ಇರಲಿಲ್ಲ. ಆದರೆ, ದಾವಣಗೆರೆಯಿಂದ ಯಾರು ಫೈನಲ್ ಆಗಬಹುದು ಎನ್ನುವ ಕುತೂಹಲವಿತ್ತು.
ನಾನು ಮಗಳು ಟಿವಿ ನೋಡುತ್ತಿದ್ದೆವು. ನನ್ನ ಗಮನ ಬೇರೆಲ್ಲೋ ಇತ್ತು. ಇದ್ದಕ್ಕಿದ್ದಂತೆ ಮಗಳು, ‘ಮಮ್ಮಿ ನಿಮ್ಮ ಹೆಸರು ಟಿವಿಯಲ್ಲಿ ಬರ್ತಿದೆ’ ಅಂದಾಗ ಅಚ್ಚರಿಯಾಗಿತ್ತು ಎಂದರು.
ಇದನ್ನೂ ಓದಿ: ದುರ್ಗದ ಸೊಸೆ ದಾವಣಗೆರೆ ಬಿಜೆಪಿ ಅಭ್ಯರ್ಥಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಈ ಆಯ್ಕೆ ಮಾಡಿದ್ದಾರೆ ಎನ್ನುವುದು ಗೊತ್ತಾಯಿತು. ನಾನು ಮೋದಿ ಅವರ ಬಹಳ ದೊಡ್ಡ ಅಭಿಮಾನಿ. ಅವರು ಎಲ್ಲವನ್ನೂ ಅನುಸರಿಸುತ್ತೇನೆ. ಪ್ರತಿನಿತ್ಯ ಯೋಗಾಭ್ಯಾಸ ಇದೆ. ಊರಿನಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ವಿವರಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪುತ್ರ ಜಿ.ಎಸ್.ಅನಿತ್‍ಕುಮಾರ್, ನಮ್ಮ ಮನೆಯಲ್ಲಿ ಹೈನುಗಾರಿಕೆಯ ಸಂಪೂರ್ಣ ನಿರ್ವಹಣೆ ತಾಯಿಯವರದ್ದೇ. ಹಸುಗಳ ಹಾಲು ಕರೆಯಿಸುವುದು, ಸ್ವಚ್ಛತೆ, ಹಾಲಿನ ಮಾರಾಟ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ತೋಟದ ಜವಾಬ್ದಾರಿಯೂ ಅವರಿಗಿದೆ ಎಂದರು.
ಇದನ್ನೂ ಓದಿ: ಚಿತ್ರದುರ್ಗದ ಮತದಾರರೆ ಇಲ್ಲಿದೆ ನೋಡಿ ನಿಮ್ಮ ಮತದಾನದ ದಿನ
ಇದಕ್ಕೆ ಪ್ರತಿಕ್ರಿಯಿಸಿದ ಗಾಯತ್ರಿ ಸಿದ್ದೇಶ್ವರ, ನಾನು ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದವಳು. ಹಳ್ಳಿಯ ವಾತಾವರಣಕ್ಕೂ ಚೆನ್ನಾಗಿ ಹೊಂದಿಕೊಂಡಿದ್ದೇನೆ. ಊರಿನಲ್ಲಿ ಚಟುವಟಿಕೆಯಿಂದ ಇರುತ್ತೇನೆ. ಕೃಷಿಯೂ ನನಗೆ ಇಷ್ಟ ಹಾಗಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ನಮ್ಮ ಪತಿ ಜಿ.ಎಂ.ಸಿದ್ದೇಶ್ವರ ಅವರು, ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ 1800 ಹಳ್ಳಿಗಳಲ್ಲೂ ಪ್ರವಾಸ ಮಾಡಿದ್ದಾರೆ. ಪ್ರತಿ ಹಳ್ಳಿಯಲ್ಲೂ ಎಂಟತ್ತು ಜನರ ಹೆಸರಿಟ್ಟು ಕರೆಯುವಷ್ಟು ಪ್ರವಾಸ ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ಕಾಂಗ್ರೆಸ್ ಸೇರ್ತಿರಾ ಅಂದಾಕ್ಷಣ ಕೆಂಡಾಮಂಡಲರಾದ ಎ.ನಾರಾಯಣಸ್ವಾಮಿ
ಇದಕ್ಕೆ ದನಿಗೂಡಿಸಿದ ಅವರ ಪುತ್ರಿ, ನಮ್ಮ ತಂದೆ ಸಂಸತ್ ಅಧಿವೇಶನ ಮುಗಿದ ತಕ್ಷಣ ನೇರವಾಗಿ ಕ್ಷೇತ್ರಕ್ಕೆ ಬರುತ್ತಿದ್ದರು. ನಮ್ಮ ತಾಯಿ ಆಗಾಗ ನಮ್ಮ ಜೊತೆಗೆ ಬೇರೆ ಬೇರೆ ದೇಶಗಳ ಪ್ರವಾಸ ಮಾಡುತ್ತಿದ್ದರು. ತೀರ್ಥ ಕ್ಷೇತ್ರಗಳಿಗೆ ಓಡಾಡುತ್ತಿದ್ದರು. ಆದರೆ, ತಂದೆ ಎಂದೂ ಪ್ರವಾಸಕ್ಕೆ ಬರುತ್ತಿರಲಿಲ್ಲ. ಬಿಡುವು ಇದ್ದಾಗೆಲ್ಲಾ ಕ್ಷೇತ್ರಕ್ಕೆ ಹೋಗುತ್ತಿದ್ದರು. ಶಾಸಕರಂತೆ ಓಡಾಡುತ್ತಿದ್ದರು ಎಂದು ಗುಣಗಾನ ಮಾಡಿದರು.
ನಮ್ಮಮ್ಮ ಪಕ್ಕಾ ಮೋದಿ ಫಾಲೋವರ್:
ಪುತ್ರ ಜಿ.ಎಸ್.ಅನಿತ್‍ಕುಮಾರ್ ಮಾತನಾಡುತ್ತಾ, ಈ ಬಾರಿ ದಾವಣಗೆರೆ ಟಿಕೇಟ್ ನಮ್ಮ ಚಿಕ್ಕಪ್ಪ ಲಿಂಗರಾಜು ಅವರಿಗೆ ಸಿಗಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ, ಪಕ್ಷದ ವರಿಷ್ಠರು ಯಾವುದೋ ಲೆಕ್ಕಾಚಾರದಲ್ಲಿ ತಾಯಿಗೆ ಕೊಟ್ಟಿದ್ದಾರೆ. ನಮ್ಮಮ್ಮ ಪಕ್ಕಾ ಮೋದಿ ಅವರ ಫಾಲೋವರ್ ಎಂದು ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ ಎಂಪಿ ಟಿಕೇಟ್ ಸಸ್ಪೆನ್ಸ್
ಈ ವೇಳೆ ಗಾಯತ್ರಿ ಸಿದ್ದೇಶ್ವರ ಅವರು ಮಾತನಾಡಿ, ಶಿವಮೊಗ್ಗದಲ್ಲಿ ನಡೆದ ಸಮಾವೇಶದಲ್ಲಿ ನರೇಂದ್ರ ಮೋದಿ ಅವರ ಜೊತೆಗೆ ತೆರೆದ ಜೀಪಿನಲ್ಲಿ ಜನರ ನಡುವೆ ಮೆರವಣಿಗೆ ಹೋಗಿದ್ದು ಕನಸೋ, ನನಸೋ ಎಂದು ಗೊತ್ತಾಗುತ್ತಿಲ್ಲ. ಇಷ್ಟು ವರ್ಷ ರಾಜಕಾರಣದಲ್ಲಿದ್ದರೂ ನಮ್ಮ ಯಜಮಾನರು ಜಿ.ಎಂ.ಸಿದ್ದೇಶ್ವರ ಅವರಿಗೆ ಇಂತಹ ಅವಕಾಶ ಸಿಕ್ಕಿರಲಿಲ್ಲ ಎಂದು ಸಂತಸ ಹಂಚಿಕೊಂಡರು.
ನರೇಂದ್ರ ಮೋದಿ ಅವರನ್ನು ಕಳೆದುಕೊಳ್ಳಬಾರದು:
1999ರಲ್ಲಿ ಪ್ರಧಾನಿ ಆಗಿದ್ದ ಅಟಲ್‍ಬಿಹಾರಿ ವಾಜಪೇಯಿ ಅವರ ಸರ್ಕಾರ ಬಿದ್ದು ಹೋದಾಗ ಸಾಕಷ್ಟು ನೋವಾಗಿತ್ತು. ಆ ಚುನಾವಣೆಯಲ್ಲಿ ದಾವಣಗೆರೆಯಿಂದ ಸ್ಪರ್ಧೆ ಮಾಡಿದ್ದ ನಮ್ಮ ಮಾವ ಮಲ್ಲಿಕಾರ್ಜುನಪ್ಪ ಅವರು ಸೋತಿದ್ದರು.
ಇದನ್ನೂ ಓದಿ: ಗಾಂಧಿ ಜಯಂತಿಗೆ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ನೀರು
ಈಗ ನರೇಂದ್ರ ಮೋದಿ ಅವರು ಅಂತಹ ಜಾಗದಲ್ಲಿದ್ದಾರೆ. ಅವರನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ಗಾಯತ್ರಿ ಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.