ಮುಖ್ಯ ಸುದ್ದಿ
ದತ್ತ ಪೀಠಕ್ಕೆ ದತ್ತಮಾಲಾಧಾರಿಗಳು; ವಿವಿಧೆಡೆ ಅಭಿಯಾನ

ಚಿತ್ರದುರ್ಗ ನ್ಯೂಸ್.ಕಾಂ
ಜಿಲ್ಲಾದ್ಯಂತ ದತ್ತ ಜಯಂತಿ ಪ್ರಯುಕ್ತ ದತ್ತಮಾಲಾ ಅಭಿಯಾನ ಪ್ರಾರಂಭವಾಗಿದೆ. ಹಿರಿಯೂರು ನಗರದ ಲಕ್ಷ್ಮಮ್ಮ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ದತ್ತಮಾಲಾ ಧರಿಸಿದರು.
ಡಿ.26 ರಂದು ನಡೆಯುವ ದತ್ತ ಜಯಂತಿಯಲ್ಲಿ ದತ್ತ ಪಾದುಕೆ ದರ್ಶನಕ್ಕೆ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ದತ್ತಮಾಲಾಧಾರಿಗಳು ಹೊರಡಲಿದ್ದಾರೆ. ಪೂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶ್ರೀನಿವಾಸ್ ಮಸ್ಕಲ್, ಬಜರಂಗದಳದ ಲಕ್ಷ್ಮೀಕುಮಾರ್, ಕೆಂಪೇಗೌಡ, ಯಲ್ಲದಕೆರೆ ಶ್ರೀನಿವಾಸ್, ಜೈರಾಂ, ರವಿಕುಮಾರ್, ಮಂಜುನಾಥ್ ಇದ್ದರು.
ಹೊಸದುರ್ಗ ಪಟ್ಟಣದ ಸದ್ಗುರು ಸೇವಾ ಟ್ರಸ್ಟ್‌ನಿಂದ ಡಿ.25ರಿಂದ 27ರವರೆಗೆ 21ನೇ ವರ್ಷದ ದತ್ತ ಜಯಂತಿ ಕಾರ್ಯಕ್ರಮ ಶ್ರೀಕಾಂತಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿದೆ.
25 ರಂದು ಸಂಕೀರ್ತನೆ, ಧಾರ್ಮಿಕ ಸಭೆ ನಡೆಯಲಿದೆ. ಸದ್ಗುರು ಸೇವಾಶ್ರಮದ ಸಂಸ್ಥಾಪಕ ಶ್ರೀಕಾಂತಾನಂದ ಸ್ವಾಮೀಜಿ ಹಾಗೂ ಬೆಂಗಳೂರಿನ ಆರ್.ಎಸ್.ವಿ.ಕೆ ಸತೀಶ್ ಗುರೂಜಿ ಸಾನ್ನಿಧ್ಯ ವಹಿಸುವರು. 26ರಂದು ಸುಭೋದಾನಂದ ಸ್ವಾಮೀಜಿ, ಪ್ರಸಾದ್ ಗುರೂಜಿ ಸಾನ್ನಿಧ್ಯ ವಹಿಸುವರು. ಡಿ. 27ರಂದು ಶೋಭಾಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ.
