Connect with us

    ಅಡುಗೆ ಮಾಡಿ ಬಹುಮಾನ ಗೆಲ್ಲಿ | ರುಚಿಯಾದ, ಘಮ್ಮೆನ್ನುವ ಪರಿಮಳದ ಅಡುಗೆ ಮಾಡಲು ಬರುತ್ತಾ | ಬನ್ನಿ ಹಾಗಾದ್ರೆ ಅಡುಗೆ ಮಾಡಿ 5 ಸಾವಿರ ಬಹುಮಾನ ಗೆಲ್ಲಿ

    ಮುಖ್ಯ ಸುದ್ದಿ

    ಅಡುಗೆ ಮಾಡಿ ಬಹುಮಾನ ಗೆಲ್ಲಿ | ರುಚಿಯಾದ, ಘಮ್ಮೆನ್ನುವ ಪರಿಮಳದ ಅಡುಗೆ ಮಾಡಲು ಬರುತ್ತಾ | ಬನ್ನಿ ಹಾಗಾದ್ರೆ ಅಡುಗೆ ಮಾಡಿ 5 ಸಾವಿರ ಬಹುಮಾನ ಗೆಲ್ಲಿ

    https://chat.whatsapp.com/Jhg5KALiCFpDwME3sTUl7x

    ಚಿತ್ರದುರ್ಗ ನ್ಯೂಸ್.ಕಾಂ: ಈ ಜನುಮವೇ ಆಹಾ ದೊರೆತಿದೆ ರುಚಿ ಸವಿಯಲು, ಈ ಜಗವಿದೆ, ನವರಸಗಳ ಉಣಬಡಿಸಲು, ಬಿಸಿ ಬಿಸಿಯಿದೆ ನಳಪಾಕ ದಿನದಿನ ನೂತನ, ಈ ಬಿಸಿಯೂ ಹಾರುವ ಮುನ್ನವೇ..

    ಹೀಗೆ ಸವಿಯಾದ ಅಡುಗೆ ಮಾಡುವ ಕಲೆ ನಿಮಗೆ ಕರಗತವಾಗಿದ್ದರೆ, ಕೃಷಿ ಇಲಾಖೆಯಿಂದ ಆಯೋಜಿಸಿರುವ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

    ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಆದರೆ, ನೇರವಾಗಿ ರಾಜ್ಯಮಟ್ಟಕ್ಕೆ ಹೋಗಲು ಅವಕಾಶ ಇಲ್ಲ. ಜಿಲ್ಲಾ ಮಟ್ಟದಲ್ಲಿ ಗೆದ್ದವರು ರಾಜ್ಯಮಟ್ಟದಲ್ಲೂ ತಮ್ಮ ಕೈ ರುಚಿ ತೋರಿಸಿ ಬಹುಮಾನ ಗೆಲ್ಲಬಹುದು.

    ಈ ಹಿನ್ನೆಲೆಯಲ್ಲಿ ಡಿಸೆಂಬರ್ 13 ರಂದು ಬೆಳಗ್ಗೆ 11 ಗಂಟೆಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಪೂರ್ವಭಾವಿಯಾಗಿ ಜಿಲ್ಲಮಟ್ಟದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

    ಈಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸ್ಪರ್ಧೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸುವಂತಿಲ್ಲ.

    ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ಏರ್‍ಪೋರ್ಟ್(AIRPORT) ನಿರ್ಮಾಣಕ್ಕೆ ಚಿಂತನೆ

    ಉಳಿದಂತೆ ಜಿಲ್ಲೆಯ ಮಹಿಳೆ-ಪುರುಷ ಸೇರಿದಂತೆ ಯಾವುದೇ ನಾಗರೀಕರು ಪಾಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

    ಭಾಗವಹಿಸುವವರು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ, ಬೇಕಾಗುವ ಸಾಮಾಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಡಿಸೆಂಬರ್ 12ರೊಳಗೆ ಇ-ಮೇಲ್ ವಿಳಾಸ jdagricta@yahoo.co.in/ jdagrictd@gmail.com ಅಥವಾ ಖುದ್ದಾಗಿ ಪೋಸ್ಟ್ ಮುಖಾಂತರ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಎಪಿಎಂಸಿ ರಸ್ತೆ, ಚಿತ್ರದುರ್ಗ-577501 ವಿಳಾಸಕ್ಕೆ ಕಳುಹಿಸಲು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸೂಚನೆಗಳು:

    • ಪ್ರತಿ ಸ್ಪರ್ಧಿಗೆ ಸಿಹಿ ಅಥವಾ ಖಾರಾ ಒಂದೇ ತಿನಿಸು (ಸಸ್ಯಹಾರಿ ತಿನಿಸುಗಳು ಮಾತ್ರ) ತಯಾರಿಸುವ ಅವಕಾಶವಿರುತ್ತದೆ.
    • ತಮ್ಮ ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು, ಮನೆಯಲ್ಲಿಯೇ ತಯಾರಿಸಿ, ಡಿಸೆಂಬರ್ 13ರಂದು ಬೆಳಿಗ್ಗೆ 11ಕ್ಕೆ ಸರಿಯಾಗಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಿವುದು.
    • ತಯಾರಿಸಿದ ತಿನಿಸುಗಳ ಪ್ರದರ್ಶನ ಬಳಸಿದ ಸಾಮಗ್ರಿಗಳು, ತೋರಿಕೆ, ರುಚಿ, ಸುವಾಸನೆ, ಪೌಷ್ಠಿಕತೆಗಳ ಅಂತಿಮ ತೀರ್ಪು ಕೈಗೊಳ್ಳಲಾಗುವುದು.
    • ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಜಿಲ್ಲಾಮಟ್ಟಕ್ಕೆ ಪ್ರಥಮ ಬಹುಮಾನವಾಗಿ ಖಾರ ತಿನಿಸು ಅಥವಾ ಸಿಹಿ ತಿನಿಸಿಗೆ ತಲಾ 5 ಸಾವಿರ ರೂ. ಬಹುಮಾನವಿರುತ್ತದೆ.
    • ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
    • ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ತಾವೇ ತೆಗೆದುಕೊಂಡು, ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಖುದ್ದಾಗಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ಧರಾಗಿರಬೇಕು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top