Connect with us

competition; ಉತ್ತಮ ಬೆಳೆ ಬೆಳೆದಿದ್ದೀರಾ ಹಾಗಿದ್ದರೆ ಸ್ಪರ್ಧೆಗೆ ತನ್ನಿ | ರೈತರಿಂದ ಅರ್ಜಿ ಆಹ್ವಾನ

ಮುಖ್ಯ ಸುದ್ದಿ

competition; ಉತ್ತಮ ಬೆಳೆ ಬೆಳೆದಿದ್ದೀರಾ ಹಾಗಿದ್ದರೆ ಸ್ಪರ್ಧೆಗೆ ತನ್ನಿ | ರೈತರಿಂದ ಅರ್ಜಿ ಆಹ್ವಾನ

CHITRADURGA NEWS | 28 AUGUST 2024

ಚಿತ್ರದುರ್ಗ: 2024-25ನೇ ಸಾಲಿನ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ(crop) ಸ್ಪರ್ಧೆ(competition)ಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಕ್ಲಿಕ್ ಮಾಡಿ ಓದಿ: Internal reservation; ಒಳಮೀಸಲಾತಿ ಸುಪ್ರೀಂ ತೀರ್ಪಿಗೆ ಬದ್ಧ | ಸಿಎಂ ಸಿದ್ದರಾಮಯ್ಯ

ಕೃಷಿ ಇಲಾಖೆಯ ಕೆ.ಕಿಸಾನ್ ಪೋರ್ಟಲ್‌ನಲ್ಲಿ ನೂತನವಾಗಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆ ಅಳವಡಿಸಲಾಗಿರುತ್ತದೆ. ಸಿಟಿಜನ್ ಲಾಗಿನ್ ಅಥವಾ ಆರ್‌ಎಸ್‌ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ಸೇವಾ ಕೇಂದ್ರ, ಸ್ವತಃ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಕೆ.ಕಿಸಾನ್ ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಎಫ್‌ಐಡಿ, ಫಹಣಿ, ಆಧಾರ್ ಕಾರ್ಡ್, ಫೋಟೋ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್‌ಬುಕ್ ಪ್ರತಿಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಚಿತ್ರದುರ್ಗ ಜಿಲ್ಲಾ ಮಟ್ಟಕ್ಕೆ ಶೇಂಗಾ (ಮಳೆಯಾಶ್ರಿತ), ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕು ಮಟ್ಟಕ್ಕೆ ಮುಸುಕಿನ ಜೋಳ (ಮಳೆ ಆಶ್ರಿತ), ಹೊಸದುರ್ಗ ತಾಲ್ಲೂಕು ಮಟ್ಟಕ್ಕೆ ರಾಗಿ (ಮಳೆ ಆಶ್ರಿತ) ಹಾಗೂ ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಲೂರು ತಾಲ್ಲೂಕು ಮಟ್ಟಕ್ಕೆ ಶೇಂಗಾ (ಮಳೆ ಆಶ್ರಿತ) ಬೆಳೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕ್ಲಿಕ್ ಮಾಡಿ ಓದಿ: Court news: ದೇವಸ್ಥಾನದ ಹುಂಡಿ, ಮನೆಗಳ್ಳತನ ಮಾಡಿದ್ದ ಕಳ್ಳರಿಗೆ 3 ವರ್ಷ ಜೈಲು

ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿಗೆ, ಪ್ರಥಮ ರೂ.30000, ದ್ವಿತೀಯ ರೂ.25000, ತೃತೀಯ ರೂ.20000 ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗೆ ಪ್ರಥಮ ರೂ.15000, ದ್ವಿತೀಯ ರೂ.10000 ಮತ್ತು ತೃತೀಯ ರೂ.5000 ಇರುವುದರಿಂದ ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಸಕ್ತ ಸಾಲಿನಿಂದ ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕ ರದ್ದುಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version